Amphicar : ನೀರಿನ ಮೇಲೂ ಚಲಿಸುತ್ತೆ ಈ ಕಾರು : 2ನೇ ಮಹಾಯುದ್ದಕ್ಕೆ ಮೊದಲು ಸಿದ್ದವಾಗಿತ್ತು ಆಂಫಿಕಾರ್‌

  • ಸುಶ್ಮಿತಾ ಸುಬ್ರಹ್ಮಣ್ಯ

ರಸ್ತೆಯ ಮೇಲೆ ಚಲಿಸುವ ಕಾರುಗಳು ಮಾತ್ರವಲ್ಲದೆ ಭವಿಷ್ಯದಲ್ಲಿ ಆಕಾಶ ಹಾರುವ ಹಾಗೂ ನೀರಿನಲ್ಲಿ ಚಲಿಸುವ ಕಾರುಗಳು ಸಹ ಉತ್ಪಾದನೆಯಾಗಲಿವೆ. ಈಗಾಗಲೇ ಪ್ರತಿ ಗಂಟೆಗೆ 400 ಕಿ.ಮೀ ವೇಗದಲ್ಲಿ ಚಲಿಸುವ ಕಾರುಗಳು ಉತ್ಪಾದನೆಯಾಗಿವೆ. ಈ ಹಿನ್ನೆಲೆಯಲ್ಲಿ ಆಕಾಶದಲ್ಲಿ ಹಾರುವ ಕಾರುಗಳು ಹಾಗೂ ನೀರಿನ ಮೇಲೆ ತೇಲುವ ಕಾರುಗಳು ಉತ್ಪಾದನೆ ಯಾಗುವ ಸಮಯ ದೂರವಿಲ್ಲ.

ನೀರಿನಲ್ಲಿ ತೇಲುವ ಕಾರು ನಿಮಗೆ ಅಚ್ಚರಿ ಅನಿಸಬಹುದು. ಆದರೆ ಎರಡನೇಯ ಮಹಾಯುದ್ಧದ ಸಂದರ್ಭದಲ್ಲಿಯೇ ತೇಲುವ ಕಾರನ್ನು ವಿನ್ಯಾಸಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈ ಯೋಜನೆಯಲ್ಲಿ ಜರ್ಮನಿ ಮೂಲದ ಕಂಪನಿಯೊಂದು ಭಾಗಿಯಾಗಿತ್ತು. ಯುದ್ಧ ಕಾಲದ ಅಗತ್ಯಗಳಿಗಾಗಿ ಭೂಮಿ ಹಾಗೂ ನೀರು ಎರಡರಲ್ಲೂ ಚಲಿಸಬಲ್ಲ ಕಾರುಗಳನ್ನು ಅಭಿವೃದ್ಧಿ ಪಡಿಸಿದ ಮೊದಲ ಕಂಪನಿ ಇದಾಗಿದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕೆಲವು ಜರ್ಮನ್ ಕಂಪನಿಗಳು ಇಂತಹ ದ್ವಿ ಉದ್ದೇಶದ ವಾಹನಗಳನ್ನುಅಭಿವೃದ್ಧಿ ಪಡಿಸುತ್ತಿದ್ದವು. ಆಂಫಿಕಾರ್ ಮಾಡೆಲ್ 770 ಕ್ಯಾಬ್ರಿಯೊಲೆಟ್ ಕಾರ್ ಅನ್ನು 1965 ರಲ್ಲಿ ನಿರ್ಮಿಸಲಾಯಿತು. ಈ ಕಾರ್ ಅನ್ನು ಜರ್ಮನಿಯ ಡಿಸೈನರ್ ಹ್ಯಾನ್ಸ್ ಟ್ರಿಪಲ್ ವಿನ್ಯಾಸಗೊಳಿಸಿದರು. ಈ ಕಾರಿನ ಹರಾಜು ಇದೇ ಆಗಸ್ಟ್ 13 ರಂದು ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಈ ವಾಹನವು ಹಿಂಭಾಗದಲ್ಲಿ 1147 ಸಿಸಿ, ಟ್ರಯಂಫ್ 4 ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಗರಿಷ್ಠ 47 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗ ಈ ಎಂಜಿನ್‌ನ ಪವರ್ ಉತ್ಪಾದಿಸುವ ಶಕ್ತಿ ಸ್ವಲ್ಪ ಕಡಿಮೆಯಾಗಿದೆ. ಆದರೆ ಈ ಎಂಜಿನ್ ಸುಮಾರು 56 ವರ್ಷಗಳಷ್ಟು ಹಳೆಯದು. 1965 ರ ಆಂಫಿಕಾರ್ ಮಾಡೆಲ್ 770 ಕ್ಯಾಬ್ರಿಯೊಲೆಟ್ ಕಾರು 4 ಸ್ಪೀಡ್ ಗೇರ್ ಬಾಕ್ಸ್ ರೇರ್ ವ್ಹೀಲ್ ಡ್ರೈವ್ ಸಿಸ್ಟಂನಿಂದ ನಿಯಂತ್ರಿಸಲ್ಪಡುತ್ತದೆ. ರಸ್ತೆಯಲ್ಲಿ ಸಂಚರಿಸಲು ಇದನ್ನು ಬಳಸಲಾಗುತ್ತದೆ.

ನೀರಿನಲ್ಲಿ ಚಲಿಸಲು ಎರಡು ಪ್ರೊಪೆಲ್ಲರ್ ಗಳನ್ನು ಒದಗಿಸಲಾಗಿದೆ. ಇವುಗಳು ಹೆಚ್ಚು ತೂಕದೊಂದಿಗೆ ಕಾರು ನೀರಿನಲ್ಲಿ ತೇಲಲು ನೆರವಾಗುತ್ತವೆ. ರಸ್ತೆಯಲ್ಲಿ ಚಾಲನೆ ಮಾಡಲು ಬಳಸುವ ಸ್ಟೀಯರಿಂಗ್ ವ್ಹೀಲ್ ಅನ್ನೇ ನೀರಿನ ಮೇಲೆ ಚಲಿಸುವುದಕ್ಕೂ ಸಹ ಬಳಸಲಾಗುತ್ತದೆ. ನೀರಿನ ಮೂಲಕ ಚಲಿಸುವಾಗ ಈ ವಾಹನವು ಪ್ರಯಾಣದ ದಿಕ್ಕನ್ನು ಬದಲಿಸಲು ವ್ಹೀಲ್ ಗಳನ್ನು ಬಳಸುತ್ತದೆ. ಈ ಕಾರು ರಸ್ತೆಯಲ್ಲಿ 70 ಎಂಪಿಹೆಚ್ ವೇಗದಲ್ಲಿ ಚಲಿಸಿದರೆ, ನೀರಿನ ಮೇಲೆ 7 ಎಂಪಿಹೆಚ್ ವೇಗದಲ್ಲಿ ಚಲಿಸುತ್ತದೆ.

ಈ ವಾಹನದ ಗರಿಷ್ಠ ವೇಗ ನೀರಿನ ಮೇಲೆ 7 ಎಂಪಿಹೆಚ್ ಹಾಗೂ ರಸ್ತೆಯ ಮೇಲೆ 70 ಎಂಪಿಹೆಚ್ ಆಗಿರುವ ಕಾರಣಕ್ಕೆ ಈ ಕಾರಿಗೆ 770 ಎಂದು ಹೆಸರಿಡಲಾಗಿದೆ. ಆಂಫಿಕಾರ್ ಮಾಡೆಲ್ 770 ಕ್ಯಾಬ್ರಿಯೊಲೆಟ್ ಕಾರ್ ಅನ್ನು 1961 ರಿಂದ 1968 ರವರೆಗೆ ಉತ್ಪಾದಿಸಲಾಗುತ್ತಿತ್ತು. ಈ 7 ವರ್ಷಗಳಲ್ಲಿ ಆಂಫಿಕಾರ್ ಮಾಡೆಲ್ 770 ಕಾರಿನ ಒಟ್ಟು 4,000 ಯುನಿಟ್’ ಗಳನ್ನು ಮಾರಾಟ ಮಾಡಲಾಗಿದೆ.

ಈ ಕಾರಿನ ಹರಾಜು ಬೆಲೆ 40,000 ಡಾಲರ್ ನಿಂದ 50,000 ಡಾಲರ್ ಗಳವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರ ಮೌಲ್ಯ ಭಾರತದ ರೂಪಾಯಿಗಳಲ್ಲಿ ಸುಮಾರು ರೂ. 30 ಲಕ್ಷಗಳಿಂದ ರೂ. 37 ಲಕ್ಷಗಳಾಗಲಿದೆ. ಈ ಕಾರು ನೀರಿನ ಮೇಲೂ ಚಲಿಸಬಹುದು ಎನ್ನುವುದು ಇದಕ್ಕೆ ಕಾರಣ. ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿರುವ ಅಮೆರಿಕಾ ಕಂಪನಿಯು ಈ ಕಾರ್ ಅನ್ನು ನೀರಿಗೆ ಇಳಿಸುವ ಮುನ್ನ ನೀರಿನ ಸಾಂದ್ರತೆಯನ್ನು ಅಳೆಯುವುದು ಅಗತ್ಯ ಎಂದು ಹೇಳಿದೆ.

ಇದನ್ನೂ ಓದಿ : Flying Car : ನನಸಾಗುತ್ತಿದೆ ಹಾರುವ ಕಾರಿನ ಕನಸು : ಆಕಾಶದಲ್ಲಿ ಹಾರಾಡಿತು ಕಾರು ..!!!

ಇದನ್ನೂ ಓದಿ : ಸಖತ್‌ ವೈರಲ್‌ ಆಯ್ತು ವೃದ್ದದಂಪತಿಗಳ ಪೋಟೋ ಶೂಟ್‌

Comments are closed.