Priyankaupendra: ಫೈಟಿಂಗ್ ಅಖಾಡಕ್ಕೆ ಹೂವೇ ಹೂವೇ ಬೆಡಗಿ…! ಪ್ರಿಯಾಂಕಾ ರಿಯಲ್ ಅವತಾರಕ್ಕೆ ಉಪ್ಪಿ ಮೆಚ್ಚುಗೆ…!!

ಬೆಂಗಾಳಿ ಬೆಡಗಿ ಪ್ರಿಯಾಂಕಾ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ. ಸದಾ ಹಸನ್ಮುಖಿ ಪ್ರಿಯಾಂಕಾ ಉಗ್ರ ರೂಪ ತಳೆದು ಚಂದನವನಕ್ಕೆ ತಮ್ಮ ಹೊಸಾವತಾರ ತೋರಿದ್ದಾರೆ.

ಅಳೆದು ತೂಗಿ ಚಿತ್ರ ಆಯ್ಕೆ ಮಾಡೋ ಪ್ರಿಯಾಂಕಾ ಉಪೇಂದ್ರ್ ನಟಿಯಾಗಿ ಮಾತ್ರವಲ್ಲ, ಉತ್ತಮ ಗೃಹಿಣಿ,ತಾಯಿಯಾಗಿ ಮಿಂಚಿದ್ದಾರೆ. ಈಗ ತಮ್ಮ ಮಾಸ್ ಲುಕ್ ನ್ನೂ ಸ್ಯಾಂಡಲ್ ವುಡ್ ಗೆ ತೋರಿಸೋಕೆ ಸಿದ್ಧವಾಗಿದ್ದಾರೆ.

ಉಗ್ರಾವತಾರ ನಾಯಕಿ ಪ್ರಧಾನ ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೇವಲ ಖಡಕ್ ಖಾಕಿಯಾಗಿ ಮಾತ್ರವಲ್ಲ ಮಾಸ್ ಹೀರೋಗಳಂತೆ ಫೈಟ್ ಮಾಡೋ ಮೂಲಕ ಪ್ರಿಯಾಂಕಾ ನಾನು ಯಾರಿಗೂ ಕಮ್ಮಿ ಇಲ್ಲ ಎಂದಿದ್ದಾರೆ.ನೆಲಮಂಗಲ ರೆಸಾರ್ಟ್ ವೊಂದರಲ್ಲಿ ಹಾಕಲಾದ‌ ಸೆಟ್ ನಲ್ಲಿ ಫೈಟಿಂಗ್ ಸೀನ್ ನಡೆದಿದ್ದು, ಉಪೇಂದ್ರ್ ಖಡಕ್ ಪೊಲೀಸ್ ಡ್ರೆಸ್ ನಲ್ಲಿ ಮಸ್ತ್ ಮಸ್ತ್ ಫೈಟ್ ಮಾಡಿದ್ದಾರೆ‌.

ಫೈಟ್ ಮಾಸ್ಟರ್ ವಿನೋದ್ ನಿರ್ದೇಶನದಲ್ಲಿ ಪ್ರಿಯಾಂಕಾ ಕ್ಲೈಮ್ಯಾಕ್ಸ್ ಫೈಟ್ ನೋಡಿ ಪತಿ ಉಪೇಂದ್ರ ಕೂಡ ಶಾಕ್ ಆಗಿದ್ದಾರಂತೆ.ಗುರು ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.

Comments are closed.