ಕರ್ನಾಟಕ ಸರಕಾರ ರಾಜ್ಯದಲ್ಲಿ ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಸಲುವಾಗಿ ಶಕ್ತಿ ಯೋಜನೆ (Shakti Yojana) ಯನ್ನು ಜಾರಿಗೆ ತಂದಿದೆ. ಕಳೆದ ಐದು ತಿಂಗಳಿ ನಿಂದಲೂ ಲಕ್ಷಾಂತರ ಮಂದಿ ಮಹಿಳೆಯರು ಉಚಿತ ಬಸ್ ಪ್ರಯಾಣ ಕೈಗೊಂಡಿದ್ದಾರೆ. ಉಚಿತ ಪ್ರಯಾಣಕ್ಕೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸಲಾಗುತ್ತಾ ಅನ್ನೋ ಕುರಿತ ಮಾಹಿತಿ ಇಲ್ಲಿದೆ.
ಶಕ್ತಿಯೋಜನೆ ಆರಂಭಗೊಂಡ ನಂತರದಲ್ಲಿ ಮಹಿಳೆಯರು ಸರಕಾರಿ ಸಾಮಾನ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಬೆಳೆಸುತ್ತಿದ್ದಾರೆ. ಆಧಾರ್ ಕಾರ್ಡ್ ಸೇರಿದಂತೆ ಸರಕಾರ ನೀಡಿರುವ ದಾಖಲೆಗಳನ್ನು ತೋರಿಸಿ ಮಹಿಳೆಯರು ಬಸ್‌ಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಅದ್ರಲ್ಲೂ ಶಕ್ತಿ ಯೋಜನೆ ಆರಂಭಗೊಂಡ ನಂತರದಲ್ಲಿ ಸರಕಾರಿ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಕರ ಸಂಖ್ಯೆ ಏರಿಕೆ ಆಗಿದೆಯಂತೆ.

ಕರ್ನಾಟಕ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದಾದ್ಯಂತ ಈಗಾಗಲೇ ಸಂಚಾರ ನಡೆಸುತ್ತಿದ್ದಾರೆ. ಸದ್ಯ ಆಧಾರ್ ಕಾರ್ಡ್, ಓಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಸರಕಾರದ ದಾಖಲೆಗಳನ್ನು ತೋರಿಸಿ ಉಚಿತ ಪ್ರಯಾಣ ನಡೆಸಲಾಗುತ್ತಿದೆ. ಆದರೆ ಸರಕಾರ ಬಸ್ಸುಗಳಲ್ಲಿ ಸಂಚಾರಕ್ಕೆ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸುವುದಾಗಿ ತಿಳಿಸಿತ್ತು.
ಇದನ್ನೂ ಓದಿ : 11.5 ಕೋಟಿ ಪ್ಯಾನ್ ಕಾರ್ಡ್ ರದ್ದು : ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಿದೆಯಾ ? ಯಾವುದಕ್ಕೂ ಒಮ್ಮೆ ಪರಿಶೀಲಿಸಿ
ಆರಂಭದಲ್ಲಿ ಮೂರು ತಿಂಗಳ ಒಳಗಾಗಿ ಸ್ಮಾರ್ಟ್ ಕಾರ್ಡ್ ಜಾರಿಗೆ ತರಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿತ್ತು. ಆದರೆ ಯೋಜನೆ ಆರಂಭಗೊಂಡು ಐದು ತಿಂಗಳು ಕಳೆದರೂ ಕೂಡ ಸ್ಮಾರ್ಟ್ ಕಾರ್ಡ್ ಜಾರಿಗೆ ಬಂದಿಲ್ಲ. ಅಲ್ಲದೇ ಸ್ಮಾರ್ಟ್ ಕಾರ್ಡ್ ಜಾರಿಯ ಕುರಿತು ಯಾವುದೇ ಅಪ್ಡೇಟ್ಸ್‌ಗಳನ್ನು ಸರಕಾರ ಕೊಟ್ಟಿಲ್ಲ.
ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊಸ ರೂಲ್ಸ್ ಜಾರಿಗೆ ತಂದಿದೆ. ಈ ಹಿಂದೆ ಆಧಾರ್ ಕಾರ್ಡ್ ಮೂಲ ಪ್ರತಿಯನ್ನು ನೀಡಬೇಕು ಎಂಬ ನಿಯಮ ಜಾರಿಗೊಳಿಸಲಾಗಿತ್ತು. ಆದರೆ ಈ ನಿಯಮ ಜಾರಿಗೆ ಬಂದ ಬೆನ್ನಲ್ಲೇ ಕೆಲವು ಕಡೆಗಳಲ್ಲಿ ಮಹಿಳೆಯರು ಹಾಗೂ ನಿರ್ವಾಹಕರ ನಡುವೆ ಕಿರಿಕಿರಿ ಉಂಟಾಗಿತ್ತು. ಈ ನಡುವಲ್ಲೇ ಸರಕಾರ ಮಹಿಳೆಯರಿಗೆ ಗುಡ್‌ನ್ಯೂಸ್ ಕೊಟ್ಟಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಪಡೆಯುವುದು ಇನ್ನಷ್ಟು ಸುಲಭ : ಗೃಹಿಣಿಯರಿಗೆ ಗುಡ್‌ನ್ಯೂಸ್ ಜಾರಿಯಾಯ್ತು ಹೊಸ ರೂಲ್ಸ್
ಸರಕಾರ ಜಾರಿಗೆ ತಂದಿರುವ ಹೊಸ ರೂಲ್ಸ್ ಪ್ರಕಾರ ಮಹಿಳೆಯರು ಇನ್ಮುಂದೆ ಆಧಾರ್ ಕಾರ್ಡ್ ಸೇರಿದಂತೆ ಸರಕಾರ ದಾಖಲೆಗಳ ಮೂಲಪ್ರತಿಯನ್ನು ಇನ್ಮುಂದೆ ಬಸ್ ನಿರ್ವಾಹಕರಿಗೆ ತೋರಿಸುವ ಅಗತ್ಯವಿಲ್ಲ. ಬದಲಾಗಿ ಆಧಾರ್ ಸೇರಿದಂತೆ ಸರಕಾರ ನೀಡಿರುವ ಯಾವುದೇ ದಾಖಲೆಯ ಪೋಟೋ ಕಾಫಿಯನ್ನು ತೋರಿಸಿಯೂ ಪ್ರಕಾಣ ಬೆಳೆಸಬಹುದಾಗಿದೆ.
ನೀವು ಆಧಾರ್ ಕಾರ್ಡ್, ಓಟರ್ ಐಡಿ, ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನ ಮೂಲ ಪ್ರತಿಯ ಬದಲು, ಮೊಬೈಲ್‌ನಲ್ಲಿ ಇರಿಸಿಕೊಂಡಿರುವ ದಾಖಲೆಯ ಪೋಟೋ ಕಾಫಿಯನ್ನು ನೀಡಿದ್ರೂ ಕೂಡ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಸ್‌ಗಳ ನಿರ್ವಾಹಕರು ಇನ್ಮುಂದೆ ಮೂಲ ಪ್ರತಿಯನ್ನು ಕೇಳುವಂತಿಲ್ಲ.
ಇದನ್ನೂ ಓದಿ : ಮೂರು ತಿಂಗಳು ಕಳೆದರೂ ಗೃಹಲಕ್ಷ್ಮೀ ಹಣ ಬರುತ್ತಿಲ್ಲವೇ..? ನೀವು ಮಾಡಬೇಕಾಗಿರೋದು ಇಷ್ಟು
ಸರಕಾರ ಹೊರಡಿಸಿರುವ ಈ ನಿಯಮವನ್ನು ಉಲ್ಲಂಘಿಸಿ ಮೂಲಪ್ರತಿ ಇಲ್ಲದವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸದೇ ಇದ್ದಲ್ಲಿ, ಅಂತಹ ನಿರ್ವಾಹಕರ ವಿರುದ್ದ ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆಯಿದೆ. ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಹೊಸ ರೂಲ್ಸ್ ವರದಾನವಾಗಿ ಪರಿಣಮಿಸುವ ಸಾಧ್ಯತೆಯಿದೆ.
Shakti Yojana New Updates for women’s free Bus Travel in Karnataka