ಗೃಹಲಕ್ಷ್ಮೀ ಯೋಜನೆ ಹಣ ಪಡೆಯುವುದು ಇನ್ನಷ್ಟು ಸುಲಭ : ಗೃಹಿಣಿಯರಿಗೆ ಗುಡ್‌ನ್ಯೂಸ್‌ ಜಾರಿಯಾಯ್ತು ಹೊಸ ರೂಲ್ಸ್‌

ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್‌ ಇಲ್ಲಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme)  ಅಡಿಯಲ್ಲಿ ಲಾಭವನ್ನು ಪಡೆಯುತ್ತಿರುವ ಹಾಗೂ ಇನ್ನೂ ಗೃಹಲಕ್ಷ್ಮೀ ಯೋಜನೆಯಡಿ ಹಣ ಪಡೆಯದೇ ಇರುವ ಗೃಹಿಣಿಯರಿಗೂ ಅನುಕೂಲಕರವಾಗಲಿದೆ.

ಕರ್ನಾಟಕ ಸರಕಾರ (karnataka Govenment) ಮಹಾತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್‌ ಇಲ್ಲಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme)  ಅಡಿಯಲ್ಲಿ ಲಾಭವನ್ನು ಪಡೆಯುತ್ತಿರುವ ಹಾಗೂ ಇನ್ನೂ ಗೃಹಲಕ್ಷ್ಮೀ ಯೋಜನೆಯಡಿ ಹಣ ಪಡೆಯದೇ ಇರುವ ಗೃಹಿಣಿಯರಿಗೂ ಅನುಕೂಲಕರವಾಗಲಿದೆ.

ರಾಜ್ಯ ಸರಕಾರ ರಾಜ್ಯದಲ್ಲಿನ ಪ್ರತೀ ಕುಟುಂಬ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಈ ಯೋಜನೆಯಿಂದಾಗಿ ಕರ್ನಾಟಕ ರಾಜ್ಯದ ಕೋಟಿಗೂ ಅಧಿಕ ಮಹಿಳೆಯರಿಗೆ ವರದಾನವಾಗಿ ಪರಿಣಮಿಸಿದೆ. ಈ ನಡುವಲ್ಲೇ ಸರಕಾರ ಹೊಸ ವ್ಯವಸ್ಥೆಯನ್ನು ಕಲ್ಪಿಸಿದೆ.

Gruha Lakshmi Scheme New Rules Karnataka Government getting money is easier
Image Credit to Original Source

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮಹಿಳೆಯ ಖಾತೆಗೆ ಹಣ ವರ್ಗಾವಣೆ ಮಾಡುವ ಸಲುವಾಗಿ ರಾಜ್ಯ ಸರಕಾರ ಹೊಸ ವಿಧಾನವನ್ನು ಅನುಸರಿಸಿದೆ. ಈ ಹೊಸ ವಿಧಾನವು ಮಹಿಳೆಯರಿಗೆ ಈಗ ಇನ್ನಷ್ಟು ಸುಲಭವಾಗಿ ಹಣ ದೊರೆಯಲಿದೆ. ಅಲ್ಲದೇ ಪ್ರತೀ ತಿಂಗಳ ನಿಗದಿತ ದಿನಾಂಕದಂದು ಹಣ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಬರ್ತಿಲ್ಲ ಯಾಕೆ ? ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಅಸಲಿ ಕಾರಣ

ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಒಟ್ಟು 1.9 ಕೋಟಿ ಗೃಹಿಣಿಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ವರ್ಗಾವಣೆ ಆಗಿದೆ ಎಂದು ಖುದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಕೂಡ ಹಣವನ್ನು ವರ್ಗಾವಣೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.

ರಾಜ್ಯ ಸರಕಾರದ ಬಳಿಯಲ್ಲಿ ಹಣವಿಲ್ಲ. ಇದೇ ಕಾರಣಕ್ಕೆ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಕೆಲವರಿಗೆ ಹಣವನ್ನು ವರ್ಗಾವಣೆ ಮಾಡಿಲ್ಲ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಸರಕಾರ ಗೃಹಲಕ್ಷ್ಮೀ ಯೋಜನೆಗೆ ಹಣವನ್ನು ಮೀಸಲಿಟ್ಟಿದೆ. ಆದ್ರೆ ತಾಂತ್ರಿಕ ಸಮಸ್ಯೆಯಿಂದ ಮಾತ್ರವೇ ಹಣವರ್ಗಾವಣೆ ಆಗಿಲ್ಲ ಎಂದಿದ್ದರು.

ಇದನ್ನೂ ಓದಿ : ಗೃಹಲಕ್ಷ್ಮೀ ಬೆನ್ನಲ್ಲೇ, ಗೃಹಿಣಿಯರಿಗೆ ಉಚಿತವಾಗಿ ಸಿಗಲಿದೆ 50 ಸಾವಿರ ರೂ.

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಒಟ್ಟು 1.9 ಕೋಟಿ ಜನರಿಗೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ತಲುಪಿಸಲಾಗಿದೆ. ಉಳಿದಂತೆ 5 ರಿಂದ 6 ಲಕ್ಷ ಜನರಿಗೆ ಯೋಜನೆಯ ಲಾಭವನ್ನು ದೊರಕಿಸಿ ಕೊಡಬೇಕಾಗಿದೆ. ತಾಂತ್ರಿಕ ದೋಷವನ್ನು ಶೀಘ್ರದಲ್ಲಿಯೇ ಸರಿ ಪಡಿಸಿ ಎಲ್ಲರಿಗೂ ಯೋಜನೆಯ ಲಾಭ ದೊರೆಯಲಿದೆ ಎಂದು ಖುದ್ದು ಸಚಿವೆ ತಿಳಿಸಿದ್ದಾರೆ.

Gruha Lakshmi Scheme New Rules Karnataka Government getting money is easier
Image Credit to Original Source

ರಾಜ್ಯದಲ್ಲಿ ಸುಮಾರು 15 ಲಕ್ಷ ಜನರು ಆಧಾರ್ ಲಿಂಕ್ ಇಲ್ಲದೆ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದರು. ಇಂತವರಿಗೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಜಮೆ ಮಾಡಲು ವಿಳಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : Shakti Scheme : ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ : ಮಹಿಳೆಯರಿಗೆ ಸರಕಾರದ ಗುಡ್‌ನ್ಯೂಸ್‌

ಒಂದೊಮ್ಮೆ ಇದುವರೆಗೂ ಕೂಡ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿ ಆಗದೇ ಇದ್ರೆ ನೀವು ಕೂಡಲೇ ನಿಮ್ಮ ಸಮೀಪದಲ್ಲಿರುವ ಸಿಡಿಪಿಓ ಅಧಿಕಾರಿಗಳು ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಖುದ್ದು ಸಂಪರ್ಕಿಸಬಹುದಾಗಿದೆ. ಆದರೆ ಕಚೇರಿಗೆ ಭೇಟಿ ನೀಡುವ ವೇಳೆಯಲ್ಲಿ ನಿಮ್ಮ ಕೈಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ರಶೀದಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ಪ್ರತಿ ಇರುವುದು ಕಡ್ಡಾಯ.

Gruha Lakshmi Scheme New Rules Karnataka Government getting money is easier

Comments are closed.