IPL 2022 CSK TEAM : ದೀಪಕ್‌ ಚಹರ್‌ ಬದಲು ಚೆನ್ನೈ ತಂಡ ಸೇರ್ತಾರಾ ಇಶಾಂತ್‌ ಶರ್ಮಾ, ಸಂದೀಪ್‌ ವಾರಿಯರ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2022) ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ (CSK TEAM) ದೀಪಕ್‌ ಚಹರ್‌ ಗಾಯಗೊಂಡಿರುವುದು ಬಾರೀ ಹೊಡೆತವನ್ನು ಕೊಟ್ಟಿದೆ. ಈ ಹಿನ್ನೆಲೆಯಲ್ಲೀಗ ಚೆನ್ನೈ ಬದಲಿ ಆಟಗಾರರ ನೇಮಕಕ್ಕೆ ಮುಂದಾಗಿದೆ. ಭಾರತ ತಂಡದ ವೇಗದ ಬೌಲರ್‌ ಇಶಾಂತ್‌ ಶರ್ಮಾ ಹಾಗೂ ಸಂದೀಪ್‌ ವಾರಿಯರ್‌ ಐಪಿಎಲ್‌ನಲ್ಲಿ ಚೆನ್ನೈ ತಂಡ ಸೇರುವ ಸಾಧ್ಯತೆಯಿದೆ.ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ T20I ನಲ್ಲಿ ದೀಪಕ್ ಚಹಾರ್ ಬಲ ಕ್ವಾಡ್ರೈಸ್ಪ್ಸ್ ಗಾಯಕ್ಕೆ ಒಳಗಾಗಿದ್ದರು. ಇದೇ ಕಾರಣಕ್ಕೆ ಶ್ರೀಲಂಕಾ ವಿರುದ್ಧದ T20I ಸರಣಿಯಿಂದ ಹೊರಗುಳಿದಿದ್ದರು. ಬೌಲಿಂಗ್ ಆಲ್‌ರೌಂಡರ್ ಹೆಚ್ಚಿನ ನಿರ್ವಹಣೆ ಮತ್ತು ಗಾಯದಿಂದ ಚೇತರಿಸಿಕೊಳ್ಳಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿದ್ದಾರೆ. ಐಪಿಎಲ್ 2022 ರ ದೀಪಕ್ ಚಹಾರ್ ಬದಲಿಗೆ ಇಶಾಂತ್ ಶರ್ಮಾ ಅಥವಾ ಸಂದೀಪ್ ವಾರಿಯರ್ ಚೆನ್ನೈ ಸೂಪರ್ ಕಿಂಗ್ಸ್ (CSK) ಗೆ ಪ್ರವೇಶಿಸಬಹುದು ಎಂದು ಕೆಲವು ವರದಿಗಳು ಹೇಳುತ್ತೀವೆ.

ಇಶಾಂತ್ ಶರ್ಮಾ ಕಳೆದ ಒಂದು ದಶಕದಿಂದಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಶಾಂತ್ ಶರ್ಮಾ ಐಪಿಎಲ್‌ನಲ್ಲಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಟಿ 20 ಕ್ರಿಕೆಟ್‌ನ ಅನುಭವಿ ಆಟಗಾರ. ಹೀಗಾಗಿ ಇಶಾಂತ್‌ ಶರ್ಮಾ ದೀಪಕ್‌ ಚಹರ್‌ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ. ಈ ಹಿಂದೆ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸುವ ನಿರೀಕ್ಷೆಯಿತ್ತು. ಆದರೆ ಈ ಬಾರಿಯ ಐಪಿಎಲ್‌ ಮೆಗಾ ಹರಾಜಿನಲ್ಲಿ ಅವರನ್ನು ಯಾವುದೇ ತಂಡವೂ ಖರೀದಿ ಮಾಡಿರಲಿಲ್ಲ. ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಜೊತೆಗೆ ಸಾಕಷ್ಟು ವರ್ಷಗಳ ಕಾಲ ಆಡಿರುವ ಅನುಭವ ಹೊಂದಿರುವ ಇಶಾಂತ್‌ ಶರ್ಮಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿಸುವ ಸಾಧ್ಯತೆಯಿದೆ.

ಇನ್ನೊಂದೆಡೆಯಲ್ಲಿ ಯುವ ವೇಗದ ಬೌಲರ್ ಸಂದೀಪ್ ವಾರಿಯರ್ ಅವರು 2021 ರಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕಾಗಿ ತಮ್ಮ T20I ಚೊಚ್ಚಲ ಪಂದ್ಯ ಆಡಿದ್ದರು. ಆದ್ರೆ ಗಾಯದ ಸಮಸ್ಯೆಯಿಂದಾಗಿ ಮತ್ತೆ ರಾಷ್ಟ್ರೀಯ ತಂಡವನ್ನು ಸೇರ್ಪಡೆಯಾಗಿಲ್ಲ. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಸಂದೀಪ್‌ ವಾರಿಯರ್‌ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಒಂದೊಮ್ಮೆ ಇಶಾಂತ್‌ ಶರ್ಮಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಆಯ್ಕೆ ಮಾಡದೇ ಇದ್ರೆ ಸಂದೀಪ್‌ ವಾರಿಯರ್‌ ಉತ್ತಮ ಆಯ್ಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2022 Deepak Chahar : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಬಿಗ್‌ ಶಾಕ್‌ : ದೀಪಕ್‌ ಚಹರ್‌ ಐಪಿಎಲ್‌ನಿಂದ ಔಟ್‌

ಇದನ್ನೂ ಓದಿ : IPL 2022 Full Schedule : 10 ತಂಡ,74 ಪಂದ್ಯ : ಇಲ್ಲಿದೆ ಐಪಿಎಲ್ 2022ರ ಪೂರ್ಣ ವೇಳಾಪಟ್ಟಿ

ಇದನ್ನೂ ಓದಿ : Shreyas Iyer MS Dhoni : IPL 2022ನಲ್ಲಿ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗ್ತಿದ್ದಾರೆ ಶ್ರೇಯಸ್‌ ಅಯ್ಯರ್‌, ಎಂಎಸ್‌ ಧೋನಿ

Ishant Sharma, Sandeep Warrier can enter CSK for IPL 2022

Comments are closed.