Actor Chetan Granted Bail : ನ್ಯಾಯಾಂಗ ನಿಂದನೆ ಪ್ರಕರಣ : ನಟ ಚೇತನ್ ಗೆ ಜಾಮೀನು ಮಂಜೂರು

ಬೆಂಗಳೂರು : ನ್ಯಾಯಾಂಗ ನಿಂದನೆಯ ಕಾರಣಕ್ಕೆ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಗೆ (Actor Chetan Granted Bail) ಷರತ್ತುಬದ್ಧ ಜಾಮೀನು ಸಿಕ್ಕಿದೆ. 8 ನೇ ಎಸಿಎಂಎಂ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಹಿಜಾಬ್ ಪ್ರಕರಣ ವಿಚಾರಣಾ ಹಂತದಲ್ಲಿರುವಾಗಲೇ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಆಗಿ ನಟ ಚೇತನ್ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಶೇಷಾದ್ರಿಪುರಂ ಪೊಲೀಸರು ಚೇತನ್ ರನ್ನು ಬಂಧಿಸಿದ್ದರು. ಬಳಿಕ ಚೇತನ್ ರನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ತಕ್ಷಣ ನ್ಯಾಯಾಧೀಶರು ನಟ ಚೇತನ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು.

ನಟ ಚೇತನ್ ತಮ್ಮ ಎರಡು ವರ್ಷಗಳ ಹಿಂದಿನ ಟ್ವೀಟ್ ನನ್ನು ಮತ್ತೇ ರೀ ಟ್ವೀಟ್ ಮಾಡುವ ಮೂಲಕ ನ್ಯಾಯಮೂರ್ತಿಗಳ ವಿರುದ್ಧ ನಿಂದನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚೇತನ್ ಜೈಲು ಸೇರುವಂತಾಗಿತ್ತು. ಪತಿ ಹಾಗೂ ನಟ ಚೇತನ್ ರನ್ನು ತಮಗೆ ಮಾಹಿತಿ ನೀಡದೇ ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಚೇತನ್ ಪತ್ನಿ ಮೇಘಾ ಪೊಲೀಸರ ವಿರುದ್ಧ ಹರಿಹಾಯ್ದಿದ್ದರು. ಇದಾದ ಬಳಿಕ ನಗರ ಪೊಲೀಸರ ಆಯುಕ್ತರ ಮೊರೆಹೋಗಿದ್ದರು.ಅಲ್ಲದೇ ನನ್ನ ಪತಿಯ ಅಪಹರಣವಾಗಿದೆ ಎಂದು ಆರೋಪಿಸಿದ್ದರು.

ಬಳಿಕ ಚೇತನ್ ಜಾಮೀನಿಗಾಗಿ ನ್ಯಾಯವಾದಿ ಕೆ.ಬಾಲನ್ 8 ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಸರಕಾರಿ ಅಭಿಯೋಜಕರಿಗೆ ಅವಕಾಶ ನೀಡಿತ್ತು. ವಿಚಾರಣೆ ಆಲಿಸಿದ ನ್ಯಾಯಾಲಯ ಚೇತನ್ ಗೆ ಜಾಮೀನು ನೀಡಿದೆ. ಇದಕ್ಕೂ ಮುನ್ನ ಚೇತನ್ ಪರವಾಗಿ ಮಾತನಾಡಿದ್ದ ಪತ್ನಿ ಮೇಘಾ ಚೇತನ್ ಗಟ್ಟಿಯಾಗಿದ್ದಾರೆ. ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದರು.

ಇದಾದ ಬಳಿಕ ನಟ ಚೇತನ್ ಬೆಂಬಲಕ್ಕೆ ನಿಂತ ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಚೇತನ್ ಟ್ವೀಟ್ ನ್ನುರೀ ಟ್ವೀಟ್ ಮಾಡುವ ಮೂಲಕ ಬೆಂಬಲಿಸಿದ್ದರು.ಚೇತನ್ ಹಾಕಿದ್ದರಲ್ಲಿ ತಪ್ಪೇನಿದೆ. ಅದರಲ್ಲಿ ಅವರನ್ನು ಬಂಧಿಸುವಂತಹ ಯಾವುದೇ ಸಂಗತಿ ಇಲ್ಲವಲ್ಲ ಎಂದು ಬರೆದುಕೊಂಡಿದ್ದರು. ಈಗ ಬೇಲ್ ಪಡೆದು ನಟ ಚೇತನ್ ಜೈಲಿನಿಂದ ಹೊರಬಂದಿದ್ದು ತಮ್ಮ ಮೇಲಿನ ಪ್ರಕರಣ ಹಾಗೂ ಈ ಬಂಧನದ ಬಗ್ಗೆ ಏನು ಹೇಳ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಬಿಬಿಎಂಪಿ ಕೇಂದ್ರ ಕಚೇರಿ, ಸೇರಿ 27 ಕಚೇರಿ ಮೇಲೆ ಎಸಿಬಿ ದಾಳಿ

ಇದನ್ನೂ ಓದಿ : ಶಾರೂಖ್ ಖಾನ್ ಮಕ್ಕಳಿಗೆ ಕೈತುಂಬಾ ಕೆಲಸ; ಆರ್ಯನ್ ಖಾನ್ ಮುಂದಿನ ಗುರಿ ಸಿನಿಮಾ ನಿರ್ದೇಶನವಂತೆ

(Kannada Actor Chetan Has Been Granted Bail)

Comments are closed.