ದಾವಣಗೆರೆ : ಕೊರೊನಾ ನಡುವಲ್ಲೇ ಇದೀಗ ರಾಜ್ಯದಲ್ಲಿ ಮಿಸ್ಸಿ ರೋಗ ಆತಂಕ ಮೂಡಿಸಿದೆ. ಇದೀಗ ದಾವಣಗೆರೆಯಲ್ಲಿ 5 ವರ್ಷದ ಬಾಲಕಿಯೋರ್ವಳು ಮಿಸ್ಸಿ ರೋಗಕ್ಕೆ ಬಲಿಯಾಗಿದ್ದಾಳೆ.
ಕೊರೊನಾ ಎರಡನೇ ಅಲೆ ದಿನಕ್ಕೊಂದು ಹೊಸ ಅವಾಂತರವನ್ನು ಸೃಷ್ಟಿಸುತ್ತಿದೆ. ಡೆಲ್ಟಾ ಪ್ಲಸ್, ಬ್ಲ್ಯಾಕ್ ಫಂಗಸ್ ಜೊತೆಯಲ್ಲೇ ಕೋವಿಡ್ ನಿಂದ ಗುಣಮುಖರಾದ ಬಹುತೇಕ ಮಕ್ಕಳಲ್ಲಿ ಹಲವು ರೋಗಗಳು ಕಂಡುಬರುತ್ತಿದ್ದು, ಇದೀಗ ಮಿಸ್ಸಿ ರೋಗಕ್ಕೆ ಪುಟಾಣಿ ಬಾಲಕಿ ಯೋರ್ವಳನ್ನು ಬಲಿ ಪಡೆದಿದೆ.
ತುಮಕೂರಿನ ಶಿರಾದ 5 ವರ್ಷದ ಬಾಲಕಿಗೆ ಮಿಸ್ಸಿ ರೋಗ ಕಾಣಿಸಿ ಕೊಂಡಿತ್ತು. ಹೀಗಾಗಿ ಬಾಲಕಿಯನ್ನು ದಾವಣವೆರೆಯ ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಕಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿ ಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಹಲವು ಮಕ್ಕಳು ಈಗಾಗಲೇ ಮಿಸ್ಸಿ ರೋಗದಿಂದ ಬಳಲುತ್ತಿದ್ದು. ಕೆಲವು ಮಕ್ಕಳು ಈಗಾಗಲೇ ಗುಣಮುಖರಾಗಿದ್ದು, ಹಲವು ಮಕ್ಕಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.