Former CM Siddaramaiah : ಹಾಡಿನ ರೂಪದಲ್ಲಿ ಬರ್ತಿದೆ ಸಿದ್ಧು ಸಾಧನೆ: ಟಾಲಿವುಡ್ ಗಾಯಕ ಧ್ವನಿಯಲ್ಲಿ ಟಗರು ಗೀತೆ

ಕೋಲಾರ : ಸದ್ಯ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡ್ತಿರೋ ರಾಜಕಾರಣಿ ಸಿದ್ಧರಾಮಯ್ಯ. ಹಲವು ಭಾರಿ ಸಿಎಂ ಸ್ಥಾನಕ್ಕೇರಿದ ಸಿದ್ಧರಾಮಯ್ಯನವರು (Siddaramaiah Tagaru song) ಮತ್ತೊಮ್ಮೆ ಸಿಎಂ ಗದಿಗೆ ಮೇಲೆ ಕಣ್ಣಿಟ್ಟಿರೋದು ಬಹಿರಂಗ ಸತ್ಯ. ಈಗ ಸಿದ್ಧು ಸಾಧನೆಯನ್ನು ಬಣ್ಣಿಸೋಕೆ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದೇ ಹೋಗಿದ್ದು ಸಿದ್ಧು ಸಾಧನೆಯನ್ನು ಹಾಡಿನ ರೂಪದಲ್ಲಿ ತೆರೆಗೆ ತರಲು ಸಿದ್ಧವಾಗ್ತಿದ್ದಾರೆ.

ಸಿದ್ಧರಾಮಯ್ಯನವರು ಸಮರ್ಥ ಆಡಳಿತಗಾರರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸಿದ್ಧರಾಮಯ್ಯನವರ ಭಾಷಾ ಪ್ರೌಡಿಮೆ, ಭಾಷಾ ಜ್ಞಾನ, ಆರ್ಥಿಕತೆಯ ಬಗ್ಗೆ ಅವರಿಗಿರುವ ತಿಳುವಳಿಕೆ, ಬಜೆಟ್ ಮಂಡನೆಯ ಚಾಕಚಕ್ಯತೆಯನ್ನು ಪಕ್ಷಾತೀತವಾಗಿ ಎಲ್ಲರೂ ಶ್ಲಾಘಿಸುತ್ತಾರೆ.ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೊರೈಸಿದ ಸಿದ್ಧರಾಮಯ್ಯ ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿದ್ದರೂ ರಾಜ್ಯದಲ್ಲಿ ಅವರ ವರ್ಚಸ್ಸಿಗೆ ಕುಂದು ಉಂಟಾಗಿಲ್ಲ.

ಸದ್ಯ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದು ಶಾಸಕರಾಗೋ ಉತ್ಸಾಹದಲ್ಲಿ ಚುನಾವಣೆಗೆ ಸಿದ್ಧವಾಗ್ತಿರೋ ಸಿದ್ಧರಾಮಯ್ಯನವರು ಅನ್ನಭಾಗ್ಯ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ನೀಡಿದ್ದಾರೆ ಎಂಬ ಹೆಗ್ಗಳಿಕೆ ಇದೆ.ಹೀಗೆ ಸಿದ್ಧರಾಮಯ್ಯನವರ ಬಗ್ಗೆ ಇರೋ ಜನಪ್ರಿಯತೆಯನ್ನು ಇನ್ನಷ್ಟು ಪ್ರಚಾರಕ್ಕೆ ತರೋ ಉದ್ದೇಶದಿಂದ ಸಿದ್ಧರಾಮಯ್ಯ ಅಭಿಮಾನಿಗಳು ಸಿದ್ಧು ಜೀವನ ಚರಿತ್ರೆ, ಸಾಧನೆಯನ್ನು ಹಾಡಿನ ಮೂಲಕ ಪ್ರಚಾರಕ್ಕೆ ತರಲು ವಿಡಿಯೋ ಸಾಂಗ್ ವೊಂದನ್ನು ಸಿದ್ಧಪಡಿಸುತ್ತಿದ್ದಾರೆ.

ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಹೊರಬರಲಿರುವ ವಿಡಿಯೋಗಾಗಿ ಈಗಾಗಲೇ ಚಿತ್ರೀಕರಣ ಆರಂಭಗೊಂಡಿದ್ದು ಹೈದರಾಬಾದ್ ನಲ್ಲಿ ಶೂಟಿಂಗ್ ನಡೆದಿದೆ. ಹೈದರಾಬಾದ್ ನ ಉದ್ಯಮಿ ಹಾಗೂ ಸಿದ್ಧರಾಮಯ್ಯನವರ ಕಟ್ಟಾ ಅಭಿಮಾನಿ ಶ್ರೀಧರ ನಿರ್ಮಾಪಕತ್ವದಲ್ಲಿ ಹಾಡು ಸಿದ್ಧಗೊಳ್ಳುತ್ತಿದೆ.ಟಾಲಿವುಡ್ ನ ಹೆಸರಾಂತ ಗಾಯಕರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಸಿದ್ಧರಾಮಯ್ಯನವರ ಕುರಿತು ಸದ್ಯದಲ್ಲೇ ಭರ್ಜರಿ ಸಿನಿಮಾ ಕೂಡ ತೆರೆಗೆ ಬರಲಿದೆಯಂತೆ. ಇದರ ಮಧ್ಯೆ ಈಗ ಸಾಂಗ್ ವೊಂದು ಸಿದ್ಧವಾಗ್ತಿದ್ದು, ಸಿದ್ಧರಾಮಯ್ಯನವರ ಸಾಧನೆಗಳನ್ನು ಕೇಂದ್ರಿಕರಿಸಿ ಹಾಡನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ : Allegation against D.K.Sivakumar: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದಆರೋಪಗಳ ಸುರಿಮಳೆ‌ಗೈದ ಸಾಹುಕಾರ್‌ : ಏನೆಲ್ಲಾ ಆರೋಪಗಳಿವೆ ಗೊತ್ತಾ?

ಇದನ್ನೂ ಓದಿ : Audio released by Jarakiholi: ಡಿಕೆ ಶಿವಕುಮಾರ್ ಆಡಿಯೋ ರಿಲೀಸ್ ಮಾಡಿದ ರಮೇಶ್ ಜಾರಕಿಹೊಳಿ : ಆಡಿಯೋದಲ್ಲೇನಿದೆ ಗೊತ್ತಾ ?

ಇದನ್ನೂ ಓದಿ : ಸಿಎಂ ಸ್ಥಾನ ಉಳಿಸಿಕೊಳ್ಳಲು ಬೊಮ್ಮಾಯಿ ಕಸರತ್ತು: ಸ್ವಕ್ಷೇತ್ರಕ್ಕೆ ಅನುದಾನ, ಅಧಿಕಾರಿಗಳಿಗೆ ಹೊಣೆ

ಈಗಾಗಲೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ ಎಂಬಂತೆ ಅಭಿಮಾನಿಗಳು ಬಿಂಬಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಸಾಂಗ್ ಕೂಡ ತೆರೆಗೆ ಬರಲಿದ್ದು, ಸಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.ಇನ್ನು ರಾಜಕೀಯದಲ್ಲೂ ಅಚ್ಚರಿ ನಡೆಗಳನ್ನು ಪ್ರದರ್ಶಿಸುತ್ತಿರುವ ಮಾಜಿಸಿಎಂ ಸಿದ್ಧರಾಮಯ್ಯನವರು ಕಳೆದ ಭಾರಿ ಬಾದಾಮಿಯಿಂದ ಸ್ಪರ್ಧಿಸಿದ್ದರು. ಈ ಭಾರಿ ಕೋಲಾರದಿಂದ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Siddaramaiah Tagaru song: Sidhu feat in song form: Tagaru song in Tollywood singer’s voice

Comments are closed.