Samsung New Phones : ಫೆಬ್ರವರಿ 1ಕ್ಕೆ ಬಿಡುಗಡೆಯಾಗಲಿದೆ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಸರಣಿ ಸ್ಮಾರ್ಟ್‌ಫೋನ್‌ಗಳು

ದಕ್ಷಿಣ ಕೋರಿಯಾದ ಸ್ಮಾರ್ಟ್‌ಫೋನ್‌ (Smartphones) ತಯಾರಿಕಾ ಕಂಪನಿ ಸ್ಯಾಮ್‌ಸಂಗ್‌ ಫೆಬ್ರವರಿಯಲ್ಲಿ S23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು (Samsung New Phones ) ಬಿಡುಗಡೆ ಮಾಡಲು ಸಿದ್ಧವಾಗಿದೆ. ಬಿಡುಗಡೆ ಕಾರ್ಯಕ್ರಮವನ್ನು (Launching Event) ಕಂಪನಿಯು ರಾತ್ರಿ 11.30ಕ್ಕೆ ನಿಗದಿಪಡಿಸಿದೆ. ಅದು ಗ್ಯಾಲಕ್ಸಿ S23 ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳನ್ನು ಹೊರತರಲಿದೆ. ಅದು ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23, ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಪ್ಲಸ್‌, ಮತ್ತು ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಅಲ್ಟ್ರಾ ಫೋನ್‌ಗಳಾಗಿವೆ. ಇದರ ನಡುವೆ ಬಿಡುಗಡೆಯಾಗಲಿರುವ ಹೊಸ ಸ್ಮಾರ್ಟ್‌ಫೋನ್‌ಗಳ ಬೆಲೆಗಳು ಇಂಟರ್‌ನೆಟ್‌ನಲ್ಲಿ ಲೀಕ್‌ ಆಗಿದೆ. ಈ ಟಾಪ್‌ ಎಂಡ್‌ ಫೋನ್‌ಗಳನ್ನು ಎಷ್ಟು ರೂಪಾಯಿಯಲ್ಲಿ ಖರೀದಿಸಬಹುದು ಇಲ್ಲಿದೆ ಓದಿ.

ಬೆಲೆ ಎಷ್ಟಿರಬಹುದು?
ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಯ ಬೇಸ್‌ ಮಾಡಲ್‌ ಫೋನ್‌ನ ಬೆಲೆಯು ಅಂದಾಜು 79,999 ರೂ. ಆಗಲಿದೆ. ಈ ಮೊದಲು ತಿಳಿದು ಬಂದ ಮಾಹಿತಿಯ ಪ್ರಕಾರ 8ಜಿಬಿ RAM ಮತ್ತು 128ಜಿಬಿ ಸ್ಟೊರೇಜ್‌ ಇರುವ ಫೋನ್ ಬೆಲೆ 85,000 ರೂ. ಇರಬಹುದು. ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಪ್ಲಸ್‌ ನ ಬೆಲೆಯು ಅಂದಾಜು 89,999 ರೂ. ಗಳಾಗಬಹುದು. ಹಾಗೂ ಈ ಸರಣಿಯ ಟಾಪ್‌ ಎಂಡ್‌ ಫೋನ್‌ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಅಲ್ಟ್ರಾ ದ ಬೆಲೆಯನ್ನು 1,14,999 ರೂ. ಗಳಾಗಬಹುದು ಎಂದು ಅಂದಾಜಿಸಲಾಗಿದೆ. ಸ್ಟೋರೇಜ್‌ ಆಪ್ಷನ್‌ನ ಮೇರೆಗೆ ಬೆಲೆಗಳು ಬದಲಾಗುವ ಸಾಧ್ಯತೆಯಿದೆ.

ಪ್ರೀ –ಬುಕಿಂಗ್‌ ಮಾಡುವುದು ಹೇಗೆ?
ಸ್ಯಾಮ್‌ಸಂಗ್, ಈಗಾಗಲೇ S23 ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಪ್ರೀ-ಬುಕಿಂಗ್ ಅನ್ನು ಪ್ರಾರಂಭಿಸಿದೆ. 1,999ರೂ.ಗಳನ್ನು ಪಾವತಿಸುವ ಮೂಲಕ ನೀವು ಸ್ಮಾರ್ಟ್‌ಫೋನ್ ಅನ್ನು ಮೊದಲೇ ಬುಕ್ ಮಾಡಬಹುದು. ಪ್ರೀ–ಬುಕಿಂಗ್‌ನಲ್ಲಿ, ಕಂಪನಿಯು ಖರೀದುದಾರರಿಗೆ 5,000 ರೂ.ಗಳ ವರೆಗೆ ಕ್ಯಾಶ್‌ಬ್ಯಾಕ್ ಅನ್ನು ಒದಗಿಸಲಿದೆ. ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಸರಣಿಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಿಂದ ರಕ್ಷಣೆಯನ್ನು ನೀಡಲಾದ ಸ್ಮಾರ್ಟ್‌ಫೋನ್‌ಗಳ ಮೊದಲ ಸರಣಿಯಾಗಿದೆ. ಕಾಂಕ್ರೀಟ್, ಡಾಂಬರು ಮುಂತಾದ ಕಠಿಣ ವಸ್ತುಗಳು ಅದರ ಮೇಲ್ಮೈ ಮೇಲೆ ಬಿದ್ದಾಗಲೂ ಮೊಬೈಲ್ ಗೆ ಉತ್ತಮ ರಕ್ಷಣೆ ನೀಡಲಿದೆ ಎಂದು ಈ ಗಾಜಿನ ಬಗ್ಗೆ ಹೇಳಿಕೊಳ್ಳಲಾಗಿದೆ.

ಲಾಂಚಿಂಗ್‌ ಈವೆಂಟ್‌ ನೋಡುವುದು ಹೇಗೆ?
ಕಂಪನಿಯು ಫೆಬ್ರವರಿ 1 ರಂದು ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಸ್ಮಾರ್ಟ್‌ಫೋನ್‌ ಅನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಯೋಜಿಸುತ್ತದೆ. ಅದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:30PM ಗೆ ಪ್ರಾರಂಭವಾಗಲಿದೆ. ಇದನ್ನು ಸ್ಯಾಮ್‌ಸಂಗ್‌ನ ಅಧಿಕೃತ ಸೋಷಿಯಲ್‌ ಮೀಡಿಯಾ ಚಾನಲ್‌ಗಳ ಮೂಲಕ ಲೈವ್‌ಸ್ಟ್ರೀಮ್‌ ನೋಡಬಹುದಾಗಿದೆ.

ಇದನ್ನೂ ಓದಿ : Twitter : ಡೈರೆಕ್ಟ್‌ ಮೆಸ್ಸೇಜ್‌ ಬಟನ್‌ ಅನ್ನು ತೆಗೆದುಹಾಕಿದ ಟ್ವಿಟರ್‌

ಇದನ್ನೂ ಓದಿ : HP Envy x360 15 Laptops : ನೀವು ಕಂಟೆಂಟ್‌ ಕ್ರಿಯೇಟರ್‍ರಾ? ಹಾಗಾದರೆ HP, ಈ ಲ್ಯಾಪ್‌ಟಾಪ್‌ ಅನ್ನು ನಿಮಗಾಗಿ ಪರಿಚಯಿಸಿದೆ

(Samsung New Phones, Samsung Galaxy S23 series smartphones launch on Feb 1. Know the expected price and pre-booking features)

Comments are closed.