ಮೈಸೂರು : ನಾವು ಹೊಟೆಲ್ ಹೋಗಿ ಪುಡ್ ಆರ್ಡರ್ ಮಾಡಿದ್ರೆ ಹೋಟೆಲ್ ನ ಸಪ್ಲೇಯರ್ ಗಳು ಆಹಾರ ತಂದು ಕೊಡೋದು ಸಾಮಾನ್ಯ. ಆದ್ರೆ ಈ ಹೋಟೇಲ್ ಹೋಗಿ ಪುಡ್ ಆರ್ಡರ್ ಮಾಡಿದರೆ ಮೈಸೂರು ರೇಶ್ಮೇ ಸೀರೆ ಉಟ್ಟುಕೊಂಡ ಸುಂದರಿ ಒಬ್ಬಳು ನಿಮಗೆ ಪುಡ್ ತಂದು ಕೊಡ್ತಾಳೆ. ಅವರು ಅಂತಿಂಥ ಸುಂದರಿಯಲ್ಲ (Lady Robot Supplier) ರೋಬೋ ಸುಂದರಿ.
ಮೈಸೂರಿನ ಹೊಟೇಲ್ ಒಂದಕ್ಕೆ ಈ ಸುಂದರಿ ಕಾಲಿಟ್ಟಿದ್ದಾಳೆ. ಮೈಸೂರಿನ ಸಿದ್ಧಾರ್ಥ ಹೊಟೇಲ್ ಇಂತಹ ವಿನೂತ ಪ್ರಯೋಗಕ್ಕೆ ಕೈ ಹಾಕಿದೆ. ದೆಹಲಿಯಿಂದ ರೋಬೋ ಸುಂದರಿಯನ್ನು ತರಿಸಲಾಗಿದ್ದು, ಗ್ರಾಹಕರಿಗೆ ಈ ಸುಂದರಿಯೇ ಆಹಾರ ಹಾಗೂ ನೀರು ತಂದು ಕೊಡುತ್ತೆ. ಇನ್ನು ಆರ್ಡರ್ ಗ್ರಾಹಕರ ಟೇಬಲ್ ಗೆ ಸೇರಿದ ನಂತರ ವಾಯ್ಸ್ ಕಮಾಂಡ್ ಮೂಲಕ ಗ್ರಾಹಕರಿಗೆ ಆರ್ಡರ್ ಮಾಹಿತಿ ನೀಡುತ್ತೆ.
ಕೊವಿಡ್ ಹಿನ್ನೆಲೆಯಲ್ಲಿ ಹೊಟೇಲ್ ಮಾಲೀಕರು ಈವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕೊವಿಡ್ ಸಮಯದಲ್ಲಿ ಹೊಟೇಲ್ ನಲ್ಲಿ ಆಹಾರ ಸೇವಿಸಲು ಜನರು ಹಿಂದೇಟು ಹಾಕುತ್ತಿದ್ರು. ಈ ರೋಬೋದಿಂದ ಹ್ಯಾಂಡ್ ಟಚ್ ಆಗದೇ ಸಾರ್ವಜನಿಕರಿಗೆ ಆಹಾರ ನೀಡಬಹುದು ಅನ್ನೋದು ಮಾಲಿಕರ ಅಭಿಪ್ರಾಯ.
ಪ್ರಯೋಗಾರ್ಥವಾಗಿ ಈಗ ಒಂದು ರೋಬೋಟನ್ನು ಖರೀದಿಸಲಾಗಿದ್ದು ಎಲ್ಲಾದ್ರೂ ಇದು ಯಶಸ್ವಿಯಾದ್ರೆ ಇನ್ನು ೫ ರೋಬೋಟ್ ಅನ್ನು ಖರೀದಿಸುವ ನಿರೀಕ್ಷೆ ಇದೆ . ಇನ್ನು ಈ ರೋಬೋಟ್ ಮೌಲ್ಯ ಸುಮಾರು ೨.೫ ಲಕ್ಷ ರೂಪಾಯಿಯಾಗಿದ್ದು, ಇದನ್ನು ಕರ್ನಾಟಕದ ಹೆಣಿನ ರೀತಿ ಅಲಂಕರಿಸಲಾಗಿದೆ ಸದ್ಯ ಈ ಸುಂದರಿಯನ್ನು ನೋಡೋಕೆ ಅಂತಾನೆ ಹಲವು ಗ್ರಾಹಕರು ಈ ಹೊಟೇಲ್ ನತ್ತ ದೌಡಾಯಿಸುತ್ತಿದ್ದಾರೆ.
ಇದನ್ನೂ ಓದಿ : ಬಿಸಿನೀರಿನಲ್ಲಿ ದೇವರಿಗೆ ಅಭಿಷೇಕ ; ಭಕ್ತರ ಮುಂದೆಯೇ ಪವಾಡ ಮಾಡ್ತಾನೆ ನಾರಾಯಣ
ಇದನ್ನೂ ಓದಿ : ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ
ಇದನ್ನೂ ಓದಿ : ಎಲ್ಲಾದಕ್ಕೂ ಏಕೆ ಜವಾಹರಲಾಲ್ ನೆಹರೂರನ್ನೇ ಟೀಕಿಸುತ್ತೀರಿ? ಮೋದಿಗೆ ಸವಾಲೆಸೆದ ಮನಮೋಹನ್ ಸಿಂಗ್
ಇದನ್ನೂ ಓದಿ : ಐಪಿಎಲ್ ಮೆಗಾ ಹರಾಜು : ಯಾವ ಆಟಗಾರರು ಯಾವ ತಂಡಕ್ಕೆ ; ಇಲ್ಲಿದೆ ಎಲ್ಲಾ 10 ತಂಡಗಳ ಪೂರ್ಣ ವಿವರ
Siddharth Hotel Lady Robot Supplier Now Talk of town in Mysore