Prajwal Revanna : ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿ ಕೊಂಡಿದ್ದಾರೆ. ಯಾವುದೇ ನೊಟೀಸ್ ಗೂ ಬಗ್ಗದ ಪ್ರಜ್ವಲ್ ರೇವಣ್ಣ (Prajwal Revanna) ರನ್ನು ದೇಶಕ್ಕೆ ವಾಪಸ್ ಕರೆಸೋದೇ ಈಗ ಸವಾಲಾಗಿದೆ. ಹೀಗಿರುವಾಗಲೇ ವಿದೇಶದಲ್ಲಿ ಅಡಗಿಕೊಂಡಿರುವ ಪ್ರಜ್ವಲ್ ರೇವಣ್ಣ ಕರೆಸಲು ಎಸ್ ಐ ಟಿ ತಂಡ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದ್ದು, ಕೋರ್ಟ್ ಅಸ್ತ್ರ (Court Warrant) ಬಳಸಿ ಪ್ರಜ್ವಲ್ ಕರೆಸಲು ಸನ್ನದ್ಧವಾಗಿದೆ.

ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸದ್ಯ ರೇವಣ್ಣ ನ್ಯಾಯಾಲಯದಿಂದ ಬೇಲ್ (Court Bail) ಪಡೆದಿದ್ದಾರೆ. ಈ ಮಧ್ಯೆ ಪ್ರಜ್ವಲ್ ರೇವಣ್ಣ ಮೇ 15 ರಂದು ಬುಕ್ ಮಾಡಿದ್ದ ತಮ್ಮ ವಿಮಾನದ ಟಿಕೇಟ್ ರದ್ದುಪಡಿಸಿದ್ದು, ಇನ್ನೂ ದೇಶಕ್ಕೆ ಮರಳದೇ ವಿದೇಶದಲ್ಲೇ ತಲೆಮರೆಸಿಕೊಂಡಿದ್ದಾರೆ. ಇದು ಎಸ್.ಐ.ಟಿ (SIT) ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ಹೀಗಾಗಿ ಶತಾಯ ಗತಾಯ ಪ್ರಜ್ವಲ್ ರೇವಣ್ಣರನ್ನು ವಾಪಸ್ ಬೆಂಗಳೂರಿಗೆ ಕರೆಸಲೇ ಬೇಕೆಂದು ಪಣತೊಟ್ಟಿರುವ ಎಸ್ಐಟಿ ಅಧಿಕಾರಿಗಳು ಅದಕ್ಕಾಗಿ ಕೋರ್ಟ್ ವಾರೆಂಟ್ ಅಸ್ತ್ರ ಬಳಕೆಗೆ ಮುಂದಾಗಿದ್ದಾರೆ. ಸದ್ಯ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಳಿಸಿದ ಎಸ್ಐಟಿ. ಶೀಘ್ರ ಒಂದು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸಿದೆ. ಎಸ್ಐಟಿ ಬಳಿಯಿರುವ ಒಂದು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ ನಡೆಸಿದ್ದು ಇದು ಎಸ್ಐಟಿ ಪ್ರಜ್ವಲ್ ರೇವಣ್ಣ ರನ್ನು ವಾಪಸ್ ಕರೆಸಲು ನಡೆಸುತ್ತಿರುವ ಮಾಸ್ಟರ್ ಪ್ಲ್ಯಾನ್.
ಇದನ್ನೂ ಓದಿ : Red Lipstick Ban : ಕೆಂಪು ಲಿಪ್ ಸ್ಟಿಕ್ ಬಳಸೋ ಮುನ್ನ ಎಚ್ಚರ: ನೀವು ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತೀರಿ ಹುಷಾರ್ !
ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಕಾನೂನು ಅಸ್ತ್ರ ಪ್ರಯೋಗಕ್ಕೆ ಎಸ್ಐಟಿ ತಯಾರಿ ನಡೆಸಿದೆ. ಅದರ ಭಾಗವಾಗಿ ಈಗಾಗಲೇ ದಾಖಲಾಗಿರುವ ಒಂದು ಪ್ರಕರಣದಲ್ಲಿ ಚಾರ್ಜಶೀಟ್ ಸಲ್ಲಿಸಲು ಎಸ್ಐಟಿ ಮುಂದಾಗಿದೆ. ಕೇಸ್ ಚಾರ್ಜ್ ಶೀಟ್ ಕೋರ್ಟ್ ಗೆ ಸಲ್ಲಿಸುವುದು. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿ ಆರೋಪಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸುವುದು. ನಂತರ ಕೋರ್ಟ್ ಮೂಲಕ ವಾರೆಂಟ್ ಜಾರಿಗೊಳಿಸಿ ಪ್ರಜ್ವಲ್ ರೇವಣ್ಣ ಮೇಲೆ ಒತ್ತಡ ಹೇರುವುದು ತನಿಖಾ ತಂಡದ ಪ್ಲ್ಯಾನ್.
ಅದಕ್ಕಾಗಿ ಎಸ್ಐಟಿ ಚಿಂತನೆ ನಡೆಸಿದ್ದು, ತನ್ನ ಬಳಿಯಿರುವ ಒಂದು ಪ್ರಕರಣದಲ್ಲಿ ಚಾರ್ಜ್ ಶೀಟ್ ಫೈಲ್ ಮಾಡಲು ಅಗತ್ಯ ತಯಾರಿ ನಡೆಸಿದೆ. ಎವಿಡೇನ್ಸ್ ಕಲೆ ಹಾಕುವುದು, ಸಾಂದರ್ಭಿಕ ಸಾಕ್ಷ್ಯಗಳ ಸಂಗ್ರಹ, ಸಂತ್ರಸ್ತೆಯ ಸ್ಟೇಟ್ಮೆಂಟ್ ರೆಕಾರ್ಡ್, ಸಿಡಿಆರ್ ರಿಪೋರ್ಟ್, ಡಿಜಿಟಲ್ ಎವಿಡೇನ್ಸ್ ಸಂಗ್ರಹ, ಹಾಗೂ ಪ್ರಜ್ವಲ್ ರೇವಣ್ಣ ನಾಪತ್ತೆ ಬಗ್ಗೆ ದಾಖಲೆಗಳ ಸಂಗ್ರಹಕ್ಕೆ ತನಿಖಾ ತಂಡ ಮುಂದಾಗಿದೆ.

ತನಿಖಾ ತಂಡ ಈಗಾಗಲೇ ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಮಾಹಿತಿ, ಹೀಗೆ ಪ್ರಕರಣಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನ ಕಲೆ ಹಾಕುತ್ತಿದೆ. ಅಲ್ಲದೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ಗತಿಯಲ್ಲಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಇದೆ. ಈ ಅವಕಾಶವನ್ನು ಬಳಸಿಕೊಂಡು ಪ್ರಜ್ವಲ್ ಮೇಲಿನ ಚಾರ್ಜಶೀಟ್ ಫೈಲ್ ಮಾಡಲು ಸಿದ್ಧವಾಗುತ್ತಿದೆ.
ಇದನ್ನೂ ಓದಿ : Prajwal Revanna : ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಡಿಕೆ ಶಿವಕುಮಾರ್ ಪ್ಲ್ಯಾನ್: ದೇವರಾಜೇಗೌಡ ಸ್ಪೋಟಕ ಹೇಳಿಕೆ
ಈಗಾಗಲೇ ಬ್ಲೂ ಕಾರ್ನರ್ ನೊಟೀಸ್ ಜಾರಿಯಾಗಿದ್ದರೂ ಪ್ರಜ್ವಲ್ ರೇವಣ್ಣ ಸ್ಪಂದಿಸಿಲ್ಲ. ಹೀಗಾಗಿ ಕೋರ್ಟ್ ವಾರೆಂಟ್ ಜಾರಿ ಮಾಡಿಸಲು ಎಸ್ಐಟಿ ಸಿದ್ದವಾಗಿದೆ. ಸದ್ಯ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಮೂರ್ನಾಲ್ಕು ಪ್ರಕರಣಗಳು ದಾಖಲಾಗಿದ್ದು, ರೇವಣ್ಣ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ. ಹಾಗೂ ಕೆ ಆರ್ ನಗರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದ್ದು, ರೇವಣ್ಣ ಸದ್ಯ ಜಾಮೀನಿನಲ್ಲಿದ್ದಾರೆ.
ಇದನ್ನೂ ಓದಿ : ದರ್ಶನ್ ಜೊತೆ ವಿಜಯಲಕ್ಷ್ಮೀ, ಮಗಳ ಜೊತೆ ಪವಿತ್ರಗೌಡ : ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾಮಿಲಿಯ ವಾರ್
SIT Master Plan for Prajwal Revanna Arrest: Court Warrant to be implemented soon