Student Suicide : ಶಿಕ್ಷಣದ ವ್ಯವಸ್ಥೆ ಸರಿಯಿಲ್ಲ, ಅಂತ್ಯಕ್ರಿಯೆಗೆ ಬೊಮ್ಮಾಯಿ ಬರಬೇಕು : ವಿಡಿಯೋ ಮಾಡಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ : ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಎಜುಕೇಶನ್‌ ಸಿಸ್ಟಮ್‌ ಸರಿಯಿಲ್ಲ ಎಂದು, ಅದು ಸರಿಯಾಗಬೇಕು. ನನ್ನ ಅಂತ್ಯಕ್ರೀಯೆಗೆ ಸಿಎಂ ಬೊಮ್ಮಾಯಿ ಅವರು ಬರಬೇಕು ಎಂದು ವಿಡಿಯೋ ಮಾಡಿಟ್ಟು ಇಂಜಿನಿಯರಿಂಗ್‌ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸಿಕೆರೆ ಮೂಲದ ಹೇಮಂತ್‌ ಗೌಡ ( 20 ವರ್ಷ) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹೇಮಂತ್‌ ಗೌಡ, ಹಾಸನದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂದ ಪದವಿ ಪಡೆಯುತ್ತಿದ್ದ. ನಿನ್ನೆ ಹಾಸ್ಟೆಲ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ 13ನಿಮಿಷ 21 ಸೆಕೆಂಡ್‌ ಸೆಲ್ಫಿ ವೀಡಿಯೋ ಮಾಡಿದ್ದು ವಿಡಿಯೋದಲ್ಲಿ ಆತ ಸದ್ಯದ ಎಜುಕೇಶನ್‌ ಸಿಸ್ಟಮ್‌ ಅಲ್ಲಿ ಸುಧಾರಣೆ ಯಾಗಲಿ ಎಂದು ಮಾತನಾಡಿದ್ದಾನೆ.

ಇದನ್ನೂ ಓದಿ: Madikeri : ಪ್ರವಾಸಕ್ಕೆಂದು ಬಂದಿದ್ದ ಯುವತಿ ಹೋಮ್‌ಸ್ಟೇನಲ್ಲಿ ನಿಗೂಢ ಸಾವು

ಈಗಿನ ಎಜುಕೇಶನ್‌ ಸಿಸ್ಟಮ್‌ ಇದ್ದರೂ ಇಲ್ಲದಂತಾಗಿದೆ. ಎಜುಕೇಶನ್‌ ಸಿಸ್ಟಮ್‌ ಸರಿ ಇಲ್ಲ. ನನ್ನ ವಿಡಿಯೋವನ್ನು ಎಲ್ಲರೂ ಸೋಶಿಯಲ್‌ ಮೀಡಿಯಾದಲ್ಲಿ ಆಪ್ಲೋಡ್‌ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ತನ್ನ ಅಂತ್ಯ ಕ್ರಿಯೆಯಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ಜೊತೆಗೆ ತನ್ನ ಗೆಳತಿ ಭಾಗವಹಿಸುವಂತೆ ಆತ ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಿರಿಯಾನಿ ಆಸೆಗೆ 2 ಲಕ್ಷ ರೂಪಾಯಿ ಕಳೆದುಕೊಂಡ ಆಟೋ ಚಾಲಕ !̈

(Moment arrangements not right, Bommai should come to funeral: Make video engineering student commits suicide)

Comments are closed.