ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಜಾರಿಯಲ್ಲಿರುವ ನೈಟ್ ಕರ್ಪ್ಯೂವನ್ನುಅಕ್ಟೋಬರ್ 11 ರವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಈ ಹಿಂದೆ ಹೊರಡಿಸಿದ್ದ ಆದೇಶದನ್ವಯ ಸೆ.27 ಬೆಳಿಗ್ಗೆ 5 ಗಂಟೆಗೆ ನೈಟ್ ಕರ್ಪ್ಯೂ ಆದೇಶ ಮುಕ್ತಾಯವಾಗಿದೆ. ಆದರೆ ಇದೀಗ ರಾಜ್ಯ ಸರಕಾರ ನೈಟ್ ಕರ್ಪ್ಯೂ ಆದೇಶವನ್ನು ವಿಸ್ತರಣೆ ಮಾಡಿದೆ. ಇದೀಗ ನೈಟ್ ಕರ್ಫ್ಯೂ’ವನ್ನು ಅಕ್ಟೋಬರ್ 11 ರ ಬೆಳಿಗ್ಗೆ 5 ರವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: ಸವಾರರೇ ಕುಡಿದು ರಸ್ತೆ ಇಳಿಯೋ ಮುನ್ನ ಹುಷಾರ್ ! ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಸಜ್ಜಾದ ಪೊಲೀಸರು
ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಆದೇಶ ಜಾರಿಯಲ್ಲಿರುತ್ತದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೂಡ ಈ ಆದೇಶ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಬಿಗ್ ಶಾಕ್ : ಭಾನುವಾರ ರಜೆ ಕಡಿತಕ್ಕೆ ಸರ್ಕಾರದ ಚಿಂತನೆ
(Night curfew expansion: State government mandate)