Wild Mushroom :ಕಾಡು ಅಣಬೆಯ ಪದಾರ್ಥ ಸೇವನೆ : 12 ಮಂದಿ ಅಸ್ವಸ್ಥ, ಇಬ್ಬರು ಗಂಭೀರ

ಪುತ್ತೂರು : ಕಾಡು ಅಣಬೆಯ ಪದಾರ್ಥ ಸೇವಿಸಿ 12ಮಂದಿ ಅಸ್ವಸ್ಥಗೊಂಡು, ಇಬ್ಬರು ಗಂಭೀರವಾಗಿರು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡ್ನೂರ ಗ್ರಾಮದ ಕೊಡಂಗೆ ಎಂಬಲ್ಲಿ ನಡೆದಿದೆ.

ಪಡ್ನೂರ ಕೊಡಂಗೆ ಗ್ರಾಮದ ನಿವಾಸಿಯಾಗಿರುವ ರಾಘವ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು. ರಾಘವ ಅವರ ತಾಯಿ ಹೊನ್ನಮ್ಮ, ಪತ್ನಿ ಲತಾ, ತೃಷಾ ಸಹೋದರಿ ಬೇಬಿ, ಬಾವದಂದಿರಾದ ದೇವಪ್ಪ, ಕೇಶವ ಹಾಗೂ ಸಹೋದರಿಯರ ಮಕ್ಕಳಾದ ಸುದೇಶ್‌, ಧನುಷ್‌, ಅರ್ಚನಾ ಎಂಬವರೇ ಅಸ್ವಸ್ಥಗೊಂಡಿದ್ದಾರೆ. ಎಲ್ಲರನ್ನೂ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ದೇವಪ್ಪ ಹಾಗೂ ಹೊನ್ನಮ್ಮಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ : ಮಂಗಳೂರು: ಕಾಲೇಜು ಶುಲ್ಕ ಪಾವತಿಗೆ ಕಿರುಕುಳ : ನರ್ಸಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

ಮನೆಯ ಸಮೀಪದ ಕಾಡಿನಲ್ಲಿ ಅಣಬೆ ದೊರೆತಿತ್ತು. ಅಣಬೆಯನ್ನು ತಂದು ಮನೆಯಲ್ಲಿ ಪದಾರ್ಥ ತಯಾರಿಸಿದ್ದಾರೆ. ಊಟವಾದ ಬಳಿಕ ಎಲ್ಲರಿಗೂ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಲಾಗಿದೆ.

ಪುತ್ತೂರು ಸರಕಾರಿ ಆಸ್ಪತ್ರೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದಾರೆ. ಮನೆಯವರೆಲ್ಲಾ ತಿಂದಿರುವ ಅಣಬೆ ವಿಷಕಾರಿಯೇ ಅನ್ನೋ ಬಗ್ಗೆ ಯಾವುದೇ ಖಚಿತತೆ ಇಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮಂಗಳೂರಲ್ಲಿ ಅಪ್ಪನಿಂದ ಮಗನ ಮೇಲೆ ಫೈರಿಂಗ್‌

( Consumption of wild mushrooms: 12 sick, two serious in Puttur Dakshin kannada )

Comments are closed.