ಸರಕಾರಿ ಕಾಲೇಜಿಗೆ ವಿದ್ಯಾರ್ಥಿಗಳು ಯಾಕೆ ಬರ್ತಿಲ್ಲ ? ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವ ಬಿ.ಸಿ.ನಾಗೇಶ್‌

ಕಲಬುರಗಿ : ಅತ್ಯುತ್ತಮ ಅಲ್ಲದಿದ್ದರೂ ಸರಕಾರಿ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿದ್ದೇವೆ. ಉಪನ್ಯಾಸಕರನ್ನೂ ಒದಗಿಸಿದ್ದೇವೆ. ಆದರೂ ಸರಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಯಾಕೆ ಬರುತ್ತಿಲ್ಲ ಎಂದು ಮೂಲಸೌಕರ್ಯ ಇಲ್ಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರನ್ನು ಒದಗಿಸುತ್ತಿದ್ದೇವೆ ಆದರೂ ಯಾಕೆ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ಬರುತ್ತಿಲ್ಲ ? ನೀವು ವಿದ್ಯಾರ್ಥಿಗಳ ಮನವಲಿಸುವ ಪ್ರಯತ್ನ ಮಾಡಿದ್ದೀರಾ ? ಎಂದು ಸಚಿವ ಬಿ.ಸಿ ನಾಗೇಶ್‌ ಪ್ರಶ್ನಿಸಿದ್ದಾರೆ.

ಮಂಗಳವಾರ ಕಲಬುರಗಿಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಪ್ರಾರ್ಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌. ಭಾಗಿಯಾಗಿದ್ದರು. ಈ ಜಿಲ್ಲೆಯಲ್ಲಿರುವ ಶಾಲಾ, ಕಾಲೇಜು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಶೌಚಾಲಯ ಕಟ್ಟಡದಂತ ಮೂಲ ಸೌಕರ್ಯಗಳ ಮಾಹಿತಿ ನೀಡುವಲ್ಲಿ ಡಿಡಿಪಿಯು ಹಾಗೂ ಡಿಡಿಪಿಐ ತಡವರಿಸಿದ್ದರು.

ಇದನ್ನೂ ಓದಿ :DA Hike : ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌ : ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರಕಾರದ ಆದೇಶ

ಕಲಬುರಗಿಯ ಡಿಡಿಪಿಯು ಆದಂತ ಶಿವಶರಣಪ್ಪ ಮೂಳೆಗಾವ್‌ ಜಿಲ್ಲೆಯಲ್ಲಿ ಒಟ್ಟು 49 ಸರ್ಕಾರಿ ಹಾಗೂ 29 ಅನುಧಾನಿತ 172 ಖಾಸಗೀ ಕಾಲೇಜು ಸೇರಿ 250 ಪದವಿ ಪೂರ್ವ ಕಾಲೇಜುಗಳಲ್ಲಿ 64,648 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು 49 ಕಾಲೇಜುಗಳ ಪೈಕಿ 2 ಕಾಲೇಜಿನಲ್ಲಿ ಮಾತ್ರ ನೀರಿಕ್ಷಿಸಿದಷ್ಟು ವಿದ್ಯಾರ್ಥಿಗಳಿದ್ದಾರೆ. ಉಳಿದ 47 ಕಾಲೇಜುಗಳಲ್ಲಿ ಪ್ರತೀ 44 ವಿದ್ಯಾರ್ಥಿಗಳಿಗೆ ತಲಾ 6 ಉಪನ್ಯಾಸಕರಿದ್ದಾರೆ. ಆದರೂ ಏಕೆ ವಿದ್ಯಾರ್ಥಿಗಳು ಬರುತ್ತಿಲ್ಲಾ ? ಕಲಾ ವಿಭಾಗದ ವಿದ್ಯಾರ್ಥಿಗಳು ಯಾಕೇ ಬೇರೆ ಕಾಲೇಜಿಗೆ ಹೋಗುತ್ತಿದ್ದಾರೆ ? ಎಲ್ಲಿ ಯಾವ ಕಾಲೇಜಿನಲ್ಲಿ ಎಷ್ಟು ಉಪನ್ಯಾಸಕರ ಕೊರತೆಯ ಬಗ್ಗೆ ಮಾಹಿತಿಯೇ ಇಲ್ಲವಾದರೆ ಹೇಗೆ ? ಎಂದು ಸಚಿವ ಬಿ.ಸಿ ನಾಗೇಶ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೊಸ ವಿದ್ಯಾರ್ಥಿಗಳನ್ನು ಸರಕಾರಿ ಕಾಲೇಜಿಗೆ ಕರೆತರಲು ಏನು ಮಾಡಿದ್ದೀರಿ ? ನಿಮಗೆ ಪಾಠ ಮಾಡುವ ಕೆಲಸ ಇಲ್ಲಾ, ವಿದ್ಯಾರ್ಥಿಗಳ ಪ್ರವೇಶ ಮಾಡಿಸಿಕೊಳ್ಳುವ ಕೆಲಸ ಇಲ್ಲ, ಏನೂ ಕೆಲಸ ಇಲ್ಲದಿದ್ದರೂ ವಿದ್ಯಾರ್ಥಿಗಳನ್ನು ಸರ್ಕಾರಿ ಕಾಲೇಜಿಗೆ ಸೇರುವಂತೆ ಮಾಡಲು ಏನಾದರು ಯೋಜನೆ ರೂಪಿಸಿದ್ದೀರಾ ? ಎಂದು ಬೆಸರದಿಂದ ಸಚಿವ ಬಿ.ಸಿ ನಾಗೇಶ್‌ ಪ್ರಶ್ನೀಸಿದ್ದಾರೆ.

ಇದನ್ನೂ ಓದಿ : ಬಡ್ತಿ ಪಡೆಯಲು ಪರೀಕ್ಷೆ ಕಡ್ಡಾಯ : ಬಡ್ತಿ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಬಿಗ್‌ ಶಾಕ್‌

ಸರಿಯಾದ ಮಾಹಿತಿ ನೀಡಲು ತಡವರಿಸಿದ ಬಳ್ಳಾರಿ ಜಿಲ್ಲೆಯ ಡಿಡಿಪಿಯು ಹಾಗೂ ರಾಮಪ್ಪ ಹಾಗೂ ಡಿಡಿಪಿಯು ರಾಜು ಅವರು ಕಂಪ್ಯೂಟರ್‌ ಆಪರೇಟರ್‌ ಮೂಲಕ ಮಾಹಿತಿ ತೆಗೆದುಕೊಟ್ಟಿದ್ದಾರೆ. ಇಷ್ಟನ್ನಾದರೂ ಕೊಟ್ಟಿದ್ದೀರಲ್ಲ, ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಜವಾಬ್ದಾರಿ ಇರಬೇಕು ಎನ್ನುವ ಮೂಲಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಸಚಿವರು.

( Why don’t students come to a government college? Minister B C Nagesh questions officials)

Comments are closed.