ಮಂಗಳವಾರ, ಏಪ್ರಿಲ್ 29, 2025
HomekarnatakaTeacher recruitment scam : ಸಿದ್ಧರಾಮಯ್ಯ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಹಗರಣ : 11 ಶಿಕ್ಷಕರನ್ನು...

Teacher recruitment scam : ಸಿದ್ಧರಾಮಯ್ಯ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಹಗರಣ : 11 ಶಿಕ್ಷಕರನ್ನು ವಶಕ್ಕೆ ಪಡೆದ ಸಿಐಡಿ

- Advertisement -

ಬೆಂಗಳೂರು : (Teacher recruitment scam) ರಾಜ್ಯ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡ್ತಿರೋ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಬಾಯಿ‌ ಮುಚ್ಚಿಸಲು ಬಿಜೆಪಿಯೂ ರಣತಂತ್ರ ಹೂಡಿದೆ. ಬಿಜೆಪಿ ಮೇಲೆ ಹಗರಣಗಳ ಆರೋಪ ಹೊರಿಸುವಮಾಜಿ ಸಿಎಂ ಸಿದ್ಧರಾಮಯ್ಯನವರ ವಿರುದ್ಧ ತಿರುಗಿ ಬಿದ್ದಿದ್ದು, ಅವರ ಕಾಲದಲ್ಲಿ ನಡೆದಿದೆ ಎನ್ನಲಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಆದೇಶಿಸಿದೆ.

2013 ಹಾಗೂ 14-15 ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿತ್ತು. ಶಿಕ್ಷಕರ ನೇಮಕಾತಿ ಅವ್ಯವಹಾರದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆ ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿ ಸಿಐಡಿಗೆ ಕೇಸ್ ವರ್ಗಾಯಿಸಲಾಗಿತ್ತು. ಐಪಿಸಿ ಸೆಕ್ಷನ್ 420,465,468,471 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈಗಾಗಲೇ ನಡೆಸಿರೋ ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ನಡೆದಿರೋದು ಬಹುತೇಕ ಸಾಬೀತಾಗಿರೋ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗೆ ಸಿಐಡಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.

ಇನ್ನೊಂದೆಡೆ ತನಿಖೆ ಆರಂಭವಾಗುತ್ತಿದ್ದಂತೆ ಸಿಐಡಿ ಅಧಿಕಾರಿಗಳು ಕಣಕ್ಕಿಳಿದಿದ್ದು, ಸಿದ್ಧರಾಮಯ್ಯನವರ ಕಾಲದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತುಮಕೂರಿನ 11 ಜನ ಶಿಕ್ಷಕರನ್ನು ತನಿಖಾ ತಂಡ ಬಂಧಿಸಿದೆ. ಶಮಿನಾಜ್, ರಾಜೇಶ್ವರಿ ಜಗ್ಲಿ,ಕಮಲಾ,ನಾಗರತ್ನ,‌ ದಿನೇಶ್, ನವೀನ್ ಹನುಮ ಗೌಡ, ನವೀನ್ ಕುಮಾರ್, ದೇವೇಂದ್ರ ನಾಯ್ಕ, ಹರೀಶ್ ಆರ್, ಪ್ರಸನ್ನ ಬಿ.ಎಂ, ಮಹೇಶ್ ಶ್ರೀಮಂತ ಸೂಸಲಾಡಿ ಬಂಧಿತರು.

ಇನ್ನೋರ್ವ ಆರೋಪಿ ನಾಪತ್ತೆಯಾಗಿದ್ದು, ಸಿಐಡಿ ತಂಡ ತನಿಖೆ ಮುಂದುವರೆಸಿದೆ. ಈ ಕೇಸ್ ನಲ್ಲಿ ಇನ್ನಷ್ಟು ಶಿಕ್ಷಕರು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಈ ಮಧ್ಯೆ ತಮ್ಮ ಅವಧಿಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣ ತನಿಖೆ ವಿಚಾರಕ್ಕೆ ಚಾಮರಾಜನಗರ ಪ್ರವಾಸದಲ್ಲಿರೋ ಮಾಜಿಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ತನಿಖೆ ಮಾಡ್ಲಿ, ಯಾರು ಉಪ್ಪು ತಿಂದ್ರೋ ಅವರು ನೀರು ಕುಡಿತಾರೆ.

ಹಗರಣ ನಡೆದಿದ್ದರೇ ಈ ಮೂರು ವರ್ಷ ಏನು ಮಾಡುತ್ತಿದ್ದರು? ಈಗ ರಾಜಕೀಯ ದ್ವೇಷದಿಂದ ತನಿಖೆ ಆರಂಭಿಸಿದ್ದೀರಾ. 40% ಕಮೀಷನ್ ತನಿಖೆ ಮಾಡಿ ಎಂದಿದ್ದಕ್ಕೆ ಈಗ ಶಿಕ್ಷಕರ ನೇಮಕಾತಿ ತನಿಖೆ ಆರಂಭಿಸಿದ್ದಾರೆ ಎಂದು ಸಿದ್ಧು ಲೇವಡಿ ಮಾಡಿದ್ದಾರೆ. ಅಲ್ಲದೇ ಹಗರಣ ನಡೆದಾಗ ನೀವು ವಿರೋಧ ಪಕ್ಷದಲ್ಲಿ ಇದ್ರಿ ಅವಾಗ ಕಣ್ಮುಚ್ಚಿ ಕೂತಿದ್ರಾ ಎಂದು ಸಿದ್ದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಆರೋಪಕ್ಕೆ ಪ್ರತ್ಯಾರೋಪದ ಹಗರಣ ತನಿಖೆ ಚುರುಕುಗೊಂಡಿದೆ.

ಇದನ್ನೂ ಓದಿ : bjp janostava postpone : ಉಮೇಶ್​ ಕತ್ತಿ ನಿಧನ : ಬಿಜೆಪಿ ಜನೋತ್ಸವ ಕಾರ್ಯಕ್ರಮ ಸೆ.11ಕ್ಕೆ ಮುಂದೂಡಿಕೆ

ಇದನ್ನೂ ಓದಿ : SBI Recruitment 2022 : ಎಸ್‌ಬಿಐ ನೇಮಕಾತಿ 2022 : 5008 ಹುದ್ದೆ, 47,000 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

Teacher recruitment scam during Siddaramaiahs tenure CID arrested 11 teachers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular