Bharat Jodo Yatra Karnataka : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಇಂದು ಕರ್ನಾಟಕ ಪ್ರವೇಶ ಮಾಡಿದೆ. ಈ ವೇಳೆ ಪಾದಯಾತ್ರೆಯಲ್ಲಿ ರಾಜ್ಯದ ಬಹುತೇಕ ಕಾಂಗ್ರೆಸ್ ನ ನಾಯಕರು ಪಾಲ್ಗೊಂಡಿದ್ದಾರೆ. ಮೊದಲನೆಯ ದಿನದ ಪಾದಯಾತ್ರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಕೊನೆಯಾಗಿದೆ. ಬೇಗೂರಿನಲ್ಲಿ ರಾಹುಲ್ ಗಾಂಧಿ ವಾಸ್ತವ್ಯಕ್ಕೆ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗಿತ್ತು. ಗುಂಡ್ಲುಪೇಟೆಯಿಂದ ಬೇಗೂರುವರೆಗೆ ನಡೆದ ಮೊದಲ ದಿನದ ಯಾತ್ರೆಯಲ್ಲಿ ರಾಹುಲ್ ಗಾಂಧಿ ಸುಮಾರು 10.5 ಕಿಮೀ ಕಾಲ್ನಡಿಗೆ ನಡೆಸಿದರು..
ಇನ್ನು ಮೊದಲನೆಯ ದಿನದ ಪಾದಯಾತ್ರೆಯಲ್ಲಿ ಹಲವು ಇಂಟ್ರೆಸ್ಟಿಂಗ್ ಘಟನೆಗಳು ನಡೆದವು. ಮೊದಲನೆಯ ದಿನ ವಿದ್ಯಾರ್ಥಿನಿ ಜೊತೆ ರಾಗಾ ಹೆಜ್ಜೆ ಹಾಕಿದರು. ಸುಮಾರು ದೂರ ವಿದ್ಯಾರ್ಥಿ ಜೊತೆಗೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ ವಿದ್ಯಾರ್ಥಿ ಜೊತೆ ಮಾತುಕತೆಯನ್ನು ನಡೆಸಿದರು. ಬಳಿಕ ರಾಹುಲ್ ಗಾಂಧಿಗೆ ಫೋಟೋ ಗಿಫ್ಟ್ ಕೊಡಲು ಯುವತಿ ಬಂದಳು. ಆದ್ರೆ ಭದ್ರತೆ ದೃಷ್ಟಿಯಿಂದ ಫೋಟೋ ಬೇಡಾ ಎಂದು ಎಸ್‌ಪಿಜಿ ಅಧಿಕಾರಿಗಳು ಹೇಳಿದರು. ಹೀಗಾಗಿ ರಾಗಾ ಜೊತೆ ಯುವತಿ ಫೋಟೋ ತೆಗೆಸಿಕೊಂಡಳು.
ಇನ್ನು ಪಾದಯಾತ್ರೆ ಸಂದರ್ಭ ಡ್ರೋಣ್ ಕ್ಯಾಮರವೊಂದನ್ನು ರಾಹುಲ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ಘಟನೆಯು ನಡೆಯಿತು. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸಂಬಂಧಪಟ್ಟ ತಂಡ ಡ್ರೋನ್ ಮೂಲಕ ಪಾದಯಾತ್ರೆಯ ದೃಶ್ಯ ಚಿತ್ರೀಕರಿಸುತಿತ್ತು. ಡಿಕೆಶಿ ಹೆಜ್ಜೆ ಹಾಕುವ ದೃಶ್ಯವನ್ನು ಸೆರೆಹಿಡಿಯುತ್ತಿದ್ದಾಗ ಗಮನಿಸಿದ ರಾಹುಲ್ ಗಾಂಧಿ ಭದ್ರತಾ ಸಿಬ್ಬಂದಿ ಎರಡು ಬಾರಿ ಎಚ್ಚರಿಕೆ ನೀಡಿದ್ದರು. ಎಚ್ಚರಿಕೆ ನೀಡಿದ ಬಳಿಕವೂ ಚಿತ್ರೀಕರಣ ಮುಂದುವರಿಕೆ ಮಾಡಿದಕ್ಕೆ ಕೊನೆಗೆ ಭದ್ರತಾ ಸಿಬ್ಬಂದಿ ಡ್ರೋಣ್ ನ್ನ ಕಿತ್ತುಕೊಂಡು ಹೋದರು.
ರಾಹುಲ್ ಗಾಂಧಿ ಪಾದಯಾತ್ರೆ ಮುಗಿಸಿ ಬೇಗೂರಿನಲ್ಲಿ ಸಿದ್ದಗೊಳಿಸಲಾಗಿದ್ದ ವಾಸ್ತವ್ಯದ ಕಾರಿನಲ್ಲಿ ಆಗಮಿಸಿದರು. ಈ ಸಂದರ್ಭ ರಾಹುಲ್ ಗಾಂಧಿ ಕಂಟೇನರ್‌ಗೆ ತೆರಳುವಾಗಲೂ ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಸೆಲ್ಫಿಗಾಗಿ ಯುವತಿಯೊಬ್ಬಳು ಮುಗಿಬಿದ್ದಿದ್ದರಿಂದ ಯುವತಿಯ ಮನವಿಗೆ ಸ್ಪಂದಿಸಿ ರಾಹುಲ್ ಗಾಂಧಿ ಸೆಲ್ಫಿ ತೆಗೆಸಿಕೊಂಡರು. ಬೇಗೂರು ಗ್ರಾಮದ ಹೊರಭಾಗದಲ್ಲಿ ರಾಗಾ ವಾಸ್ತವ್ಯ ಹೂಡುವ ಕಂಟೈನರ್ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಕರ್ನಾಟಕದ ಭಾರತ್ ಜೋಡೋ ಎರಡನೇ ದಿನದ ಯಾತ್ರೆ ಬೇಗೂರಿನಿಂದ ನಂಜನಗೂಡಿನವರೆಗೆ ನಡೆಯಲಿದೆ.
ಇದನ್ನು ಓದಿ : Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ
ಇದನ್ನೂ ಓದಿ :Eshwarappa :‘ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ,ಸಿದ್ದರಾಮಯ್ಯರಂತೆ ಪಕ್ಷಾಂತರಿ ನಾನಲ್ಲ’ : ಈಶ್ವರಪ್ಪ ಗುಡುಗು
The Bharat Jodo Yatra on the first day of Karnataka witnessed many incidents