Traffic fine discount : ವಾಹನ ಸವಾರರಿಗೆ ಗುಡ್ ನ್ಯೂಸ್ : ಟ್ರಾಫಿಕ್ ದಂಡ’ ಪಾವತಿಗೆ ಮತ್ತೆ ‘ಶೇ.50ರಷ್ಟು ರಿಯಾಯಿತಿ ನೀಡಿದ ರಾಜ್ಯ ಸರಕಾರ

ಬೆಂಗಳೂರು : ವಾಹನ ಸವಾರರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದೆ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ (Traffic fine discount) ದಂಡ ಪಾವತಿಸಲು ಈ ಹಿಂದೆ ಶೇಕಡಾ 50ರಷ್ಟು ರಿಯಾಯಿತಿ ನೀಡಿಲಾಗಿದ್ದು, ಇದೀಗ ರಾಜ್ಯ ಸರಕಾರ ರಾಜ್ಯ ಸರಕಾರ ಭರ್ಜರಿ ರಿಯಾಯಿತಿ ನೀಡಿದೆ. ರಾಜ್ಯ ಸರಕಾರ ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರು ಶೇ. 50ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಅವಕಾಶ ಕಲ್ಪಿಸುವಂತೆ ಆದೇಶ ಹೊರಡಿಸಿದೆ.

ಕಳೆದ ಫೆಬ್ರವರಿ 11ರ ಒಳಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುವಂತೆ ಒಂದು ಬಾರಿಯ ಕ್ರಮವಾಗಿ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50ರಷ್ಟು ಡಿಸ್ಕೌಂಟ್‌ ನೀಡಲು ಈ ಹಿಂದೆ ಆದೇಶಿಸಲಾಗಿತ್ತು. ಅದರಂತೆ ಮತ್ತೊಮ್ಮೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಂದೆ ಬರುವ ಸೆಪ್ಟೆಂವರ್‌ 9ರ ವರೆಗೆ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶವಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಈ ಹಿಂದೆ ಕೂಡ ಎರಡು ಬಾರಿ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸರಕಾರ ಅವಕಾಶ ನೀಡಿತ್ತು. ನಂತರ ರಾಜ್ಯ ವಿಧಾನಸಭೆ ಘೋಷಣೆಯಾಗಿದ್ದು, ರಿಯಾಯಿತಿ ದರದ ದಂಡ ಪಾವತಿ ಅವಕಾಶ ಸ್ಥಗಿತಗೊಂಡಿದೆ.

ಇದನ್ನೂ ಓದಿ : ಕರಾವಳಿಯಲ್ಲಿ ಕೆಮಿಕಲ್‌ ಮರವಾಯಿ : ತಿಂದವರಿಗೆ ವಾಂತಿ, ಬೇಧಿ ಫಿಕ್ಸ್‌, ತಿನ್ನುವ ಮುನ್ನ ಹುಷಾರ್‌ !

ಇದನ್ನೂ ಓದಿ : BS Yediyurappa : ಕರ್ನಾಟಕ ವಿರೋಧ ಪಕ್ಷದ ನಾಯಕನ ಆಯ್ಕೆ ಕೇಂದ್ರದ ನಿರ್ಧಾರ ಎಂದ ಯಡಿಯೂರಪ್ಪ

ಕರ್ನಾಟಕ ಹೈಕೋರ್ಟ್‌ ನ್ಯಾಯಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಜೂನ್‌ 14ರಂದು ನಡೆದ ಸಭೆಯ ನಡವಳಿಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ದಂಡದ ಮೊತ್ತಕ್ಕೆ ರಿಯಾಯಿತಿ ನೀಡಲು ಕ್ರಮ ಕೈಗೊಳ್ಳುವಂತೆ ಕೇಳಲಾಗಿದೆ. ಅದರಂತೆ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸತತ ಮೂರನೇ ಸಲ ಟ್ರಾಫಿಕ್ ದಂಡ ಪಾವತಿಗೆ ಕಾಲಾವಕಾಶವನ್ನು ನೀಡಿರುವುದಾಗಿದೆ. ಹೀಗಾಗಿ ವಾಹನದಲ್ಲಿ ಸಂಚಾರ ಮಾಡುವವರಿಗೆ ಅವಕಾಶ ಕಲ್ಪಿಸುವುದರ ಜೊತೆಗೆ, ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ಕೂಡ ನೀಡಲಾಗಿದೆ.

Traffic fine discount: Good news for motorists: The state government has again given a discount of 50 percent on the payment of traffic fine.

Comments are closed.