Women’s Premier League 2023: ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಎದುರಾಳಿ, ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ

ಬೆಂಗಳೂರು: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League (WPL) 2023) ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಮಾರ್ಚ್ 4ರಂದು ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಮಾರ್ಚ್ 5ರಂದು ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

WPLನಲ್ಲಿ ಆಡಲಿರುವ 5 ತಂಡಗಳು:
ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್. ಸೋಮವಾರ ನಡೆದ WPL ಆಟಗಾರ್ತಿಯರ ಹರಾಜಿನಲ್ಲಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಸ್ಮೃತಿ ಮಂಧನ ಅತೀ ಹೆಚ್ಚು 3.4 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದರು. 23 ದಿನಗಳ ಕಾಲ ನಡೆಯಲಿರುವ ಚೊಚ್ಚಲ ಆವೃತ್ತಿಯ WPL ಟೂರ್ನಿಯಲ್ಲಿ ಒಟ್ಟು 20 ಲೀಗ್ ಪಂದ್ಯಗಳು ನಡೆಯಲಿದ್ದು, ಎರಡು ಪ್ಲೇ ಆಪ್ ಪಂದ್ಯಗಳು ನಡೆಯಲಿವೆ. ಮಾರ್ಚ್ 24ಕ್ಕೆ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯ ಮಾರ್ಚ್ 26ರಂದು ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2023: ಸಂಪೂರ್ಣ ವೇಳಾಪಟ್ಟಿ (Women’s Premier League 2023 schedule):

  • 4-ಮಾರ್ಚ್-2023; ಗುಜರಾತ್ Vs ಮುಂಬೈ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 5-ಮಾರ್ಚ್-2023; ಬೆಂಗಳೂರು Vs ಡೆಲ್ಲಿ (ಬ್ರೆಬೌರ್ನ್ ಕ್ರೀಡಾಂಗಣ, ಮಧ್ಯಾಹ್ನ 3.30ಕ್ಕೆ)
  • 5-ಮಾರ್ಚ್-2023; ಯು.ಪಿ Vs ಗುಜರಾತ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 6-ಮಾರ್ಚ್-2023; ಮುಂಬೈ Vs ಬೆಂಗಳೂರು (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 7-ಮಾರ್ಚ್-2023; ಡೆಲ್ಲಿ Vs ಯು.ಪಿ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 8-ಮಾರ್ಚ್-2023; ಬೆಂಗಳೂರು Vs ಗುಜರಾತ್ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 9-ಮಾರ್ಚ್-2023; ಡೆಲ್ಲಿ Vs ಮುಂಬೈ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 10-ಮಾರ್ಚ್-2023; ಬೆಂಗಳೂರು Vs ಯು.ಪಿ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 11-ಮಾರ್ಚ್-2023; ಡೆಲ್ಲಿ Vs ಗುಜರಾತ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 12-ಮಾರ್ಚ್-2023; ಯು.ಪಿ Vs ಮುಂಬೈ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 13-ಮಾರ್ಚ್-2023; ಡೆಲ್ಲಿ Vs ಬೆಂಗಳೂರು (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 14-ಮಾರ್ಚ್-2023; ಗುಜರಾತ್ Vs ಮುಂಬೈ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 15-ಮಾರ್ಚ್-2023; ಬೆಂಗಳೂರು Vs ಯು.ಪಿ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 16-ಮಾರ್ಚ್-2023; ಡೆಲ್ಲಿ Vs ಗುಜರಾತ್ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 18-ಮಾರ್ಚ್-2023; ಯು.ಪಿ Vs ಮುಂಬೈ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮಧ್ಯಾಹ್ನ 3.30ಕ್ಕೆ)
  • 18-ಮಾರ್ಚ್-2023; ಬೆಂಗಳೂರು Vs ಗುಜರಾತ್ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 20-ಮಾರ್ಚ್-2023; ಯು.ಪಿ Vs ಗುಜರಾತ್ (ಬ್ರೆಬೌರ್ನ್ ಕ್ರೀಡಾಂಗಣ, ಮಧ್ಯಾಹ್ನ 3.30ಕ್ಕೆ)
  • 20-ಮಾರ್ಚ್-2023; ಮುಂಬೈ Vs ಡೆಲ್ಲಿ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 21-ಮಾರ್ಚ್-2023; ಬೆಂಗಳೂರು Vs ಮುಂಬೈ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮಧ್ಯಾಹ್ನ 3.30ಕ್ಕೆ)
  • 21-ಮಾರ್ಚ್-2023; ಯು.ಪಿ Vs ಡೆಲ್ಲಿ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 24-ಮಾರ್ಚ್-2023; ಎಲಿಮಿನೇಟರ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)
  • 26-ಮಾರ್ಚ್-2023; ಫೈನಲ್ (ಬ್ರೆಬೌರ್ನ್ ಕ್ರೀಡಾಂಗಣ, ರಾತ್ರಿ 7.30ಕ್ಕೆ)

ಇದನ್ನೂ ಓದಿ : Prasidh Krishna : ಪ್ರಸಿದ್ಧ್ ಕೃಷ್ಣಗೆ ಕ್ರಿಕೆಟ್ ಅವಕಾಶ ಕೊಟ್ಟ ಕರ್ನಾಟಕಕ್ಕಿಂತ ಐಪಿಎಲ್ ಟೂರ್ನಿಯೇ ಮುಖ್ಯವಾಯ್ತಾ?

ಇದನ್ನೂ ಓದಿ : Hardik Pandya wedding: ಪ್ರೇಮಿಗಳ ದಿನದಂದೇ ಮಗನ ಸಮ್ಮುಖದಲ್ಲಿ ಪತ್ನಿಯನ್ನು ಮತ್ತೊಮ್ಮೆ ಮದುವೆಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ

BCCI announces Schedule for Women’s Premier League 2023 WPL

Comments are closed.