ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳುವ ವೇಳೆ ದುರಂತ : ಯುವತಿ ಬಲಿ

ತುಮಕೂರು : (Tumkur petrol bunk fire ) ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳುವ ವೇಳೆಯಲ್ಲಿ ಒಮ್ಮಿಂದೊಮ್ಮೆಲೆ ಬೆಂಕಿ ಹೊತ್ತಿಕೊಂಡು ಯುವತಿಯೋರ್ವಳು ಸಾವನ್ನಪ್ಪಿರುವ ದುರಂತ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜವನಹಳ್ಳಿ ನಿವಾಸಿ ಭವ್ಯಾ ಗೌಡ (bhavya Gowda) ಎಂಬವರೇ ಮೃತ ಯುವತಿ. ಭವ್ಯಾ ಪೆಟ್ರೋಲ್‌ ಹಾಕಿಸಿಕೊಳ್ಳುವ ಸಲುವಾಗಿ ಮಧುಗಿರಿಯ ಬಡವನಹಳ್ಳಿಯ‌ಲ್ಲಿರುವ ಪೆಟ್ರೋಲ್ ಬಂಕ್‌ ಗೆ ಬಂದಿದ್ದಳು.

ಬೈಕ್‌ನಲ್ಲಿ ಕುಳಿತು ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿದ್ದಳು. ಈ ವೇಳೆಯಲ್ಲಿ ಸ್ಕೂಟರ್‌ನ ಇಂಜಿನ್‌ ಬಿಸಿಯಾಗಿದ್ದರಿಂದಾಗಿ ಪೆಟ್ರೋಲ್‌ ಸುರಿಯುತ್ತಿದ್ದಂತೆಯೇ ಬೆಂಕಿ (Tumkur petrol bunk fire ) ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆ ಭವ್ಯಾಳಿಗೂ ಹಬ್ಬಿದ್ದು, ಸಂಪೂರ್ಣವಾಗಿ ದೇಹ ಸುಟ್ಟು ಹೋಗಿದೆ. ಪೆಟ್ರೋಲ್‌ ಬಂಕ್‌ ಸಿಬ್ಬಂದ ಕೂಡಲೇ ಬೆಂಕಿಯನ್ನು ನಂದಿಸಿ ಭವ್ಯಾ ಗೌಡ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.

ಪೆಟ್ರೋಲ್‌ ಹಾಕಿಸಿಕೊಳ್ಳುವ ವೇಳೆ ಇರಲಿ ಎಚ್ಚರ !

ತುಮಕೂರಿನಲ್ಲಿ ನಡೆದ ಘಟನೆಯಂತೆಯೇ ದೇಶದಲ್ಲಿ ಹಲವು ದುರಂತಗಳು ಸಂಭವಿಸುತ್ತಿವೆ. ದಿನೇ ದಿನೇ ಹೆಚ್ಚತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಪ್ರತೀ ವಾಹನ ಸವಾರರು ಹೆಚ್ಚು ಎಚ್ಚರಿಕೆಯಿಂದ ವಾಹನಗಳಿಗೆ ಇಂಧನ ತುಂಬಿಸುವ ಕಾರ್ಯವನ್ನು ಮಾಡಬೇಕಾಗಿದೆ. ವಾಹನಗಳಿಗೆ ಪುಲ್‌ಟ್ಯಾಂಕ್‌ ಇಂಧನ ತುಂಬಿಸದಂತೆ ಸರಕಾರ ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದೆ. ಇಂಧನ ಟ್ಯಾಂಕ್‌ ಸಾಮರ್ಥದ ಶೇ.15 ಅಥವಾ 20 ರಷ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಂಧನ ತುಂಬಬೇಕು. ಹೆಚ್ಚುತ್ತಿರುವ ತಾಪಮಾನವನ್ನು ಪರಿಗಣಿಸಿ ಸರಕಾರ ಈ ಸುತ್ತೋಲೆಯನ್ನು ಹೊರಡಿಸಿದೆ. ವಾಹನದಲ್ಲಿ ಇಂಧನ ಭರ್ತಿಯಾಗಿದ್ದ ಸಂದರ್ಭದಲ್ಲಿ ಹೊರಗಿನ ವಿಪರೀತ ಬಿಸಿಗೆ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ವಿಪರೀತ ಬಿಸಿಯ ತಾಪಮಾನದಲ್ಲಿ ಇಂಧನ ಟ್ಯಾಂಕ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಇದ್ದರೆ ಅದು ಸ್ಟೋಟಗೊಂಡು ದೊಡ್ಡ ಮಟ್ಟದ ಅಪಾಯ ಎದುರಾಗುವ ಸಾಧ್ಯತೆಯಿದೆ. ಅಲ್ಲದೇ ಇಂಜಿನ್‌ ಕಾರ್ಯಕ್ಷಮತೆಯ ಮೇಲೆಯೂ ಕೂಡ ಪರಿಣಾಮ ಬೀರುವ ಸಾಧ್ಯತೆಯಿದೆ. ಇನ್ನು ಪೆಟ್ರೋಲ್‌ ಟ್ಯಾಂಕ್‌ನ್ನು ಸಂಪೂರ್ಣವಾಗಿ ತುಂಬಿಸುವ ವೇಳೆಯಲ್ಲಿಯೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಣಾಮಗಳನ್ನು ತಪ್ಪಿಸಲು ಸರಕಾರವೇ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿ : ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಇನ್ನಿಲ್ಲ

ಇದನ್ನೂ ಓದಿ : Maruti Fronx Vs Brezza : ಮಾರುತಿ ಫ್ರಾಂಕ್ಸ್ Vs ಮಾರುತಿ ಬ್ರೆಜ್ಜಾ ಹೋಲಿಕೆ; ಏನೆಲ್ಲಾ ವೈಶಿಷ್ಟ್ಯಗಳಿದೆ ಗೊತ್ತಾ..

Comments are closed.