ಪ್ರದೀಪ್‌ ಈಶ್ವರ್‌ ಸಾಕು ತಾಯಿ ರತ್ನಮ್ಮ ವಿಧಿವಶ

ಚಿಕ್ಕಬಳ್ಳಾಪುರ : ನೂತನ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್‌ ಈಶ್ವರ್‌ (Pradeep Eshwar) ಅವರ ಸಾಕು ತಾಯಿ ರತ್ನಮ್ಮ ಅವರು ವಿಧಿವಶರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ರತ್ನಮ್ಮ ವಿಧಿವಶರಾಗಿದ್ದಾರೆ. ಬೆಂಗಳೂರಿನಲ್ಲಿರುವ ಪ್ರದೀಪ್‌ ಈಶ್ವರ್‌ ಅವರು ತಾಯಿಯ ನಿಧನದ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಪಡೆಯಲು ಪೇರೇಸಂದ್ರ ಗ್ರಾಮಕ್ಕೆ ತೆರಳಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸಚಿವ ಡಾ.ಸುಧಾಕರ್‌ ಅವರನ್ನು ಸೋಲಿಸುವ ಮೂಲಕ ಪ್ರದೀಪ್‌ ಈಶ್ವರ್‌ ಶಾಸಕರಾಗಿ ಆಯ್ಕೆಯಾಗಿದ್ದರು. ತಂದೆ, ತಾಯಿ ಯನ್ನು ಕಳೆದುಕೊಂಡಿದ್ದ ಪ್ರದೀಪ್‌ ಈಶ್ವರ್‌ (Pradeep Eshwar) ಅವರನ್ನು ರತ್ನಮ್ಮ ಸಾಕಿ ಬೆಳೆಸಿದ್ದರು. ಪರಿಶ್ರಮ ನೀಟ್‌ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರದೀಪ್‌ ಈಶ್ವರ್‌ ನೆರವಾಗಿದ್ದರು.

ಪ್ರದೀಪ್‌ ಈಶ್ವರ್‌ ಜೀವಶಾಸ್ತ್ರ ಉಪನ್ಯಾಸಕರಾಗಿದ್ದಾರೆ. ಪರಿಶ್ರಮ ನೀಟ್‌ ಅಕಾಡೆಮಿಯನ್ನು ಸ್ಥಾಪಿಸುವ ಮೊದಲು ಅವರು ಭಾರತದ ಉದ್ದಗಲಕ್ಕೂ ಸಂಚರಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಮಾಡುವ ಕಾರ್ಯವನ್ನು ಮಾಡಿದ್ದಾರೆ. ರಾಜ್ಯದಲ್ಲಿಯೂ ಎಂಬಿಬಿಎಸ್‌ ಸೀಟುಗಳನ್ನು ಪಡೆಯುವ ನೂರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಅವರ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದಿರುವ ಹಲವು ವಿದ್ಯಾರ್ಥಿಗಳು ಭಾರತ ಬಹುತೇಕ ಉನ್ನತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.

ಇದೀಗ ಶಾಸಕರಾದ ನಂತರದಲ್ಲಿ ಪ್ರದೀಪ್‌ ಈಶ್ವರ್‌ ತಮ್ಮ ಕ್ಷೇತ್ರದಲ್ಲಿನ ಜನರ ಮನೆ ಮನೆಗೆ ತೆರಳಿ ತಮ್ಮ ನೋವು, ಸಂಕಷ್ಟ, ಸಮಸ್ಯೆಗಳನ್ನು ಆಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನೂ ನೀಡುತ್ತಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಜನರಿಗೆ ಭರವಸೆಯನ್ನು ಕೊಟ್ಟಿದ್ದಾರೆ. ತಾವು ಕೊಟ್ಟ ಮಾತಿನಂತೆ ಇದೀಗ ಪ್ರತೀ ಮನೆಗೆ ಮನೆಗೆ ಭೇಟಿ ನೀಡುತ್ತಿರುವ ಶಾಸಕ ಪ್ರದೀಪ್‌ ಈಶ್ವರ್‌ ಅವರ ಕಾರ್ಯ ಇದೀಗ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ :  2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ

ಇದನ್ನೂ ಓದಿ : ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳುವ ವೇಳೆ ದುರಂತ : ಯುವತಿ ಬಲಿ

ಇದನ್ನೂ ಓದಿ : ಬಾಲಕಿಯ ಪ್ರೀತಿಗಾಗಿ 14 ವರ್ಷದ ಸಹಪಾಠಿಯನ್ನೇ ಕೊಂದ ಸ್ನೇಹಿತರು

ಇದನ್ನೂ ಓದಿ : PAN-Aadhaar Link Check : ನಿಮ್ಮ ಪಾನ್‌ ಆಧಾರ್‌ನೊಂದಿಗೆ ಲಿಂಕ್‌ ಆಗಿದೆಯ್ಯಾ ಎಂದು ಇಲ್ಲಿ ಪರಿಶೀಲಿಸಿ

Comments are closed.