ಸೋಮವಾರ, ಏಪ್ರಿಲ್ 28, 2025
Homekarnatakaನೋವನುಂಡು ಪರರ ಸುಖ ಬಯಸುವ ಸೇವಕ : ಈಶ್ವರ ಮಲ್ಪೆಗೆ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ

ನೋವನುಂಡು ಪರರ ಸುಖ ಬಯಸುವ ಸೇವಕ : ಈಶ್ವರ ಮಲ್ಪೆಗೆ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ

- Advertisement -
  • ಆರ್‌.ಕೆ.ಬ್ರಹ್ಮಾವರ

ಕೋಟ : ಸಮಾಜ ಸೇವೆಗೆ ನೂರಾರು ಮುಖ, ಪ್ರಸ್ತುತ ಸಮಾಜದಲ್ಲಿ ಕೆಲವರು ತಾವು ಬುದ್ಧಿ ಜೀವಿಗಳು ತಾವು ಸಮಾಜ ಸೇವಕರು ಎಂದು ತಮ್ಮಮ್ಮ ತಾವೇ ಬಿಂಬಿಲಿಸಿಕೊಳ್ಳುವ ವ್ಯಕ್ತಿಗಳಿಗಿಂತ ಭಿನ್ನವಾಗಿ ನಿಲ್ಲುವವರು ಕೆಲವಷ್ಟೆ ಮಂದಿ. ಬೋರ್ಗೆರವ ಸಮುದ್ರದ ಜಲರಾಶಿಗೆ ಆಕರ್ಷಿತರಾಗಿ ನೀರಿನ ಸೆಳೆತಕ್ಕೆ ಸಿಲುಕಿ ಜೀವನ್ಮರಣ ಹೋರಾಟ ಮಾಡುತ್ತಿರುವ ವ್ಯಕ್ತಿಗಳಿಗೆ ಆಪ್ಪತ್ತ್ಭಾಂದವ ಎನಿಸಿಕೊಂಡು ಜೀವರಕ್ಷಕರಾದವರೇ ಈಶ್ವರ ಮಲ್ಪೆ.

ಸರಳ ಸಜ್ಜನ ವ್ಯಕ್ತಿತ್ವ ಉಳ್ಳ ಈಶ್ವರರವರು ಮಲ್ಪೆ ಪರಿಸರದಲ್ಲಿ ಚಿರಪರಿಚಿತರು. ಉಡುಪಿ ಜಿಲ್ಲೆಯ ಮಲ್ಪೆ ಬಂದರಿನ ಪರಿಸರದಲ್ಲಿ ಯಾವುದೇ ವ್ಯಕ್ತಿ ನೀರಿಗೆ ಬಿದ್ದರೂ ಅವರನ್ನು ಮೇಲೆತ್ತಿ ರಕ್ಷಿಸುವುದಲ್ಲದೇ ಸುಮಾರು 40 ಅಡಿ ಆಳದ ಕೆಸರಿನಲ್ಲಿ ಹುದುಗಿರುವ ಶವವನ್ನು ಮೇಲೆತ್ತಿ ಕುಟುಂಬಸ್ಥರಿಗೆ ನೀಡುವುದಲ್ಲದೇ ಇದುವರೆಗೆ ಸುಮಾರು 240 ಶವವನ್ನು ನೀರಿನಿಂದ ಮೇಲೆಕ್ಕೆತ್ತಿ ನೊಂದ ಮನಸ್ಸಿನ ಕುಟುಂಬಸ್ಥರಿಗೆ ಆಸರೆಯಾಗಿದ್ದಾರೆ.

ಯಾವುದೇ ವ್ಯಕ್ತಿ ನೀರಿಗೆ ಬಿದ್ದು ಕಣ್ಮರೆಯಾದಾಗ ಅವರ ಪತ್ತೆಗಾಗಿ ಜೀವರಕ್ಷ ದಳ ಅಥವಾ ಪೋಲಿಸ್ ಇಲಾಖೆಯಿಂದ ಮೊದಲು ಕರೆ ಬರುವುದು ಈಶ್ವರ ಮಲ್ಪೆ ಅವರಿಗೆ. ಯಾರದೇ ಕರೆ ಬಂದರೂ ಅವರ ಕರೆಗೆ ಶೀಘ್ರ ಸ್ಪಂದಿಸಿ ನೊಂದವರಿಗೆ ನೆರವಾಗುವುದು ಇವರ ಮಾನವೀಯ ಕೆಲಸ. ದುರಂತದಲ್ಲಿ ಮಡಿದವರ ಶವ ಮನೆಯವರಿಗೆ ತುಂಬಾ ಮುಖ್ಯ, ನೀರಲ್ಲಿ ಮುಳುಗಿ ಸತ್ತ ಅನೇಕ ಶವಗಳು ವಾರಗಟ್ಟಲೆ ಸಿಗದೆ ಕುಟುಂಬಸ್ಥರು ಪರಿತಪಿಸುವುದನ್ನು ಕಂಡು ಮೃತ ದೇಹವನ್ನಾದರೂ ಮನೆಯವರಿಗೆ ತಲುಪಿಸಬೇಕು ಎಂಬ ಮಾನವೀಯ ಧ್ಯೇಯದೊಂದಿಗೆ ಈ ಕಾರ್ಯವನ್ನು ಮಾಡುತ್ತಿದ್ದಾರೆ.

ತಮ್ಮ ಮಾನವೀಯ ಕಳಕಳಿಯ ಕೆಲಸಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸಿದವರಲ್ಲ. ಮೀನುಗಾರಿಕೆಗೆ ಹೊರಡುವ ಬೋಟುಗಳಿಗೆ ನೀರು ಸರಬರಾಜು ಮಾಡಿ ಅದರಲ್ಲಿ ಬರುವ ಹಣದಲ್ಲಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಕಡುಬಡತನದ ನಡುವಲ್ಲೇಹೆಂಡತಿ ಮಕ್ಕಳೊಂದಿಗೆ ಮಲ್ಪೆಯ ಬಲರಾಮ ನಗರದಲ್ಲಿ ವಾಸಿಸುತ್ತಿರುವ ಇವರದು ಚಿಕ್ಕಮನೆ. ಪ್ರಾಯ ಪ್ರಬುದ್ದರಾದ ಎರಡು ವಿಕಲಚೇತನ ಮಕ್ಕಳಿದ್ದುಅವರ ವೈದ್ಯಕೀಯ ಖರ್ಚಿಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗಿದೆ. ಆದರೂ ಈಶ್ವರ ಮಲ್ಪೆ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಮಾಜಸೇವೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ.

ಇದನ್ನೂ ಓದಿ : ಅಶಕ್ತ ಕುಟುಂಬಗಳಿಗೆ ನೆರವಾದ ಅಘೋರೇಶ್ವರ ಕಲಾರಂಗ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್

ಇದನ್ನೂ ಓದಿ : ಹಡಿಲು ಭೂಮಿಯಲ್ಲಿ ಕೃಷಿ, ಅನಾಥಾಶ್ರಮಕ್ಕೆ ಅಕ್ಕಿ ವಿತರಣೆ : ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

ಈಶ್ವರ ಮಲ್ಪೆ ಅವರ ಇವರ ಮಾನವೀಯ ಸೇವೆಯನ್ನು ಸ್ಮರಿಸಿ ಶ್ರೀ ಅಘೋರೇಶ್ವರ ಕಲಾರಂಗ ( ರಿ) ಚಿತ್ರಪಾಡಿ ಕಾರ್ತಟ್ಟು, ಪ್ರತಿವರ್ಷ ಸಾಧಕರಿಗೆ ನೀಡುವ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸುತ್ತಿದೆ. ನವೆಂಬರ್ 13ರ ಶನಿವಾರ ಸಾಲಿಗ್ರಾಮ ಚಿತ್ರಪಾಡಿಯ ಶ್ರೀ ಅಘೋರೇಶ್ವರ ಸಭಾಭವನದಲ್ಲಿ ಸಂಜೆ 7 ಗಂಟೆಗೆ ನಡೆಯಲಿದ್ದು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

(Ishwar Malpe is the Aghoreshwar Rajyotsava Award)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular