Jacqueline Fernandez : ದುಬೈ ಈಜುಕೊಳದಲ್ಲಿ ಶ್ರೀಲಂಕಾ ಸುಂದರಿ : ಜಾಕ್ವಲಿನ್ ಹಾಟ್ ಪೋಟೋಗೆ ಮರುಳಾದ ಫ್ಯಾನ್ಸ್

ಕೊರೋನಾ ಕಸಿದುಕೊಂಡಿದ್ದ ಖುಷಿ ಹುಡುಕೋಕೆ ಹೊರಟ ಸೆಲೆಬ್ರೆಟಿಗಳು ನಟ-ನಟಿಯರು ಒಂದಾಂದ ಮೇಲೊಂದರಂತೆ ಪ್ರವಾಸ ಹೋಗ್ತಿದ್ದಾರೆ. ಅದರಲ್ಲಿ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ (Jacqueline Fernandez ) ಅಗ್ರಸ್ಥಾನದಲ್ಲಿದ್ದು ಪ್ರವಾಸದಲ್ಲೂ ಹಾಟ್ ಪೋಟೋಸ್ ಜೊತೆ ಅಭಿಮಾನಿಗಳನ್ನು ರಂಜಿಸಿದ್ದಾರೆ‌

ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿರುವ ನಟಿ ಜಾಕ್ವಲಿನ್ ಫರ್ನಾಂಡಿಸ್ ಈ ಬ್ರೇಕ್ ಸದುಪಯೋಗ ಪಡಿಸಿಕೊಳ್ಳಲು ದುಬೈಗೆ ಹಾರಿದ್ದಾರೆ‌. ಮರಳುಗಾಡಿನಲ್ಲಿ ಮೈ- ಮನ ರಿಲ್ಯಾಕ್ಸ್ ಆಗೋವಂತೆ ಎಂಜಾಯ್ ಮಾಡ್ತಿರೋ ಜಾಕ್ವಲಿನ್ ತಮ್ಮ ಪ್ರವಾಸದ ಅದ್ಭುತ ಕ್ಷಣಗಳನ್ನು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡೋದನ್ನು ಮರೆತಿಲ್ಲ.

ದುಬೈನ ಸ್ವಿಮ್ಮಿಂಗ್ ಪೂಲ್ ಒಂದರಲ್ಲಿ ನೀಲಿ ಸ್ವಿಮ್ ಶೂಟ್ ನಲ್ಲಿ ಹಾಟ್ ಪೋಟೋಗೆ ಪೋಸ್ ನೀಡಿರುವ ಜಾಕ್ವಲಿನ್ ಪೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಈ ಪೋಸ್ಟ್ ಗೆ ಪೂಲ್ ಬೇಬಿ ಎಂದು ಟ್ಯಾಗ್ ಲೈನ್ ನೀಡಿದ್ದಾರೆ.

ಜಾಕ್ವಲಿನ್ ಈ ಪೋಸ್ಟ್ ಗೆ ಬಾಲಿವುಡ್ ಸೆಲೆಬ್ರೆಟಿಗಳು ಹಾರ್ಟ್ ಇಮೋಜಿ ಜೊತೆ ಕಮೆಂಟ್ ಮಾಡಿದ್ದಾರೆ. ಮಾತ್ರವಲ್ಲ 5 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಈ ಪೋಸ್ಟ್ ಗೆ ಕಮೆಂಟ್ ಮಾಡಿ ಸಂಭ್ರಮಿಸಿದ್ದಾರೆ‌.

ಬಾಲಿವುಡ್ ಮಾತ್ರವಲ್ಲದೇ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟಿರುವ ಜಾಕ್ವಲಿನ್ ಫರ್ನಾಂಡಿಸ್ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣಾದ ಸ್ಪೆಶಲ್ ಸಾಂಗ್ ಗೆ ಸೊಂಟ ಬಳುಕಿಸಿದ್ದಾರೆ.

ಐಟಂ ಸಾಂಗ್ ಗೆ ಜಾಕ್ವಲಿನ್ ಬರೋಬ್ಬರಿ 3 ಕೋಟಿ ಹಣಪಡೆದಿದ್ದಾರೆ. ಐಟಂ ಸಾಂಗ್ ಗಾಗಿ ಕನ್ನಡಕ್ಕೆ ಬಂದ ಜಾಕ್ವಲಿನ್ ವಿಕ್ರಾಂತ್ ರೋಣಾ ಮೇಕಿಂಗ್ ಗೆ ಮರುಳಾಗಿ ಸ್ಪೆಶಲ್ ಪಾತ್ರ ವೊಂದರಲ್ಲೂ ನಟಿಸಿದ್ದಾರಂತೆ.

ಜಾಕ್ವಲಿನ್ ಫರ್ನಾಂಡಿಸ್ ಡ್ಯಾನ್ಸ್ ನ್ನು ಸುದೀಪ್ ಮೆಚ್ಚಿಕೊಂಡಿದ್ದು ಸೋಷಿಯಲ್‌ಮೀಡಿಯಾದಲ್ಲಿ ಜಾಕ್ವಲಿನ್ ಜೊತೆಗಿನ ಪೋಟೋ ಹಂಚಿಕೊಂಡಿದ್ದರು. ಈಗ ಜಾಕ್ವಲಿನ್ ದುಬೈ ನಲ್ಲಿ ಜಾಲಿಡೇಸ್ ಕಳೆಯುತ್ತಿದ್ದು, ಹಾಟ್ ಹಾಟ್ ಪೋಟೋಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇದನ್ನೂ ಓದಿ : ಫರ್ಸ್ಟ್ ನೈಟ್ ನಲ್ಲಿ ಏನು ಮಾಡ್ತಾರೇ? ಅದನ್ನೇ ಸಿನಿಮಾದಲ್ಲಿ ಮಾಡಿದ್ದೇವೆ: ರಚಿತಾ ಬೋಲ್ಡ್ ಆನ್ಸರ್

ಇದನ್ನೂ ಓದಿ : Rachita Ram : Expose ಬಳಿಕ ಎಣ್ಣೆ ಹಾಡು : ಡಿಂಪಲ್ ಕ್ವೀನ್ ಅವತಾರಕ್ಕೆ ಮೆಚ್ಚಿದ ಫ್ಯಾನ್ಸ್

(Jacqueline Fernandez chills like this in Dubai see pool baby photos)

Comments are closed.