Udupi News : ಉಡುಪಿ ಕಾಲೇಜು ಶೌಚಾಲಯ ವಿಡಿಯೋ ಪ್ರಕರಣ : ಸಿಐಡಿ ಪ್ರಥಮ ಹಂತದ ತನಿಖೆ ಮುಕ್ತಾಯ

ಉಡುಪಿ : (udupi news) ಉಡುಪಿಯ ಖಾಸಗಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನಲ್ಲಿ (Udupi Netrajyothi college) ನಡೆದಿರುವ ಶೌಚಾಲಯ ವಿಡಿಯೋ ಶೂಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಆದರೆ ವಿದ್ಯಾರ್ಥಿಗಳ ಮೊಬೈಲ್‌ ರಿಟ್ರೀವ್‌ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಉಡುಪಿಯ (Udupi Netrajyothi college) ಕಾಲೇಜಿನಲ್ಲಿ ನಡೆದಿರುವ ವಿಡಿಯೋ ಶೂಟಿಂಗ್‌ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡಿದೆ. ಸಾರ್ವಜನಿಕರಿಂದ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಉಡುಪಿಗೆ ಆಗಮಿಸಿ ಪ್ರಥಮ ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ಶೂಟಿಂಗ್‌ ಮಾಡಿರುವ ಮೊಬೈಲ್‌ಗಳನ್ನೂ ಈಗಾಗಲೇ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಬೆಂಗಳೂರಿನ ಲ್ಯಾಬ್‌ ನಿಂದ ವಿಡಿಯೋ ಹಾಗೂ ಪೋಟೋಗಳು ಮೊಬೈಲ್‌ನಿಂದ ರಿಟ್ರೀವ್‌ ಮಾಡಲು ಸಾಧ್ಯವಾಗದೇ ಇದ್ರೆ, ಅದನ್ನು ಗುಜರಾತ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲು ಫ್ಲ್ಯಾನ್‌ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ : Vishwakarma scheme : ವಿಶ್ವಕರ್ಮ ಯೋಜನೆಗೆ 13 ಸಾವಿರ ಕೋಟಿ ರೂ. ಅನುಮೋದನೆ ನೀಡಿದ ಮೋದಿ

ಗುಜರಾತ್‌ನಲ್ಲಿರುವ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಮೊಬೈಲ್‌ ರಿಟ್ರೀವ್‌ ಮಾಡುವುದು ಅಲ್ಲಿನ ತಜ್ಞರಿಗೆ ಸುಲಭವಾಗಲಿದೆ. ಮೂಲಕ ಫೋನ್ ರಿಟ್ರೈವ್ ಸಿಐಡಿ ಎಡಿಜಿಪಿ ಮನೀಶ್ ಕರ್ಬಿಕರ್, ಎಸ್ ಪಿ ರಾಘವೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ತನಿಖಾಧಿಕಾರಿ ಡಿವೈಎಸ್ಪಿ ಅಂಜುಮಾಲ ಅವರ ತಂಡ ಕಳೆದೊಂದು ವಾರದಿಂದಲೂ ಉಡುಪಿಯಲ್ಲಿ ಉಳಿದುಕೊಂಡು ಪ್ರಕರಣ ಕುರಿತು ತನಿಖೆಯನ್ನು ಪೂರ್ಣಗೊಳಿಸಿದೆ. ಸದ್ಯ ಬೆಂಗಳೂರಿಗೆ ತೆರಳಿರುವ ತಂಡ ಮೊಬೈಲ್‌ಗೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್‌ನಿಂದ ವರದಿಗಾಗಿ ಕಾಯುತ್ತಿದೆ. ಇದನ್ನೂ ಓದಿ : Udupi DC Dr. Vidyakumari : ಉಡುಪಿಯ ಪ್ರವಾಸಿ ತಾಣಗಳ ಭೇಟಿಗೆ ಅಗಸ್ಟ್ ಅಂತ್ಯದವರೆಗೂ ನಿರ್ಬಂಧ : ಉಡುಪಿ ಡಿಸಿ ಡಾ.ವಿದ್ಯಾಕುಮಾರಿ

ಮೊಬೈಲ್‌ನಲ್ಲಿರುವ ವಿಡಿಯೋ ಹಾಗೂ ಪೋಟೋಗಳನ್ನು ರಿಟ್ರೀವ್‌ ಮಾಡಲು ಸಾಧ್ಯವಾದರೆ ಮಾತ್ರವೇ ಪ್ರಕರಣ ಕುರಿತು ಸತ್ಯಾಸತ್ಯತೆ ಹೊರಬೀಳುವುದಕ್ಕೆ ಸಾಧ್ಯ. ಉಳಿದಂತೆ ಸಿಐಡಿ ಅಧಿಕಾರಿಗಳ ತಂಡ ಕಾಲೇಜಿನಲ್ಲಿನ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದೆ. ವಿದ್ಯಾರ್ಥಿಗಳಿಂದಲೂ ಮಾಹಿತಿಯನ್ನು ಕಲೆ ಹಾಕಿದೆ. ಎಲ್ಲಾ ಆಂಗಲ್‌ಗಳಿಂದಲೂ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Comments are closed.