Unlock 2.0 ಜಾರಿಗೆ ಸಿದ್ದತೆ : ಆದ್ರೆ ಈ ಜಿಲ್ಲೆಗಳು ಅನ್ ಲಾಕ್ ಆಗೋದು ಅನುಮಾನ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಿರುವ ಜಿಲ್ಲೆಗಳಲ್ಲಿ ಈಗಾಗಲೇ ಮೊದಲ ಹಂತದ ಅನ್ ಲಾಕ್ ಪ್ರಕ್ರಿಯೆ ಜಾರಿ ಮಾಡಲಾಗಿದೆ. ಜೂನ್ 21ರಿಂದ ಎರಡನೇ ಹಂತದ ಅನ್ ಲಾಕ್ ಜಾರಿಗೆ ಸಿದ್ದತೆ ನಡೆದಿದೆ. ಆದ್ರೆ ಪಾಸಿಟಿವಿಟಿ ರೇಟ್ 5ಕ್ಕಿಂತ ಹೆಚ್ಚಿರುವ ಜಿಲ್ಲೆಗಳು ಅನ್ ಲಾಕ್ ಆಗೋದು ಅನುಮಾನ.

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಾರದ 11 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಲ್ಲಿ ಅನ್ ಲಾಕ್ ಜಾರಿಯಲ್ಲಿದೆ. ಆರಂಭದಲ್ಲಿ ಅಗತ್ಯವಸ್ತು ಖರೀದಿ ಅವಧಿ ವಿಸ್ತರಣೆ ಸೇರಿದಂತೆ ಕೆಲವೊಂದು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಆದರೆ ಆದ್ರೀಗ ಜೂನ್ 21ರಿಂದ ಎರಡನೇ ಹಂತದಲ್ಲಿ ಎರಡನೇ ಹಂತದ ಅನ್ ಲಾಕ್ ಪ್ರಕ್ರಿಯೆ ಜಾರಿ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಪ್ರಮುಖವಾಗಿ ಬಟ್ಟೆ ಅಂಗಡಿ, ಚಿನ್ನಾಭರಣಗಳ ಮಳಿಗೆ ಸೇರಿದಂತೆ ಹಲವು ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿಯನ್ನು ನೀಡುವ ಸಾಧ್ಯತೆಯಿದೆ. ಬೆಂಗಳೂರಲ್ಲಿ ಅನ್ ಲಾಕ್ ನಿಯಮ ಇನ್ನಷ್ಟು ಸಡಿಲಿಕೆಯಾಗುವ ಸಾಧ್ಯತೆಯಿದೆ.

ಸಾರಿಗೆ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆಯೂ ಇದ್ದು, ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ಬಸ್ ಸಂಚಾರಕ್ಕೆ ಅನುಮತಿ ಯನ್ನು ನೀಡುವ ಸಾಧ್ಯತೆಯಿದ್ದು, ಶೇ.50ರಷ್ಟು ಪ್ರಯಾಣಿಕರ ಪ್ರಯಾಣಕ್ಕೆ ಅನುಮತಿ ನೀಡುವ ಸಾಧ್ಯತೆಯೂ ಇದೆ. ಆದ್ರೆ ರಾಜ್ಯದಾದ್ಯಂತ ಈ ನಿಯಮ ವಿಸ್ತರಣೆಯಾಗೋದು ಅನುಮಾನ. ಅಲ್ಲದೇ ಖಾಸಗಿ ಬಸ್ ಗಳ ಓಡಾಟಕ್ಕೆ ಅನುಮತಿ ಸಿಗುತ್ತೆ ಅಂತಾನೂ ಹೇಳೊದಕ್ಕೆ ಸಾಧ್ಯವಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಖಾಸಗಿ ಬಸ್ ಗಳೇ ಹೆಚ್ಚಾಗಿ ಸಂಚಾರ ಮಾಡುತ್ತಿರೋದ್ರಿಂದಾಗಿ ಆರಂಭಿಕ ಹಂತದಲ್ಲಿ ಬೆಂಗಳೂರಲ್ಲಿ ಬಸ್ ಓಡಾಟ ನಡೆಸಿ, ನಂತರ ಜಿಲ್ಲೆಗಳಿಗೆ ವಿಸ್ತರಣೆ ಮಾಡುವ ಸಾಧ್ಯತೆಯಿದೆ.

ಅನ್ ಲಾಕ್ ಆಗಿರುವ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳವಾಗದೇ ಇದ್ರೆ ಅನ್ ಲಾಕ್ 2.0 ಜಾರಿಯಾಗಲಿದೆ. ಆದ್ರೆ ಈಗಾಗಲೇ ಪಾಸಿಟಿವಿಟಿ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆಯಾಗೋದು ಪಕ್ಕಾ ಅನ್ನಾಗುತ್ತಿದೆ. ಪ್ರಮುಖವಾಗಿ ಚಿಕ್ಕಮಗಳೂರಲ್ಲಿ ಅತೀ ಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿದ್ದು, ಸದ್ಯ ಚಿಕ್ಕಮಗಳೂರಲ್ಲಿ ಶೇ.20ರಷ್ಟು ಪಾಸಿಟಿವಿಟಿ ರೇಟ್ ಇದೆ. ಉಳಿದಂತೆ ದಾವಣಗೆರೆ 10.38, ತುಮಕೂರು ಶೇ.8, ಶಿವಮೊಗ್ಗ ಶೇ.8, ಬೆಳಗಾವಿಯಲ್ಲಿ ಶೇ.7.7, ದಕ್ಷಿಣ ಕನ್ನಡ ಶೇ.7.19, ಹಾಸನ ಶೇ.6.61, ಚಿತ್ರದುರ್ಗ 6.64, ಮಂಡ್ಯ 5.36, ಕೊಡಗು ಶೇ.6.06ರಷ್ಟು ಪಾಸಿಟಿವಿಟಿ ರೇಟ್ ಹೊಂದಿದೆ.

ಪ್ರಮುಖವಾಗಿ ಐಸಿಎಂಆರ್ ಮಾರ್ಗದರ್ಶನದ ಪ್ರಕಾರ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ತೆರವು ಮಾಡಬಹುದಾಗಿದೆ. ಆದರೆ ಚಿಕ್ಕಮಗಳೂರು, ದಾವಣಗೆರೆ, ತುಮಕೂರು, ಶಿವಮೊಗ್ಗ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶೇ.7ಕ್ಕಿಂತಲೂ ಅಧಿಕ ಇರುವುದರಿಂದ ಸದ್ಯ ಲಾಕ್ ಡೌನ್ ಆದೇಶ ಮತ್ತೊಂದು ವಾರ ವಿಸ್ತರಣೆಯಾಗೋದು ಬಹುತೇಕ ಖಚಿತ. ಅಷ್ಟೇ ಅಲ್ಲದೇ ಲಾಕ್ ಡೌನ್ ಜಾರಿಯಲ್ಲಿರುವ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಅನ್ ಲಾಕ್ ಆದೇಶ ಜಾರಿಯಾಗುತ್ತಿದ್ದಂತೆಯೇ ರಾಜ್ಯದ ಬಹುತೇಕ ಜಿಲ್ಲೆಗಳು ಸಹಜ ಸ್ಥಿತಿಗೆ ಮರಳಿದಂತೆ ಬಾಸವಾಗು ತ್ತಿದೆ. ಆದರೆ ಜನರು ಮೈ ಮರೆತು ಕೊರೊನಾ ಸೋಂಕು ಹೆಚ್ಚಳವಾದ್ರೆ ಮತ್ತೊಮ್ಮೆ ಲಾಕ್ ಡೌನ್ ಆದೇಶ ಜಾರಿಯಾಗುವ ಸಾಧ್ಯತೆಯೂ ಇದೆ.

Comments are closed.