B. S. Yediyurappa: ಮನಿ ಲ್ಯಾಂಡ್ರಿಂಗ್ ಆರೋಪ….! ನಾಯಕತ್ವ ಬದಲಾವಣೆ ಸಂಕಷ್ಟದಲ್ಲಿರೋ ಸಿಎಂಗೆ ಕಾದಿದೆ ಇಡಿ ಕಾಟ…!!

ಸಿಎಂ ಬಿಎಸ್ವೈ ತಲೆ ಮೇಲೆ ನಾಯಕತ್ವ ಬದಲಾವಣೆ ತೂಗುಗತ್ತಿ ತೂಗುತ್ತಿರುವಾಗಲೇ ಮನಿಲ್ಯಾಂಡ್ರಿಂಗ್ ಪ್ರಕರಣ ಉರುಳಾಗಿ ಪರಿಣಮಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಸಿಎಂ ಬಿಎಸ್ವೈ ಹಾಗೂ ಕುಟುಂಬದ ಸದಸ್ಯರ ವಿರುದ್ಧ ನವದೆಹಲಿಯ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಕೆಯಾಗಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನವದೆಹಲಿಗೆ ತೆರಳಿದ್ದು, ಅಲ್ಲಿನ ಜಾರಿ ನಿರ್ದೇಶನಾಲಯ ಕಚೇರಿಗೆ ತೆರಳಿ ಸಿಎಂ ಬಿಎಸ್ವೈ, ಪುತ್ರ ವಿಜಯೇಂದ್ರ, ಬಿಎಸ್ವೈ ಪುತ್ರಿ ಪದ್ಮಾವತಿ, ಅಳಿಯ ಹಾಗೂ ಮೊಮ್ಮಗನ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಅಧಿಕಾರ ದುರುಪಯೋಗ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಆರೋಪ ಕೇಳಿಬಂದಿದೆ. ಈ ಸಂಬಂಧ ಈಗಾಗಲೇ ದಾಖಲೆ ಬಿಡುಗಡೆ ಮಾಡಿದ್ದ ಟಿ.ಜೆ.ಅಬ್ರಹಾಂ ಬಿಎಸ್ವೈ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆದರೆ ಈ ಆರೋಪಕ್ಕೆ ಬೆಲೆ ಬಾರದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಮೊರೆ ಹೋಗಿದ್ದಾರೆ.

ಟಿ.ಜೆ.ಅಬ್ರಹಾಂ ಆರೋಪದ ಪ್ರಕಾರ ಸಿಎಂ ಬಿಎಸ್ವೈ ಮೊದಲ ಆರೋಪಿಯಾಗಿದ್ದು, ಸಿಎಂ ಪುತ್ರ ವಿಜಯೇಂದ್ರ್ 2ನೇ ಆರೋಪಿ. ಸಿಎಂ ಮೊಮ್ಮಗ ಶಶಿಧರ್ ಮರಡಿ ಮೂರನೇ ಆರೋಪಿಯಾಗಿದ್ದು, ಸಿಎಂ ಪುತ್ರಿ ಪದ್ಮಾವತಿ ಹಾಗೂ ಅಳಿಯ ಸಂಜಯ್ ನಾಲ್ಕನೇ ಮತ್ತು ಬಿಲ್ಡರ್ ಚಂದ್ರಕಾಂತ್ 5 ನೇ ಆರೋಪಿ ಸ್ಥಾನದಲ್ಲಿದ್ದಾರೆ.

ಈಗಾಗಲೇ ಸಿಎಂ ಬಿಎಸ್ವೈ ವಿರುದ್ಧ ಬಿಜೆಪಿಯಲ್ಲೇ ಶಾಸಕರು ಅಸಮಧಾನಗೊಂಡಿದ್ದು ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಇದೀಗ ಇಡಿಗೂ ಬಿಎಸ್ವೈ ವಿರುದ್ಧ ದೂರು ದಾಖಲಾಗಿದ್ದು, ಬಿಎಸ್ವೈ ಇಡಿ ಸಂಕಷ್ಟವೂ ಕಾದಿದೆ ಎನ್ನಲಾಗುತ್ತಿದೆ.

ಹಣಕಾಸಿನ ಅವ್ಯವಹಾರದ ಆರೋಪ ಇದೀಗ ಸಿಎಂ ಬಿಎಸ್ವೈ ಕುರ್ಚಿಗೆ ಕಂಟಕ ತರವು ಸಾಧ್ಯತೆ ದಟ್ಟವಾಗಿದೆ. ಇಡಿಗೆ ಟಿ.ಜೆ.ಅಬ್ರಹಾಂ 2020 ನವೆಂಬರ್ 27 ರಂದೇ ದೂರು ನೀಡಿದ್ದು, ಈಗ ಪ್ರಕರಣ ವಿಚಾರಣೆಗೆ ಬರಲಿದೆ.

Comments are closed.