Unlock :ರಾಜ್ಯದಲ್ಲಿ ಸಿದ್ದವಾಯ್ತು ಮಾಸ್ಟರ್ ಪ್ಲ್ಯಾನ್ : ಶೇ.5ಕ್ಕಿಂತ ಕಡಿಮೆಯಿರೋ ಜಿಲ್ಲೆಗಳಲ್ಲಿ ಅನ್ ಲಾಕ್ ಪಕ್ಕಾ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ತೆರವು ಮಾಡಲು ಮಾಸ್ಟರ್ ಪ್ಲ್ಯಾನ್ ಸಿದ್ದಗೊಂಡಿದೆ. ಮೂರು ಹಂತಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆಯಿರುವ ಜಿಲ್ಲೆಗಳು ಅನ್ ಲಾಕ್ ಆಗೋದು ಬಹುತೇಕ ಪಕ್ಕಾ.

ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.7.5ರಷ್ಟಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯ 7 ಜಿಲ್ಲೆಗಳಲ್ಲಿ ಶೇ.5ಕ್ಕಿಂತಲೂ ಕಡಿಮೆ ಪಾಸಿಟಿವಿಟಿ ರೇಟ್ ಹೊಂದಿವೆ. ರಾಜ್ಯದಲ್ಲಿಯೇ ಬೀದರ್ ಅತ್ಯಂತ ಕಡಿಮೆ ಪಾಸಿಟಿವಿಟಿ ರೇಟ್ ಹೊಂದಿದೆ. ಬೀದರ್ ಶೇ.0.55 ಪಾಸಿಟಿವಿಟಿ ರೇಟ್ ಹೊಂದಿದ್ದರೆ, ಕಲಬುರಗಿ ಶೇ.2.5, ಹಾವೇರಿ ಶೇ.3.2, ಯಾದಗಿರಿ ಶೇ.3,3, ಬಾಗಲಕೋಟೆ 4.5, ಬೆಂಗಳೂರು 4.52, ಹಾಗೂ ರಾಮನಗರ 4.8 ಪಾಸಿಟಿವಿಟಿ ರೇಟ್ ಹೊಂದಿವೆ. ಇನ್ನು 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಕಡಿಮೆಯಿದೆ. ಆದ್ರೆ ಮೈಸೂರು, ತುಮಕೂರು, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇ.10ಕ್ಕಿಂತಲೂ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಕೂಡ ಲಾಕ್ ಡೌನ್ ತೆರವು ಮಾಡಲು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಇನ್ನು ಐಸಿಎಂಆರ್ ಶೇ.10ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇದ್ದರೆ ಅಂತಹ ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶವನ್ನು ತೆರವು ಮಾಡಬಹುದು, ಅಲ್ಲದೇ ಶೇ.5ಕ್ಕಿಂತ ಕಡಿಮೆಯಿದ್ದರೆ ಸಂಪೂರ್ಣವಾಗಿ ಅನ್ ಲಾಕ್ ಮಾಡಿ ಅಂತ ಸೂಚನೆಯನ್ನು ಕೊಟ್ಟಿದೆ. ಹೀಗಾಗಿಯೇ ರಾಜ್ಯ ಸರಕಾರ ಈಗಾಗಲೇ ಮೂರು ಹಂತಗಳಲ್ಲಿ ಲಾಕ್ ಡೌನ್ ತೆರವಿಗೆ ಮುಂದಾಗಿದೆ. ಅನ್ ಲಾಕ್ ಆದೇಶದ ಬ್ಲ್ಯೂ ಪ್ರಿಂಟ್ ಸಿದ್ದವಾಗಿದ್ದು, ನಾಳೆ ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಅಲ್ಲದೇ ಸಚಿವರ ಜೊತೆ ಸಭೆಯನ್ನು ನಡೆಸಿ ನಂತರ ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ.

Comments are closed.