UT Khader:ಪಿಎಫ್​ಐ ಬ್ಯಾನ್​ : ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಕಾಂಗ್ರೆಸ್​ ನಾಯಕ ಯು.ಟಿ ಖಾದರ್​

ಮಂಗಳೂರು : UT Khader: ಎನ್​ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪಿಎಫ್​ಐ ಹಾಗೂ ಅದರ ಸಹಸಂಘಟನೆಗಳನ್ನು ಬ್ಯಾನ್​ ಮಾಡಲಾಗಿದೆ. ಈ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ಉಪ ನಾಯಕ ಯು.ಟಿ ಖಾದರ್​, ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡುವ ಯಾವುದೇ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು .ಇದು ಸರ್ಕಾರದ ಜವಾಬ್ದಾರಿ, ಈ ರೀತಿಯ ಕೆಲಸ ಮಾಡುವ ಯಾವುದೇ ಸಂಘ ಸಂಸ್ಥೆಗಳ ಮೇಲೆ ಕ್ರಮ ಆಗಲಿ ಎಂದು ಯು.ಟಿ ಖಾದರ್​ ಆಗ್ರಹಿಸಿದ್ದಾರೆ.

ದೇಶದಲ್ಲಿ ಹಲ್ಲೆ, ಅಶಾಂತಿ ಹಾಗೂ ಕೋಮುದ್ವೇಷವನ್ನು ಹುಟ್ಟು ಹಾಕಲು ಯತ್ನಿಸುತ್ತಿರುವ ಯಾವುದೇ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡದೇ ಸದುದ್ದೇಶದಿಂದ ಸರ್ಕಾರವು ಕ್ರಮ ಕೈಗೊಳ್ಳಬೇಕು. ಒಂದೇ ಕ್ರಮದ ಮೂಲಕ ಭವಿಷ್ಯದಲ್ಲಿ ದೇಶದಲ್ಲಿ ಅಶಾಂತಿ ಎನ್ನುವುದು ಕಡಿಮೆಯಾಗಬೇಕು.ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಅಂದರೆ ಇಂತಹ ಕ್ರಮಗಳು ಅಗತ್ಯ ಎಂದು ಯು.ಟಿ ಖಾದರ್​ ಹೇಳಿದ್ದಾರೆ.

ಯಾವುದೇ ಸಂಘಟನೆಗಳನ್ನು ಬ್ಯಾನ್​ ಮಾಡುವ ಸಂದರ್ಭದಲ್ಲಿ ಕೋರ್ಟ್ ಹಾಗೂ ಕಾನೂನು ಎಲ್ಲವೂ ಬೇಕಾಗುತ್ತದೆ. ಸಮಾಜ ಒಡೆಯುವ ಕೆಲಸವಾಗುತ್ತಿದ್ದರೆ ಇಂತಹ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ ಎನ್ನುವುದು ಇರಬೇಕು. ಇದರಿಂದ ರಾಜಕೀಯವಾಗಿ ಯಾವೆಲ್ಲ ಪರಿಣಾಮ ಆಗುತ್ತೆ ಅನ್ನೋದು ನನಗೆ ಗೊತ್ತಿಲ್ಲ. ದೇಶದಲ್ಲಿ ಕೋಮುದ್ವೇಷದ ಕಾರಣಕ್ಕೆ ಕೊಲೆಗಳಾಗುತ್ತಿದೆ. ಇಂತಹದ್ದು ಕಣ್ಣಿಗೆ ಬಿದ್ದಾಗ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸತ್ತವರ ವಿಚಾರದಲ್ಲಿ ಪರಿಹಾರ ಕೊಡುವುದರಲ್ಲಿಯೂ ತಾರತಮ್ಯ ನಡೆಯುತ್ತಿದೆ ಎಂಬ ಆರೋಪವಿದೆ. ಹೀಗಾಗಿ ಸರ್ಕಾರಗಳು ಈ ವಿಚಾರದಲ್ಲಿಯೂ ಸಮಾನತೆಯ ಕ್ರಮವನ್ನು ಕೈಗೊಳ್ಳಬೇಕು ಎಂದು ಯು.ಟಿ ಖಾದರ್​ ಆಗ್ರಹಿಸಿದ್ದಾರೆ.

ಇದನ್ನು ಓದಿ : Syed Mushtaq Ali Trophy 2022 : ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ ಸಂಭಾವ್ಯ ತಂಡದಿಂದ ಕರುಣ್, ಸಮರ್ಥ್, ಸಿದ್ಧಾರ್ಥ್ ಔಟ್

ಇದನ್ನೂ ಓದಿ : Hardik Pandya Natasha Stankovic : ಪತ್ನಿಯ ಫ್ಯಾಮಿಲಿಯನ್ನು ಮೊದಲ ಬಾರಿ ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ.. ಅಳಿಯನನ್ನು ನೋಡಿ ಅತ್ತೆ-ಮಾವ ಮಾಡಿದ್ದೇನು ಗೊತ್ತಾ?

UT Khader said that PFI ban order is correct

Comments are closed.