V Somanna resign politics: ಕೆ.ಎಸ್‌ ಈಶ್ವರಪ್ಪ ಬೆನ್ನಲ್ಲೇ ವಿ. ಸೋಮಣ್ಣ ರಾಜಕೀಯಕ್ಕೆ ರಾಜಿನಾಮೆ ?

ಬೆಂಗಳೂರು : (V Somanna resign politics) ರಾಜ್ಯ ರಾಜಕೀಯದಲ್ಲಿ ಚುನಾವಣೆ ದಿನ ಹತ್ತಿರ ಬರುತ್ತಿದೆ. ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರಿದ ಗದ್ದುಗೆ ಹಿಡಿಯಬೇಕೆಂದು ಮೂರು ರಾಜಕೀಯ ಪಕ್ಷಗಳು ಪಣತೊಟ್ಟಿವೆ. ಮೂರು ಪಕ್ಷಗಳು ಈಗಾಗಲೆ ಭಾಗಶಃ ಪ್ರಚಾರ ಕಾರ್ಯವನ್ನು ಮುಗಿಸಿದ್ದು, ಕೊನೆ ಹಂತದ ಮತದಾರ ಮನವೊಲಿಕೆ ಅಣಿಯಾಗಿವೆ. ಇನ್ನು ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಮತ್ತು ಜೆಡಿಎಸ್ 1 ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಮಾತ್ರ ಇಂದು ನಾಳೆ ಎನ್ನುತ್ತಿದೆ. ಈ ಮಧ್ಯೆ ಬಿಜೆಪಿ ಪಕ್ಷದ ಒಬ್ಬ ಅತ್ಯುನ್ನತ ನಾಯಕ ಶಿವಮೊಗ್ಗ ಕ್ಷೇತ್ರದ ಕೆ.ಎಸ್‌ ಈಶ್ವರಪ್ಪನವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ವಿ.ಸೋಮಣ್ಣ ಅವರು ಕೂಡ ರಾಜಕೀಯಕ್ಕೆ ರಾಜಿನಾಮೆ ನೀಡಲಿದ್ದಾರೆ.

ಚುನಾವಣಾ ರಾಜಕೀಯಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ಪುತ್ರನಿಗೆ ಟಿಕೆಟ್ ಬೇಕಾದರೆ ರಾಜಕೀಯ ನಿವೃತ್ತಿ ಘೋಷಿಸಿ ಎಂದು ಸಚಿವ ಸೋಮಣ್ಣಗೆ ಹೈಕಮಾಂಡ್ ಸಂದೇಶ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಸಚಿವ ಸೋಮಣ್ಣ ಮುಂದಿನ ನಡೆ ಬಹಳ ಕುತೂಹಲ ಮೂಡಿಸಿದೆ. ಒಂದೇ ಕುಟುಂಬಕ್ಕೆ 2 ಟಿಕೆಟ್ ನೀಡಲು ಆಗಲ್ಲ ಪುತ್ರನಿಗೆ ಟಿಕೆಟ್ ಬೇಕಾದರೆ ರಾಜಕೀಯ ನಿವೃತ್ತಿ (V Somanna resign politics) ಘೋಷಿಸಿ ಎಂದು ಸಚಿವ ಸೋಮಣ್ಣಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

ಸಚಿವ ವಿ.ಸೋಮಣ್ಣ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಾರೋ ಅಥವಾ ಪುತ್ರನಿಗೆ ಟಿಕೆಟ್ ಕೊಡಿಸಿ, ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೋ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ. ಮೇಲಿಂದ ಮೇಲೆ ಬಿಜೆಪಿ ಪಕ್ಷದ ಬಹುಮುಖ್ಯ ನಾಯಕರುಗಳು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದು, ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈಗಾಗಲೇ ಅಭ್ಯರ್ಥಿಗಳ ಟಿಕೆಟ್‌ ಫೈನಲ್‌ ಮಾಡಲು ಹೆಣಗಾಡುತ್ತಿರುವ ಪಕ್ಷಕ್ಕೆ ಪಟ್ಟಿ ಬಿಡುಗಡೆಗೂ ಮೊದಲೇ ನಾಯಕರು ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದು ಇನ್ನೊಂದು ತಲೆನೋವಾಗಿದೆ.

ಇದನ್ನೂ ಓದಿ : KS Eshwarappa retirement : ಚುನಾವಣಾ ರಾಜಕೀಯಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ

ಚುನಾವಣೆ ಘೋಷಣೆಗೂ ಮೊದಲೇ ಬಿಜೆಪಿ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತಮ್ಮ ವಯಸ್ಸಿನ ಕಾರಣಗಳನ್ನು ಹೇಳಿ ರಾಜಕೀಯದಿಂದ ನಿವೃತ್ತಿ ಪಡೆದಿದ್ದರು. ಇದಾದ ಬಳಿಕ ಕಳೆದ ಸೋಮವಾರ ಕುಂದಾಪುರದ ವಾಜಪೇಯಿ ಅಂತ ಕರೆಸಿಕೊಳ್ಳುತ್ತಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಇದು ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಒಂದು ದೊಡ್ಡ ಹೊಡೆತವಾಗಿತ್ತು. ಇದಾದ ಬಳಿಕ ಇದೀಗ ಶಿವಮೊಗ್ಗದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಎಸ್‌ ಈಶ್ವರಪ್ಪ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿಯ ಹಿರಿಯ ನಾಯಕ ವಿ ಸೋಮಣ್ಣ ಅವರು ಕೂಡ ರಾಜಕೀಯದಿಂದ ಹಿಂದೆ ಸರಿಯಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Lakshmana Savadi : ಬಿಜೆಪಿ ಟಿಕೆಟ್‌ ತಪ್ಪಿದ್ರೆ ಸವದಿ ಕೈ ಸೇರೋದು ಪಕ್ಕಾನಾ ?

V Somanna resign politics: KS Eshwarappa behind V. Somanna resigned to politics?

Comments are closed.