ಬಳೆಯನ್ನು ನೀಡಿದ್ರೆ ಒಲಿತಾಳೆ ತಾಯಿ – ಪದ್ಮಾವತಿಯನ್ನು ನಂಬಿದ್ರೆ ಕಷ್ಟ ಪರಿಹಾರವಾಗೋದು ಗ್ಯಾರೆಂಟಿ

vadanbailu padmavati devi temple : ಜಗತ್ತಿನಲ್ಲಿ ನಮಗೆ ಅರಿವಿಲ್ಲದ ವಿಚಾರಗಳು ಸಾಕಷ್ಟಿದೆ. ಪ್ರಕೃತಿ ಅನ್ನೋದು ನಮ್ಮ ನಿರೀಕ್ಷೆಗೆ ನಿಲುಕದ್ದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಮಗರಿವಿಲ್ಲದ ಶಕ್ತಿಯೊಂದು ನಮ್ಮನ್ನು ಸದಾ ಕಾಯುತ್ತಿದೆ.

vadanbailu padmavati devi temple : ಜಗತ್ತಿನಲ್ಲಿ ನಮಗೆ ಅರಿವಿಲ್ಲದ ವಿಚಾರಗಳು ಸಾಕಷ್ಟಿದೆ. ಪ್ರಕೃತಿ ಅನ್ನೋದು ನಮ್ಮ ನಿರೀಕ್ಷೆಗೆ ನಿಲುಕದ್ದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಮಗರಿವಿಲ್ಲದ ಶಕ್ತಿಯೊಂದು ನಮ್ಮನ್ನು ಸದಾ ಕಾಯುತ್ತಿದೆ. ಅದನ್ನೇ ನಮ್ಮ ಹಿರಿಕರು ದೇವರೆಂದ್ರು. ನಮ್ಮಲ್ಲಿನ ದೇವಾಲಯಗಳು ಇಂತಹ ವಿಸ್ಮಯಗಳಿಗೆ ಸಾಕ್ಷಿಯಾಗಿ ನಿಂತಿದೆ ವಡಂಬೈಲು ಪದ್ಮಾವತಿ ಅಮ್ಮನವರ ಕ್ಷೇತ್ರ. ಇಂತಹದೇ ಒಂದು ದೇವಾಲಯ ಶಿವಮೊಗ್ಗದ ವಡ್ಡನ ಬೈಲಿನಲ್ಲಿದೆ.

vadanbailu padmavati devi temple jog falls shivamogga
Image Credit to Original Source

ಹೌದು ಇದು ಹಿರಿಯರ ಕಾಲದಿಂದ ಪೂಜಿಸಲ್ಪಡುತ್ತಿದ್ದ ದೇವಿ ದೇವಾಲಯ . ಇಲ್ಲಿ ಪದ್ಮಾವತಿ ಅಮ್ಮ ವಿರಾಜಮಾನಳಾಗಿ ನಿಂತಿದ್ದಾಳೆ. ಆಕೆಗೆ ಬಳೆ ನೀಡ್ತಿನಿ ಅಂತ ಬೇಡಿಕೊಂಡ್ರೆ ಆಗದ ಕೆಲಸಾನೆ ಇಲ್ಲ ಅನ್ನೋದು ಇಲ್ಲಿಯ ಭಕ್ತರ ನಂಬಿಕೆ. ಹೌದು ಈ ತಾಯಿಗೆ ಬಳೆಗಳೆಂದರೆ ಅಂದ್ರೆ ಪಂಚ ಪ್ರಾಣ. ಭಕ್ತರು ಭಕ್ತಿಯಿಂದ ನಮಿಸಿ ಕೇಳಿದ್ರೆ ಇಲ್ಲ ಅನ್ನೋ ಮಾತೇ ಇಲ್ಲವಂತೆ. ಹುತ್ತದ ಒಳಗಿಂದೆದ್ದು ಬಂದಿರೋ ದೇವಿಗೆ ಗಾಜಿನ ಬಳೆಗಳನ್ನು ಹರಕೆಯಾಗಿ ನೀಡಿದ್ರೆ ಎಲ್ಲಾ ಹರಕೆಗಳನ್ನು ಈಡೇರಿಸುತ್ತಾಳೆ ಅನ್ನೋ ನಂಬಿಕೆ ಇದೆ.

vadanbailu padmavati devi temple jog falls shivamogga
Image Credit to Original Source

ಹಾಗೆಂದ ಮಾತ್ರಕ್ಕೆ ಆಕೆ ಸಾವಿರಾರು ವರ್ಷದಿಂದ ಇಲ್ಲಿದ್ದಾಳೆ ಅಂದುಕೊಳ್ಳಬೇಡಿ . ಆಕೆ ಸುಮಾರು 50 ವರ್ಷದ ಹಿಂದೆ ಇಲ್ಲಿ ಬಂದು ನೆಲೆ ನಿಂತಳಂತೆ. ಇಲ್ಲಿ ಬರುವ ಮುನ್ನ ತಾಯಿ ಲಿಂಗನಮಕ್ಕಿ ಆಣೆಕಟ್ಟಿನ ಒಳಗೆ ಬೆರತು ಹೋದ ಹೆಬ್ಬಯಲು ಅನ್ನೋ ಗ್ರಾಮದಲ್ಲಿ ನೆಲೆನಿಂತ ತಾಯಿ . ಅಲ್ಲಿ ಈ ತಾಯಿಗೆ ಹುತ್ತ ಸಮೇತವಾದ ದೇವಾಲಯ ಇತ್ತಂತೆ.

vadanbailu padmavati devi temple jog falls shivamogga
Image Credit to Original Source

ಆಕೆಗೆ ಅಲ್ಲೂ ಬಳೆಗಳ ಸೇವೆ ನಡೆಯುತ್ತಿತ್ತಂತೆ. ಅಲ್ಲಿ ಬರುವ ಭಕ್ತರು ಚಿನ್ನದ ,ಗಾಜಿನ, ಬೆಳ್ಳಿಯ ಬಳೆಗಳನ್ನು ಅರ್ಪಿಸುತ್ತಿದ್ದರಂತೆ. ಆದರೆ ಆಣೆಕಟ್ಟು ನಿರ್ಮಾಣದ ಕಾಲದಲ್ಲಿ ಇದು ಕಾಲಗರ್ಭಕ್ಕೆ ಸೇರಿ ಹೋಯಿತು. ಅಲ್ಲಿದ್ದ ಕುಟುಂಬವೊಂದು ದೇವಿಯ ನೆನಪಗಾಗಿ ಅಮ್ಮನ ಮೂರ್ತಿಯೊಂದನ್ನು ತೆಗೆದುಕೊಂಡು ಬಂದರು.

vadanbailu padmavati devi temple jog falls shivamogga
Image Credit to Original Source

ಆ ಕುಟುಂಬರ ಹಿರೀಕರ ಕನಸಲ್ಲಿ ಬಂದ ತಾಯಿ, ನಿಮ್ಮ ಜೊತೆಯೇ ನಾನು ಬಂದಿದ್ದೀನಿ ಅಂತ ಹೇಳಿದಳಂತೆ. ಅದಕ್ಕೆ ಆ ಹಿರೀಕರು ನೀನು ಹೆಬ್ಬಯಲ ತಾಯಿಯಾಗಿದ್ರೆ ಅಲ್ಲಿರುವಂತೆ ಇಲ್ಲಿಯೂ ಹುತ್ತದಿಂದ ಎದ್ದು ಬಾ ಅಂದರಂತೆ. ಮಾರನೆ ದಿನ ದೇವಿಯ ವಿಗ್ರಹ ವಿದ್ದಲ್ಲಿ ನೋಡಿದಾಗ ಮೂರ್ತಿಯ ತಳಬಾಗದಿಂದ ಹುತ್ತವೊಂದು ಎದ್ದು ಬಂದಿತ್ತಂತೆ. ಇದರ ಶಕ್ತಿಯನ್ನು ಅರಿತ ಕುಟುಂಬಸ್ಥರು ತಾಯಿಗೆ ಪೂಜೆ ಮಾಡೋಕೆ ಆರಂಭಿಸಿದರು ಅನ್ನೋದು ಮಾತು.

ಇದನ್ನೂ ಓದಿ : ಭಕ್ತರನ್ನು ಕಾಯುತ್ತಾಳೆ ಪರಶುರಾಮರ ತಾಯಿ – ಬೇವಿನ ಸೇವೆಯೇ ಈಕೆಗೆ ಅತಿಪ್ರಿಯ

vadanbailu padmavati devi temple jog falls shivamogga
Image Credit to Original Source

ಇನ್ನು ಹೆಬ್ಬಯಲಮ್ಮ ಅನ್ನೋ ದೇವಿಯು ಇಂದಿಗೂ ಹಲವು ಮನೆ ದೇವಾಗಿರೋದನ್ನು ಕಾಣುತ್ತೇವೆ. ಅಂದು ಲಿಂಗನ ಮಕ್ಕಿ ಆಣೆಕಟ್ಟಿನ ಪ್ರದೇಶದಲ್ಲಿ ವಾಸವಿದ್ದವರು ಇಂದಿಗೂ ಪೂಜೆ ಮಾಡುತ್ತಾರೆ ಅನ್ನೋದು ಇಲ್ಲಿನ ನಂಬಿಕೆ. ಇನ್ನು ಇಲ್ಲಿ ನಾಗನ ವಿಗ್ರಹವೂ ಇದ್ದು, ಇದನ್ನು ಮುಕ್ತಿ ನಾಗ ಅಂತ ಕರೆಯುತ್ತಾರೆ. ಇಲ್ಲಿ ನಾಗನಿಗೆ ಅಭಿಷೇಕ ಮಾಡಿದ್ರೆ, ಕಾಳಸರ್ಪ ದೋಷ ಪರಿಹಾರವಾಗುತ್ತೆ ಅನ್ನೋ ನಂಬಿಕೆ ಇದೆ.

ಇದನ್ನೂ ಓದಿ : ಭೂಮಿಯಾಳದಿಂದ ಉಕ್ಕುತ್ತಾಳೆ ಗಂಗಾಮಾತೆ – ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಮಾಯ

ಈ ದೇವಾಲಯದ ಕ್ಷೇತ್ರಪಾಲಕನಾಗಿ ಭೂತರಾಜ ನೆಲೆಸಿದ್ದಾನೆ . ಈ ಭೂತರಾಜನನ್ನು ಪೂಜೆ ಮಾಡಿದ್ರೆ ಮಾಟ ಮಂತ್ರ, ವ್ಯಾಜ್ಯ , ಮನೋಕ್ಲೇಶಗಳು ಪರಿಹಾರವಾಗುತ್ತೆ ಅನ್ನೋ ನಂಬಿಕೆ ಇದೆ. ಇನ್ನು ಇಲ್ಲಿ ದೇವಾಲಯದ ಧರ್ಮಾಧಿಕಾರಿ ಯಾಗಿ ಅದೇ ಕುಟುಂಬದ ಹಿರಿಯರು ಸೇವೆ ಸಲ್ಲಿಸುತ್ತಿದ್ದಾರೆ.

vadanbailu padmavati devi temple jog falls shivamogga
Image Credit to Original Source

ಇಲ್ಲಿಗೆ ಬರುವ ಭಕ್ತರಿಗೆ 3 ಹೊತ್ತು ಅನ್ನದಾನ ಅಥವಾ ದಾಸೋಹ ವ್ಯವಸ್ಥೆ ಇದೆ .ಕರ್ನಾಟಕದ ಪ್ರಸಿದ್ಧ ಜೋಗ ಜಲಪಾತದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿದೆ ಈ ವಡಂಬೈಲು ಪದ್ಮಾವತಿ ಅಮ್ಮನವರ ಕ್ಷೇತ್ರ . ಮೊದಲು ಕುಗ್ರಾಮದಂತಿದ್ದ ಈ ಕ್ಷೇತ್ರಕ್ಕೆ ಈಗ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ : ಶ್ರೀ ಕೃಷ್ಣನೇ ನೀಡಿದ್ದ ತನ್ನ ವಿಗ್ರಹ – ಇವನನ್ನು ಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳು ಪರಿಹಾರ

vadanbailu padmavati devi temple jog falls shivamogga
Image Credit to Original Source

ಜೋಗದಿಂದ ಇಲ್ಲಿಗೆ ತೆರಳೋಕೆ ಬಸ್ ಸೌಕರ್ಯವಿದೆ. ಇದು ಈಗ ಶಿಮೊಗ್ಗ ಜಿಲ್ಲೆಯ ಅಮ್ಮನವರ ಪ್ರಖ್ಯಾತ ತೀರ್ಥ ಕ್ಷೇತ್ರ ಅಂದ್ರೆ ತಪ್ಪಾಗಲ್ಲ. ದಿನೇ ದಿನೇ ಬರೋ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಧ್ಯವಾದ್ರೆ ನೀವು ಒಂದು ಬಾರಿ ಇಲ್ಲಿಗೆ ಭೇಟಿ ನೀಡಿ.

vadanbailu padmavati devi temple jog falls shivamogga

Comments are closed.