ಭೂಮಿಯಾಳದಿಂದ ಉಕ್ಕುತ್ತಾಳೆ ಗಂಗಾಮಾತೆ – ನೀರು ಕುಡಿದ್ರೆ ಕಿಡ್ನಿ ಸಮಸ್ಯೆ ಮಾಯ

Guli Guli Shankareshwara Temple : ಗಂಗೆ ನಮ್ಮ ದೇಶದ ಜೀವನಾಡಿ . ದೇಶದ ಪವಿತ್ರ ಜಲಗಳ ಕುರಿತು ಹೇಳೋದಾದರೆ ಅದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲೋದೇ ನಮ್ಮ ಗಂಗಮ್ಮ . ದೇಶದ ಹಲವಾರು ದೇವಾಲಯದ ಪುರಾಣದಲ್ಲಿ ಅಂತರ ಗಂಗೆ ಇಲ್ಲಿ ಹರಿತಾಳೆ ಅನ್ನೋ ಮಾತನ್ನು ಹೇಳುತ್ತಾರೆ.

Guli Guli Shankareshwara Temple : ಗಂಗೆ ನಮ್ಮ ದೇಶದ ಜೀವನಾಡಿ . ದೇಶದ ಪವಿತ್ರ ಜಲಗಳ ಕುರಿತು ಹೇಳೋದಾದರೆ ಅದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲೋದೇ ನಮ್ಮ ಗಂಗಮ್ಮ . ದೇಶದ ಹಲವಾರು ದೇವಾಲಯದ ಪುರಾಣದಲ್ಲಿ ಅಂತರ ಗಂಗೆ ಇಲ್ಲಿ ಹರಿತಾಳೆ ಅನ್ನೋ ಮಾತನ್ನು ಹೇಳುತ್ತಾರೆ. ಅದರಲ್ಲೂ ಶಿವನ ದೇವಾಲಯದಲ್ಲಿ ಇಂತಹ ಮಾತು ಜಾಸ್ತಿ ಯಾಗಿ ಕೇಳಿ ಬರುತ್ತೆ. ಈ ದೇವಾಲಯ ಕೂಡಾ ಇಂತಹದೇ ಒಂದು ಪುರಾಣಕ್ಕೆ ಸಾಕ್ಷಿಯಾಗಿ ನಿಂತಿದೆ ಎಂದರೆ ತಪ್ಪಾಗಲ್ಲ.

Guli Guli Shankareshwara Temple Gubbiga Hosanagar Shivamogga
Image Credit to Original Source

ಇಲ್ಲಿ ಗಂಗಾಮಾತೆ ಪ್ರತಿ ದಿನಭೂಮಿಯ ತಳಭಾಗದಿಂದ ಉಕ್ಕಿ ಬರುತ್ತಾಳೆ . ಶಿವನ ಸಾನಿಧ್ಯವನ್ನು ಬಯಸಿ ಬರೋರ ರೋಗ ನಿವಾರಿಸಿ ಶಾಂತಿ ನೆಮ್ಮದಿ ಯನ್ನು ಕರುಣಿಸೋ ಮಾತೆ ಈಕೆ. ಹೌದು ಇದೊಂದು ಶಿವ ಸಾನಿಧ್ಯವಿರುವ ಕ್ಷೇತ್ರ. ಇಲ್ಲಿ ಶಿವನು ಶಂಕರ ಎಂಬ ಹೆಸರಿನಿಂದ ನೆಲೆ ನಿಂತು ಭಕ್ತರನ್ನು ಕಾಪಾಡುತ್ತಿದ್ದಾನೆ. ಆದ್ರೆ ಇಲ್ಲಿನ ಮುಖ್ಯ ಆಕರ್ಷಣೆ ಅಂದ್ರೆ ಇಲ್ಲಿ ನೆಲೆಸಿರುವ ಗಂಗಾಮಾತೆ. ಶಿವ ಆಣತಿಯಂತೆ ಇಲ್ಲಿ ನೆಲೆನಿಂತಿರುವ ಗಂಗೆ ಭಕ್ತರ ಇಷ್ಟಾರ್ಥವನ್ನು ಕಾಯುತ್ತಾಳೆ ಅನ್ನೋ ನಂಬಿಕೆ ಇದೆ .

ಹೌದು ಈ ದೇವಾಲಯದಲ್ಲಿ ಜಟಾತೀರ್ಥ ಅನ್ನೋ ಕೊಳ ಇದೆ. ಇದೇ ಗಂಗೆ ನೆಲೆಸಿರೋ ಜಾಗ ಅಂತ ನಂಬಲಾಗುತ್ತೆ. ಇಲ್ಲಿ ಬರೋ ಭಕ್ತರು ಈ ದೇವಾಲಯ ದಲ್ಲಿ ನೀಡುವ ಬಿಲ್ವ ಪತ್ರೆಯನ್ನು ಕೊಳಕ್ಕೆ ಸಮರ್ಪಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಇಲ್ಲಿ ಸಮರ್ಪಿಸಿದ ಬಿಲ್ವಪತ್ರೆ ಕೊಳದ ಆಳಕ್ಕೆ ಹೋಗುತ್ತೆ. ಅದು ಮತ್ತೆ ಮೇಲೆ ಬಂದ್ರೆ ಬಯಕೆ ಈಡೇರುತ್ತೆ ಅನ್ನೋ ಮಾತಿದೆ. ಇನ್ನು ಈ ಕೊಳದ ಒಳಗಡೆಯೂ ಶಿವಲಿಂಗವಿದ್ದು ಅದಕ್ಕೆ ಬಿಲ್ವಪತ್ರೆ ತಾಕಿ ಬಂದರೆ ಜನ್ಮಪಾವನವಾದಂತೆ ಅಂತ ನಂಬುತ್ತಾರೆ ಭಕ್ತರು.

ಇದನ್ನೂ ಓದಿ: ಇದು ಜಗತ್ತಿನ ಮೊದಲ ಜೋರ್ತಿಲಿಂಗ- ದೇವಾಲಯಕ್ಕೆ ಚಂದ್ರನೇ ನಿರ್ಮಾತೃ

ಇನ್ನು ಈ ಕೊಳಕ್ಕೆ ಜಟಾತೀರ್ಥ ಅನ್ನೋ ಹೆಸರು ಬರೋಕು ಕಾರಣವಿದೆ. ಅದೇನಂದ್ರೆ ಅನಾದಿ ಕಾಲದ ಹಿಂದೆ ಶಿವ ಪಾರ್ವತಿ ಇಲ್ಲಿಗೆ ಬಂದಿದ್ದರಂತೆ. ಆಗ ಪಾರ್ವತಿ ಬಾಯಾರಿದಾಗ ಜಟೆಯಿಂದ ಗಂಗೆಯನ್ನು ಕರೆದು ಬಾಯರಿಕೆ ನೀಗಿಸುವಂತೆ ತಿಳಿಸಿದನಂತೆ ಆಗ ಗಂಗೆ ಬಾಯಾರಿಕೆ ನೀಗಿಸಿ ಜಟೆಗೆ ಮರಳಲು ಯತ್ನಿಸಿದಾಗ, ಶಿವ ಗಂಗೆಯನ್ನು ಇಲ್ಲೇ ನೆಲೆಸುವಂತೆ ಕೇಳಿದ. ಆಗ ಶಿವ ನೆಲೆನಿಂತರೆ ತಾನೂ ಇಲ್ಲೇ ನೆಲೆಸುವುದಾಗಿ ಗಂಗೆ ಹೇಳಿದಳು.

ಅಂದಿನಿಂದ ಶಿವ, ಗಂಗಾ ಇಲ್ಲೇ ನೆಲೆ ನಿಂತರು ಅನ್ನೋ ನಂಬಿಕೆ ಇದೆ . ಹಾಗೆ ಪ್ರತಿ ದಿನ ಗಂಗೆ ಕೊಳದಲ್ಲಿ ಗುಳುಗಳು ಎಂಬಂತೆ ಉಕ್ಕಿ ಬರುತ್ತಾಳಂತೆ . ಇದಕ್ಕೆ ಸಾಕ್ಷಿಯಾಗಿ ಗುಳುಗುಳು ಅನ್ನೋ ಶಬ್ದ ಹಾಗೂ ಉಕ್ಕುವಾಗ ನೀರಲ್ಲಿ ಉಂಟಾಗುವ ಗುಳ್ಳೆ ಮೇಲೆ ಕಾಣ ಬರುತ್ತೆ. ಅದಕ್ಕೆ ಈ ದೇವಾಲಯವನ್ನು ಗುಳು ಗುಳಿ ಶಂಕರ ಅನ್ನೋ ಹೆಸರಿನಿಂದ ಕರೆಯುತ್ತಾರೆ.

Guli Guli Shankareshwara Temple Gubbiga Hosanagar Shivamogga
Image Credit to Original Source

ಇಲ್ಲಿನ ಮತ್ತೊಂದು ವಿಶೇಷವೆಂದರೆ ಇಲ್ಲಿ ನೀರಿನಲ್ಲಿರು ಹಾವಸೆ ಶಿವ ಜಟೆಯ ರೀತಿ ಕಂಡು ಬರುತ್ತೆ. ಹಾವೆಸೆಗಳು ನೀರಿನಲ್ಲಿ ಮೇಲ್ಮುಖವಾಗಿ ಬೆಳೆದು ನಿಂತಿದೆ. ಇದನ್ನು ಶಿವನ ಜಟೆ ಅಂತಾನೆ ಭಕ್ತರು ನಂಬುತ್ತಾರೆ . ಈ ಕೊಳದಲ್ಲಿ ಕೇವಲ ಬಿಲ್ವಪತ್ರೆ ಎಲೆ ಮಾತ್ರ ಮುಳುಗುತ್ತಂತೆ ಉಳಿದಂತೆ ಯಾವುದೇ ಎಲೆ ಕೂಡಾ ಮುಳುಗಲ್ಲ. ಬದಲಾಗಿ ತೇಲುತ್ತದೆ ಅಂತಾರೆ ಭಕ್ತರು . ಈ ಕೊಳದಲ್ಲಿ ನೀರು ನಿತ್ಯವು ತುಂಬಿ ಹರಿಯುತ್ತೆ.

ಇದನ್ನೂ ಓದಿ: ಭಕ್ತರನ್ನು ಕಾಯುತ್ತಾಳೆ ಪರಶುರಾಮರ ತಾಯಿ – ಬೇವಿನ ಸೇವೆಯೇ ಈಕೆಗೆ ಅತಿಪ್ರಿಯ

ಇಲ್ಲಿ ಹರಿಯುವ ನೀರಿನಿಂದ ಪಕ್ಕದಲ್ಲೇ ಇರೋ ಶಿವಲಿಂಗಕ್ಕೆ ಅಭಿಷೇಕವನ್ನು ಭಕ್ತರು ಮಾಡುತ್ತಾರೆ . ಇಲ್ಲಿನ ನೀರನ್ನು ನಿಗದಿತ ಕಾಲ ಸೇವಿಸೋದ್ರಿಂದ ಕಿಡ್ನಿ ಸಮಸ್ಯೆ, ಚರ್ಮ ವ್ಯಾಧಿ ನಿವಾರಣೆಯಾಗುತ್ತೆ ಅನ್ನೋ ನಂಬಿಕೆ ಇದೆ. ಇನ್ನು ಚೌಡೇಶ್ವರಿ ದೇವಿಯೂ ನೆಲೆಸಿದ್ದು ಭಕ್ತರು ದೇವಿಯ ದರ್ಶನ ಕೂಡಾ ಪಡೆದು ಕೃತಾರ್ಥರಾಗುತ್ತಾರೆ.

ಇದನ್ನೂ ಓದಿ: ಮನುಷ್ಯರಂತೆ ಮೆತ್ತಗಿದೆ ಲಕ್ಷ್ಮೀ ನರಸಿಂಹನ ದೇಹ – ದೇವರ ಹೊಕ್ಕುಳ ತೀರ್ಥ ಸೇವಿಸಿದ್ರೆ ಸಂತಾನ ಭಾಗ್ಯ

ಇನ್ನು ಗುಳುಗುಳಿ ಶಂಕರ ಅನ್ನೋ ಹೆಸರಿನಿಂದ ಕರೆಸಿಕೊಳ್ಳೋ ದೇವಾಲಯದ ಕುರಿತು ಹೇಳೋದಾದ್ರೆ ಇದು ನಮ್ಮ ರಾಜ್ಯದ  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಲ್ಲೂರು ಅನ್ನೋ ಗ್ರಾಮದಲ್ಲಿದೆ.ಇಲ್ಲಿಗೆ ತೆರಳೋಕೆ ಶಿಮೊಗ್ಗದಿಂದ ಕೆಲವೇ ಕೆಲವು ಬಸ್ ಸೌಕರ್ಯವಿದೆ. ಸುಲಲಿತ ಪ್ರಯಾಣಕ್ಕಾಗಿ ನೀವು ಯಾವುದಾರೂ ಬಾಡಿಗೆ ವಾಹನ ಬಳಸೋದು ಉತ್ತಮ. ಪ್ರಕೃತಿ ನಡುವೆ ಸ್ಥಿತವಾಗಿರೋ ಈ ದೇವಾಲಯವು ನಮ್ಮ ತನುವನ್ನು ಮಾತ್ರವಲ್ಲ ಮನವನ್ನು ತಣಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Guli Guli Shankareshwara Temple Gubbiga Hosanagar Shivamogga

Comments are closed.