Joker Virus Alert : ನಿಮ್ಮ ಫೋನಲ್ಲೂ ಇರಬಹುದು ಜೋಕರ್ ವೈರಸ್ ! ತಡ ಮಾಡದೆ ಡಿಲೀಟ್ ಮಾಡಿ

ನೀವು ಆ್ಯಂಡ್ರಾಯ್ಡ್ ಫೋನ್  (Android)ಬಳಕೆದಾರರಾಗಿದ್ದರೆ ನಿಮಗೆ ಗೊತ್ತೇ ಇರಬಹುದು,  ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ (App Download) ಮಾಡಲು ಬಯಸಿದರೆ,  ಗೂಗಲ್ ಪ್ಲೇ ಸ್ಟೋರ್ (Google Play Store) ಮೂಲಕ  ನೀವು ಅದನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದಾಗಿದೆ. ಆದಾಗ್ಯೂ, ಪ್ಲೇ ಸ್ಟೋರ್ನಲ್ಲಿನ ಪ್ರತಿಯೊಂದು ಆಂಡ್ರಾಯ್ಡ್  ಅಪ್ಲಿಕೇಶನ್ ಸೆಕ್ಯೂರ್ (App Security) ಆಗಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಇದೀಗ ಆ್ಯಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಜೋಕರ್ ಎಂಬ ಹೊಸ ವೈರಸ್ (Joker Virus Alert in Smartphone) ಪತ್ತೆಯಾಗಿದೆ.

ನಿಮ್ಮ ಫೋನ್‌ನಲ್ಲಿ ಸೆಕ್ಯೂರ್ ಅಲ್ಲದ ಯಾವುದೇ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡಿದರೆ, ನಂತರ ನೀವು ನಿಮ್ಮ ಡೇಟಾವನ್ನು ಕಳೆದುಕೊಳ್ಳಬಹುದು ಅಥವಾ  ಅದು ಸೆಕ್ಯೂರಿಟಿ ಸಮಸ್ಯೆಯನ್ನು ಉಂಟುಮಾಡಬಹುದು. ಹೌದು, ಇದೀಗ ಆ್ಯಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಜೋಕರ್ ಎಂಬ ಹೊಸ ವೈರಸ್ ಪತ್ತೆಯಾಗಿದೆ. ಅದು ಈಗ  ಕಲರ್ ಮೆಸೇಜ್ ಎಂಬ ಆಪ್‌ನಲ್ಲಿ ಕಾಣಿಸಿದೆ. ಇದು ಜನಪ್ರಿಯ ಅಪ್ಲಿಕೇಶನ್ ಆಗಿದ್ದು, ಈಗಾಗಲೇ ಸಾವಿರಕ್ಕೂ ಅಧಿಕ ಜನರು ಇದನ್ನು ಡೌನ್‌ಲೋಡ್ ಮಾಡಿದ್ದಾರೆ.

ನೀವೂ ಇದನ್ನು ಈಗಾಗಲೇ ಡೌನ್ಲೋಡ್ ಮಾಡಿದ್ದರೆ, ಇದನ್ನು ತಕ್ಷಣ ಡಿಲೀಟ್ ಮಾಡಬೇಕು.

ಸಾಕಷ್ಟು ಕ್ರಿಮಿನಲ್‌ಗಳು  ಈಗಾಗಲೇ ಕಲರ್ ಮೆಸೇಜ್ ಆಪ್ ಮೂಲಕ ಡೇಟಾ ಕದಿಯುತ್ತಿದ್ದಾರೆ. “ಜೋಕರ್” ವೈರಸ್ ಹೊಸತೇನಲ್ಲ, ಇದು 2017ರಲ್ಲಿ ಪತ್ತೆಯಾಗಿತ್ತು. ಇದು ಬಹಳ ಡೇಂಜರ್ ಆಗಿದ್ದು ಸಾಕಷ್ಟು ಬಾರಿ ಬ್ಯಾನ್ ಕೂಡ ಆಗಿತ್ತು. ಇದು ಮಾಲ್ವೇರ್ ಹಾಗೇ ಇದ್ದು, ವೈಯಕ್ತಿಕ ಮಾಹಿತಿಗಳನ್ನು ಕದಿಯುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಹ್ಯಾಕ್ ಮಾಡುತ್ತದೆ.

ಜೋಕರ್ ವೈರಸ್ ಹೇಗೆ ಫೋನ್ ನಲ್ಲಿ ಕಾಣಿಸುತ್ತೆ
ನೀವು ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ಮೂಲಕ ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡುವಾಗ,  ನಿಮ್ಮ ಪರ್ಮಿಷನ್ ಕೇಳುತ್ತದೆ. ಬಹುತೇಕ ಮಂದಿ ಎಲ್ಲಕ್ಕೂ ಓಕೆ ಕೊಡುತ್ತಾರೆ. ಇದು ಯಾವುದೇ ಕಾರಣಕ್ಕೂ ಮಾಡಬಾರದು.

ಜೋಕರ್ ವೈರಸ್ ಡಿಲೀಟ್ ಮಾಡುವುದು ಹೇಗೆ

* ಮೊದಲು ಫೋನ್ ಸೆಟಿಂಗ್ಸ್ ಓಪನ್ ಮಾಡಿ.

* ಅಲ್ಲಿ ಆ್ಯಪ್ ಸೆಟಿಂಗ್ಸ್ ಮೂಲಕ ಅನ್ ಇನ್ಸ್ಟಾಲ್ ಮಾಡಿ.

* ನಂತರ ಅಲ್ಲಿ ಪೇಮೆಂಟ್ ಸ್ಟಾಪ್ ಕ್ಲಿಕ್ ಮಾಡಿ.

ಇದನ್ನೂ ಓದಿ: Android 13 Features Leak: ಆ್ಯಂಡ್ರಾಯ್ಡ್ 13ರ ಫೀಚರ್‌ಗಳು ಲೀಕ್; ಹೊಸ ಅಪ್‌ಡೇಟ್‌ನಲ್ಲಿ ಇರುವ ವೈಶಿಷ್ಟ್ಯಗಳನ್ನು ತಿಳಿಯಿರಿ

ಇದನ್ನೂ ಓದಿ: PhonePe vs Google Pay : ಫೋನ್ ಪೇ vs ಗೂಗಲ್ ಪೇ; ಬಳಕೆಗೆ ಯಾವುದು ಬೆಸ್ಟ್?

(Joker Virus Alert in Android smartphones you must check and delete)

Comments are closed.