ಉಡುಪಿ : vijayanagara era inscription : 1336ರಲ್ಲಿ ಕರ್ನಾಟಕವನ್ನು ಆಳಿದ್ದ ಪ್ರಸಿದ್ಧ ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಹಕ್ಕ ಬುಕ್ಕರಿಂದ ಸ್ಥಾಪನೆಯಾದ ಹಿಂದೂ ವಿಜಯನಗರ ಸಾಮ್ರಾಜ್ಯವು ಕಾಲಾಂತರದಲ್ಲಿ ಕರ್ನಾಟಕದಲ್ಲಿ ತನ್ನ ವೈಭವವನ್ನು ಮರೆದಿದೆ. 14ನೇ ಶತಮಾನದಿಂದ 16ನೇ ಶತಮಾನದವರೆಗೆ ವಿಜಯನಗರ ಸಾಮ್ರಾಜ್ಯವು ಸಮೃದ್ಧವಾಗಿ ಬೆಳೆದಿತ್ತು. ಆದರೆ 1565ರಲ್ಲಿ ಮುಸ್ಲಿಂ ಸುಲ್ತಾನರ ಪಾರುಪತ್ಯಕ್ಕೆ ವಿಜಯನಗರ ಸಾಮ್ರಾಜ್ಯವು ನಶಿಸಿ ಹೋಯಿತು ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಕುರುಹುಗಳಿವೆ. ಇದೇ ವಿಜಯನಗರ ಸಾಮ್ರಾಜ್ಯವನ್ನು ಒಂದು ಕಾಲದಲ್ಲಿ ಆಳಿದ ದೊರೆ ಇಮ್ಮಡಿ ದೇವರಾಯನ ಕಾಲದ್ದು ಎನ್ನಲಾದ ಶಾಸನವೊಂದು ಇದೀಗ ಉಡುಪಿ ಜಿಲ್ಲೆಯ ಕೆಮ್ಮಣ್ಣು ಬಳಿಯಲ್ಲಿರುವ ಮೂಡುತೋನ್ಸೆ ಎಂಬ ಪ್ರದೇಶದಲ್ಲಿ ಪತ್ತೆಯಾಗಿದೆ.
ಈ ಶಾಸನವನ್ನು ಗ್ರಾನೈಟ್ ಕಲ್ಲಿನ ಮೇಲೆ ಕೆತ್ತಲಾಗಿದ್ದು ಇದರಲ್ಲಿ ಕನ್ನಡದಲ್ಲಿಯೇ 24 ಸಾಲುಗಳನ್ನು ಬರೆಯಲಾಗಿದೆ. ಇತಿಹಾಸ ಹಾಗೂ ಪುರಾತತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಈ ಶಾಸನವನ್ನು ಸಂಶೋಧನೆ ಮಾಡಿದ್ದಾರೆ. ಈ ಅಪರೂಪದ ಶಾಸನವನ್ನು ಪತ್ತೆ ಮಾಡಲು ಪುರಾತತ್ವಶಾಸ್ತ್ರಜ್ಞ ಎಸ್ ಎ ಕೃಷ್ಣಯ್ಯ ಮತ್ತು ನಿವೃತ್ತ ಶಿಕ್ಷಕ ಕೆ ಶ್ರೀಧರ್ ಭಟ್ ಶ್ರುತೇಶ್ ಆಚಾರ್ಯರಿಗೆ ಸಾಥ್ ನೀಡಿದ್ದರು.
ಶ್ರೀ ಗಣಾಧಿಪತೇಯೇ ನಮಃ ಎಂದು ಆರಂಭಗೊಳ್ಳುವ ಈ ಶಾಸನವನ್ನು ಕ್ರಿಸ್ತಶಕ 1431-1353ರ ವಿರೋಧಿಕೃತ ನಾಮ ಸವಂತ್ಸರದಲ್ಲಿ ಬರೆಯಲಾಗಿದೆ. ಈ ಶಾಸನದಲ್ಲಿ ಮೂರು ದಿನಗಳ ಉತ್ಸವದ ಬಗ್ಗೆ ಬರೆಯಲಾಗಿದೆ. ಆದರೆ ಇವರು ಯಾವ ಉತ್ಸವದ ಬಗ್ಗೆ ಬರೆದಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಈ ಅವಧಿಯಲ್ಲಿ ಬಾರ್ಕೂರು ಪ್ರದೇಶವನ್ನು ಚಂದರಸ ಒಡೆಯರು ಆಳುತ್ತಿದ್ದರು. ಬಹುಶಃ ಈ ಶಾಸನವನ್ನು ಅವರಿಗೆ ಉಡುಗೊರೆಯಾಗಿ ನೀಡರಬಹುದಾ ಎಂಬ ಅನುಮಾನ ಕೂಡ ಇದೆ. ಈ ಶಾಸನದಲ್ಲಿ ಮಂಜಣ್ಣ ಸೆಟ್ಟಿ, ಅಳಿಯ ಕೋಮಾ ಸೆಟ್ಟಿ ಸೇರಿದಮತೆ ಅನೇಕರ ಹೆಸರು ಕೂಡ ಕೊನೆಯಲ್ಲಿ ಬರೆಯಲಾಗಿದೆ. 24 ಸಾಲುಗಳ ಬಳಿಕ ಕೊನೆಯಲ್ಲಿ ಶಾಪಶಯ ಎಂದು ಬರೆಯಲಾಗಿದೆ.
ಇದನ್ನು ಓದಿ : ಹೆಬ್ರಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ತಾಯಿ, ಮಗಳ ಮೃತದೇಹ ಪತ್ತೆ : ಕೊಲೆ ಶಂಕೆ
vijayanagara era inscription found in udupi district