Voter Id Golmal : ಚಿಲುಮೆ ಸಂಸ್ಥೆಯ ಐವರು ಅರೆಸ್ಟ್ : ಸಮನ್ವಯ ಟ್ರಸ್ಟ್‌ ಗೆ ನೋಟಿಸ್‌ ಜಾರಿ

ಬೆಂಗಳೂರು: (Voter Id Golmal ) ವೋಟರ್‌ ಐಡಿ ಪರಿಷ್ಕರಣೆ ನೆಪವೊಡ್ಡಿ ಹಲವು ಅಕ್ರಮಗಳನ್ನು ಎಸಗಿದ ಚಿಲುಮೆ ಸಂಸ್ಥೆಯ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥರಾದ ಕೆಂಪೇಗೌಡ ಹಾಗೂ ರವಿಕುಮಾರ್‌, ನಿರ್ದೇಶಕ ರೇಣುಕಾ ಪ್ರಸಾದ್‌, ಮ್ಯಾನೇಜರ್‌ ಧರ್ಮೇಶ್‌ ಮತ್ತು ಮೇಲ್ವಿಚಾರಕರಾದ ಪ್ರಜ್ವಲ್‌ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೊಂದೆಡೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ವಿಚಾರಣೆ ನಡೆಸಿದ ವೇಳೆಯಲ್ಲಿ ಚಿಲುಮೆ ಸಂಸ್ಥೆಯ ಮುಖ್ಯಸ್ಥರಾದ ಕೆಂಪೇಗೌಡ ಎನ್ನುವವರು ಕೆಲವು ಮಾಹಿತಿಗಳನ್ನು ನೀಡಿದ್ದು, ಆಪ್‌ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಕೆಂಪೇಗೌಡ ಅವರು ರವಿಕುಮಾರ್‌ ಅವರಿಗೆ ನೀಡುತ್ತಿದ್ದರು. ಮಾಹಿತಿಗಳನ್ನು ಬೇರೆ ರೀತಿಯಲ್ಲಿ ಬಳಸುತ್ತಿದ್ದ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪ್ರಕರಣ(Voter Id Golmal )ಕ್ಕೆ ಕುರಿತಾಗಿ ಐವರು ಆರೋಪಿಗಳನ್ನು ಬಂಧಿಸಿ, ಈವರಗೆ ಹದಿನೈದು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಟಲ್‌ ಆಪ್‌ ಡೆವೆಲಪ್‌ ಮಾಡಿದವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಆಪ್‌ ಗೆ ಸಂಬಂಧಿಸಿದ ಸರ್ವರ್‌ ಡೌನ್‌ ಮಾಡಿರುವುದರಿಂದ ಪೂರ್ಣ ಮಾಹಿತಿಗಳು ಲಭ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಜಾತಿ, ಲಿಂಗ ಸೇರಿದಂತೆ ಹಲವು ದತ್ತಾಂಶಗಳನ್ನು ಸಂಗ್ರಹಿಸಿರುವುದಾಗಿ ಆರೋಪಿ ಕೆಂಪೇಗೌಡ ವಿಚಾರಣೆ ವೇಳೆ ಮಾಹಿತಿ ನೀಡಿರುವುದಾಗಿ ಡಿಸಿಪಿ ಶ್ರೀನಿವಾಸ್‌ ಗೌಡ ಅವರು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲೂ ನಡೆದಿದೆ ವೋಟರ್‌ ಐಡಿ ಹಗರಣ:
ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆ ನಡೆಸಿರುವ ಅವ್ಯವಹಾರ ಬೆಳಕಿಗೆ ಬಂದ ಬೆನ್ನಲ್ಲೇ ಹುಬ್ಬಳ್ಳಿಯಲ್ಲೂ ಈ ರೀತಿಯ ಅವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಮಾರ್ಟ್‌ ಸಿಟಿ ವಿಭಾಗದಿಂದ ಸರ್ವೆಗೆ ಬಂದಿರುವುದಾಗಿ ತಂಡದ ಸದಸ್ಯರು ಹೇಳಿಕೊಂಡು ಕಾಂಗ್ರೆಸ್‌ ಮಹಾನಗರ ಪಾಲಿಕೆ ಸದಸ್ಯರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಮಾಹಿತಿಗಳನ್ನು ಸಂಗ್ರಹ ಮಾಡಲಾಗಿದೆ. ಗಾರ್ಡನ್‌ ರಿಸರ್ಚ್‌ ಸೊಸೈಟಿ ಅವರು ಪಾಲಿಕೆ ಅನುಮತಿ ಪತ್ರವನ್ನು ಕೇಳಿದ್ದು ಆಯುಕ್ತರು ಕೇವಲ ಸ್ವೀಕೃತಿ ಪತ್ರ ಮಾತ್ರ ನೀಡಿದ್ದು, ಅನುಮತಿ ಪತ್ರ ನೀಡಿರಲಿಲ್ಲ ಎಂಬ ಮಾಹಿತಿಗಳು ಬೆಳಕಿಗೆ ಬಂದಿದೆ.

ಇದನ್ನೂ ಓದಿ : Kadalekayi parishe: ಬೆಂಗಳೂರಲ್ಲಿ ಇಂದಿನಿಂದ ಕಡಲೆಕಾಯಿ ಪರಿಷೆ : ಏನಿದರ ಹಿನ್ನೆಲೆ

ಇದನ್ನೂ ಓದಿ : Voter Id Case: ವೋಟರ್‌ ಐಡಿ ಅಕ್ರಮ ಪ್ರಕರಣ : ಚಿಲುಮೆ ಸಂಸ್ಥೆಯ ಇಬ್ಬರು ಅರೆಸ್ಟ್, ಅಕ್ರಮದಲ್ಲಿ ಶಾಸಕರು -ಸಚಿವರ ಹೆಸರು

ದಾವಣಗೆರೆಯಲ್ಲೂ ಈ ರೀತಿಯ ಅವ್ಯವಹಾರದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೂಲಿ ಕಾರ್ಮಿಕರು, ದಲಿತರು ಮತ್ತು ಅಲ್ಪ ಸಂಖ್ಯಾತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ರೀತಿಯ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ.

ಸಮನ್ವಯ ಟ್ರಸ್ಟ್‌ ಗೆ ನೋಟಿಸ್‌ ಜಾರಿ:
ಇದೀಗ ಬೆಂಗಳೂರಿನಲ್ಲಿ ನಡೆದ ವೋಟರ್‌ ಐಡಿ ಹಗರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯಿಂದ ಅಕ್ರಮ ನಡೆದಿರುವುದಾಗಿ ದೂರು ದಾಖಲಿಸಿದ್ದ ಸಮನ್ವಯ ಟ್ರಸ್ಟ್‌ ಗೆ ಬುಧವಾರ ವಿಚಾರಣೆಗೆ ಹಾಜರಾಗಿ, ಸಂಗ್ರಹಿಸಿದ ಸಾಕ್ಷಿ ಆಧಾರಗಳನ್ನು ನೀಡುವುದಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನೋಟಿಸ್‌ ಜಾರಿಗೊಳಿಸಲಾಗಿದೆ.

(Voter Id Golmal) Police have arrested five accused of Chilume organization who committed many illegalities on the pretext of voter ID revision. Kempegowda and Ravikumar, the head of the Chilume company, director Renuka Prasad, manager Dharmesh and supervisor Prajwal have been arrested and interrogated. On the other hand, the police has intensified the investigation.

Comments are closed.