Mangaluru blast Shariq arrested: ಅವನೇ ಇವನು: ಶಾರೀಖ್ ಬಗ್ಗೆ ಮಂಗಳೂರು ಪೊಲೀಸರ ಸ್ಪಷ್ಟನೆ

ಮಂಗಳೂರು: (Mangaluru blast Shariq arrested) ಮಂಗಳೂರು ಬಾಂಬ್‌ ಸ್ಪೋಟ ಪ್ರಕರಣದ ಕುರಿತಾಗಿ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಅನೇಕ ಮಾಹಿತಿಗಳು ದೊರೆತಿದ್ದು, ಇದೀಗ ಮಂಗಳೂರು ಬಾಂಬ್‌ ಸ್ಪೋಟ ಪ್ರಕರಣದ ಶಂಕಿತನೇ ಈ ಶಾರೀಖ್ಎಂದು ಕರ್ನಾಟಕ ಪೊಲೀಸರು ದೃಡಪಡಿಸಿದ್ದಾರೆ.

ತುಂಗಾ ನದಿಯ ದಡದಲ್ಲಿ ಬಾಂಬ್‌ ಸ್ಫೋಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್‌ 19 ರಂದು ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್‌(21 ವರ್ಷ) ಮತ್ತು ಮಂಗಳೂರಿನ ಮಾಜ್‌ ಮುನೀರ್‌ನನ್ನು(22 ವರ್ಷ) ಎಂಬವರನ್ನು ಬಂಧಿಸಿದ್ದರು. ಆದರೆ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಶಾರೀಖ್(Mangaluru blast Shariq arrested) ನಾಪತ್ತೆಯಾಗಿದ್ದ. ಪೊಲೀಸರು ಶಾರೀಖ್ ಬಂಧನಕ್ಕೆ ಸಾಕಷ್ಟು ಬಲೆ ಬೀಸಿದ್ದರೂ ಆತ ಸಿಕ್ಕಿರಲಿಲ್ಲ.ಆದರೆ ಈಗ ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್‌ ಮಾಡಿದವನು ಆತನೇ ಎಂಬ ಸಂಶಯ ಪೊಲೀಸರಿಗೆ ಇತ್ತು. ಇದೀಗ ಅವರ ಸಂಶಯ ದೃಡವಾಗಿದ್ದು, ಅಂದು ನಾಪತ್ತೆಯಾದ ಶಂಕಿತನೇ ಮಂಗಳೂರಿನಲ್ಲಿ ಬಾಂಬ್‌ ಸಿಡಿಸಿ ಸಿಕ್ಕಬಿದ್ದ ಶಾರೀಖ್ಎಂದು ಅಧಿಕಾರಿಗಳಿಂದ ದೃಡಪಟ್ಟಿದ್ದು, ಅತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕದ ಶಿವಮೊಗ್ಗದಲ್ಲಿ ಸಾವರ್ಕರ್‌ ಪೋಸ್ಟರ್‌ ಮೇಲೆ ವ್ಯಕ್ತಿಯೊಬ್ಬನಿಗೆ ಚೂರಿ ಇರಿದ ಪ್ರಕರಣದಲ್ಲೂ ಶಾರೀಖ್ ಶಂಕಿತನಾಗಿದ್ದ. ನಂತರ ಮಂಗಳೂರಿನ ಕೋರ್ಟ್ ಆವರಣ ಹಾಗೂ ಬಿಜೈ ಎಂಬಲ್ಲಿ ಉಗ್ರರ ಪರ ಗೋಡೆ ಬರಹ ಬರೆದು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದರು. ಈ ಹಿಂದೆಯೇ ಆತನ ಮೇಲೆ ಎರಡು ಕೇಸ್‌ ಗಳು ಮಂಗಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಮಂಗಳೂರು ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಪ್ರಮುಖನಾಗಿದ್ದ ಶಾರೀಖ್, ಇಸ್ಲಾಮಿಕ್‌ ಸ್ಟೇಟ್‌ ನೊಂದಿಗೆ ಸಂಪರ್ಕ ಹೊಂದಿರುವ ಮೂರು ಭಯೋತ್ಪಾದಕ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದಾನೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಮಾತನಾಡಿ, “ರಾಜ್ಯದಾದ್ಯಂತ ಹಲವಾರು ತಂಡಗಳು ಪ್ರಕರಣದಲ್ಲಿ ಸಮನ್ವಯ ಸಾಧಿಸುತ್ತಿವೆ ಮತ್ತು ಕೇಂದ್ರ ಏಜೆನ್ಸಿಗಳು ಸಹ ಸಂಪರ್ಕದಲ್ಲಿವೆ. ತನಿಖೆಯ ವಿವರಗಳನ್ನು ಬಹಿರಂಗಪಡಿಸಲು ಇದು ಸೂಕ್ತ ಸಮಯವಲ್ಲ.ಒಂದು ಅಥವಾ ಎರಡು ದಿನಗಳಲ್ಲಿ ಪ್ರಕರಣವನ್ನು ಭೇದಿಸುವ ವಿಶ್ವಾಸವಿದೆ ಎಂದಿದ್ದಾರೆ.

ಇದನ್ನೂ ಓದಿ : Mangalore Blast: ಮಂಗಳೂರು ಬ್ಲಾಸ್ಟ್ : ಆರೋಪಿ ಶಾರೀಖ್ ಸೇರಿ ನಾಲ್ವರು ಅರೆಸ್ಟ್

ಇದನ್ನೂ ಓದಿ : Mangalore bomb blast: ಮಂಗಳೂರು ಬಾಂಬ್‌ ಸ್ಪೋಟ ಪ್ರಕರಣ: ಸ್ಪೋಟದ ತನಿಖೆ ಎನ್‌ಐಎ ಹೆಗಲಿಗೆ :ಸಂಸದ ನಳೀನ್‌ ಕುಮಾರ್‌

ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ 5.30ರ ಸುಮಾರಿಗೆ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಗಂಭೀರ ಗಾಯವಾಗಿತ್ತು. ಆತನ ಬಳಿಯಲ್ಲಿದ್ದ ಕುಕ್ಕರ್ ಸ್ಪೋಟಗೊಂಡಿತ್ತು. ಆಟೋ ಪಂಪ್ ವೆಲ್ ನಾಗುರಿ ಕಡೆಗೆ ಚಲಿಸುತ್ತಿತ್ತು. ಈ ವೇಳೆಯಲ್ಲಿ ದಾರಿ ಮಧ್ಯದಲ್ಲಿ ಕುಕ್ಕರ್ ಹಿಡಿದು ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಆಟೋ ಏರಿದ್ದಾರೆ. ಆಟೋ ಸುಮಾರು ಒಂದು ಕಿ.ಮೀ. ದೂರವನ್ನು ಕ್ರಮಿಸುತ್ತಿದ್ದಂತೆಯೇ ಏಕಾಏಕಿಯಾಗಿ ಸ್ಪೋಟಗೊಂಡಿದೆ. ಕೂಡಲೇ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು. ತನಿಖೆಯ ವೇಳೆ ಸ್ಪೋಟಕ ಮಾಹಿತಿಗಳು ಹೊರಬಿದ್ದಿದ್ದು, ಅಂದು ಹಲವು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದ ಶಾರೀಖ್ ಈ ಸ್ಪೋಟ ನಡೆಸಿರುವುದು ಎಂದು ಸಾಭೀತಾಗಿದೆ

(Mangaluru blast Shariq arrested) As the investigation on the Mangalore bomb blast case intensified, many informations were received, and now the Karnataka Police has confirmed that this Shariq is the suspect of the Mangalore bomb blast case.

Comments are closed.