loudspeakers : ‘ಸರ್ಕಾರದ ಆದೇಶವನ್ನು ಮೀರಿ ಧ್ವನಿವರ್ಧಕ ಬಳಸುತ್ತೇವೆ’ : ಪ್ರಮೋದ್​ ಮುತಾಲಿಕ್​ ಸವಾಲ್​

ಧಾರವಾಡ : loudspeakers : ರಾಜ್ಯದಲ್ಲಿ ಗಣೇಶೋತ್ಸವ ಸಮೀಪಿಸುತ್ತಿದ್ದಂತೆಯೇ ಸಂಭ್ರಮ ಹೆಚ್ಚಾಗಿರುವ ಜೊತೆ ಜೊತೆಯಲ್ಲೇ ಇನ್ಯಾವ ಸಂಘರ್ಷ ನಡೆಯುತ್ತೋ ಎಂಬ ಭಯ ಕೂಡ ಮನೆ ಮಾಡಿದೆ. ಬಿಜೆಪಿಗರು ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾವರ್ಕರ್​ ಫೋಟೋವನ್ನು ಅಳವಡಿಸೋದಾಗಿ ಹೇಳ್ತಿದ್ದಾರೆ . ಇತ್ತ ಕಾಂಗ್ರೆಸ್ಸಿಗರು ನಾವು ಅಂಬೇಡ್ಕರ್ ಫೋಟೋ ಇಡುತ್ತೇವೆ ಅಂತಿದ್ದಾರೆ. ಈ ಎಲ್ಲಾ ರಾಜಕೀಯ ಕಚ್ಚಾಟದ ನಡುವೆಯೇ ಧಾರವಾಡದಲ್ಲಿ ಮತ್ತೊಂದು ಸಂಘರ್ಷ ಆರಂಭಗೊಂಡಿದೆ.


ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಧ್ವನಿವರ್ಧಕಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ನಿಬಂಧನೆಗಳನ್ನು ಹೇರಿದೆ.ಎರಡಕ್ಕಿಂತ ಹೆಚ್ಚು ಧ್ವನಿವರ್ಧಕ ಬಳಕೆ ಇಲ್ಲ.ಡಿಜೆಗಳನ್ನಂತೂ ಬಳಸುವಂತೆಯೇ ಇಲ್ಲ, ರಾತ್ರಿ 10 ರಿಂದ ಬೆಳಗ್ಗೆ ಆರರವರೆಗೆ ಧ್ವನಿವರ್ಧಕಗಳ ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ. ಇದು ಹಿಂದುತ್ವ ವಾದಿಗಳು ಹಾಗೂ ಡಿಜೆ, ಸೌಂಡ್ಸ್​ ಸಿಸ್ಟಂ ಮಾಲೀಕರ ಕಣ್ಣು ಕೆಂಪಗಾಗಿಸಿದೆ. ಸರ್ಕಾರದಿಂದ ಧ್ವನಿ ವರ್ಧಕಗಳ ನಿರ್ಬಂಧದ ಹೊರತಾಗಿಯೂ ನಾವು ಗಣೇಶೋತ್ಸವದಲ್ಲಿ ಧ್ವನಿ ವರ್ಧಕ ಬಳಕೆ ಮಾಡುತ್ತೇವೆಂದು ಶ್ರೀರಾಮ ಸೇನೆ ಸವಾಲ್​ ಎಸೆದಿದೆ. ಸರ್ಕಾರಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ ಈ ರೀತಿಯಾಗಿ ಚಾಲೆಂಜ್​ ಹಾಕಿದ್ದಾರೆ.

ಇತ್ತ ಸರ್ಕಾರದ ಆದೇಶದ ಬಳಿಕ ಸೌಂಡ್​ ಸಿಸ್ಟಂ, ಲೈಟಿಂಗ್ಸ್​ ಮತ್ತು ಜನರೇಟರ್​ ಆಪರೇಟರ್​ಗಳು ಸಂಕಷ್ಟಕ್ಕೆ ಸಿಲುಕಿದ್ದು ನಮ್ಮ ಉದ್ಯಮಕ್ಕೆ ಪೆಟ್ಟು ನೀಡಿದರೆ ನಾವು ಸರ್ಕಾರದ ಹೆಸರು ಬರೆದಿಟ್ಟು ನೇಣು ಹಾಕಿಕೊಳ್ತೇವೆ ಎಂತಾ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಈ ನಡೆಯನ್ನುಉತ್ತರ ಕರ್ನಾಟಕ ಸೌಂಡ್ ಸಿಸ್ಟಮ್, ಲೈಟಿಂಗ್ ಮತ್ತು ಜನರೇಟರ್ ಅಪರೇಟರ್ ಸಂಘ ತೀವ್ರವಾಗಿ ಖಂಡಿಸಿದೆ.


ಮುಂಚಿತವಾಗಿ ಈ ಬಗ್ಗೆ ಯಾವ ಮಾಹಿತಿಯನ್ನೂ ನೀಡದೇ ಇನ್ನೇನು ಹಬ್ಬ ಹೊಸ್ತಿಲಲ್ಲಿ ಇರುವಾಗ ಈ ರೀತಿಯ ನಿರ್ಬಂಧದ ಆದೇಶವನ್ನು ಸರ್ಕಾರ ಹೊರಡಿಸಿದೆ. ಇದರಿಂದ ಸೌಂಡ್​ ಸಿಸ್ಟಂ, ಲೈಟಿಂಗ್ಸ್​ ಮತ್ತು ಜನರೇಟರ್​ ಆಪರೇಟರ್​ಗಳಿಗೆ ಭಾರೀ ನಷ್ಟವುಂಟಾಗಲಿದೆ. ಹೀಗಾಗಿ ಸರ್ಕಾರ ತನ್ನ ಆದೇಶವನ್ನು ಮರುಪರಿಶೀಲನೆ ಮಾಡದೇ ಹೋದಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ತೇವೆ ಅಂತಾ ಸೌಂಡ್​ ಆಪರೇಟರ್​ಗಳು ಹೇಳ್ತಿದ್ದಾರೆ.


ಇತ್ತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ನಾವು ಸರ್ಕಾರದ ಅನುಮತಿಯನ್ನು ಪಡೆಯದೇ ಗಣೇಶೋತ್ಸವದಲ್ಲಿ ಧ್ವನಿವರ್ಧಕ ಬಳಕೆ ಮಾಡುತ್ತೇವೆ. ಎಷ್ಟು ಡಿಜೆ ಸೀಝ್​ ಮಾಡುತ್ತೀರಿ ಅಂತಾ ನಾವೂ ನೋಡ್ತೇವೆ ಎಂದು ಹೇಳಿದ್ದು ಗಣೇಶೋತ್ಸವ ಸಂದರ್ಭದಲ್ಲಿ ಹಿಂದೂಗಳು ಹಾಗೂ ಬಿಜೆಪಿ ಸರ್ಕಾರದ ನಡುವೆಯೇ ದಂಗಲ್​ ಶುರುವಾಗುತ್ತಾ ಎಂಬ ಅನುಮಾನಕ್ಕೆ ಎಡೆ ಮಾಡಿದೆ.

ಇದನ್ನು ಓದಿ : R ASHOK REACTION : ಗಣೇಶೋತ್ಸವಕ್ಕೆ ಎದುರಾದ ವಿಘ್ನ ಶೀಘ್ರದಲ್ಲೇ ನಿವಾರಣೆಯಾಗುತ್ತೆ : ಆರ್​.ಅಶೋಕ್​ ವಿಶ್ವಾಸ

ಇದನ್ನೂ ಓದಿ : siddaramaiah younger brother ramegowda dies : ಸಿದ್ದರಾಮಯ್ಯ ಕಿರಿಯ ಸಹೋದರ ರಾಮೇಗೌಡ ವಿಧಿವಶ

We use loudspeakers beyond the order of the government: Pramod Muthalik challenges the government

Comments are closed.