Justice UU Lalit sworn : ಭಾರತದ 49ನೇ ಮುಖ್ಯನ್ಯಾಯಮೂರ್ತಿಯಾಗಿ ಯು.ಯು ಲಲಿತ್​​ ಪದಗ್ರಹಣ

ದೆಹಲಿ : Justice UU Lalit sworn : ನ್ಯಾಯಮೂರ್ತಿ ಉದಯ್​ ಉಮೇಶ್​ ಲಲಿತ್​ ಇಂದು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನ್ಯಾಯಮೂರ್ತಿ ಯು.ಯು ಲಲಿತ್​​ರಿಗೆ ಪ್ರಮಾಣವಚನವನ್ನು ಭೋಧಿಸಿದರು. ನವೆಂಬರ್​ 8ರಂದು ಉದಯ್​ ಉಮೇಶ್​ ಲಲಿತ್​ ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ 74 ದಿನಗಳ ಕಾಲ ಅವರು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.


ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ 74 ದಿನಗಳ ಅಧಿಕಾರದ ಅವಧಿಯಲ್ಲಿ ಹೊಸ ಪ್ರಕರಣಗಳನ್ನು ಸಾಧ್ಯವಾದಷ್ಟು ಸರಳ, ಪರಿಣಾಮಕಾರಿ , ತ್ವರಿತ ಹಾಗೂ ಪಾರದರ್ಶಕವಾಗಿ ಇಡಲು ಶ್ರಮಿಸುತ್ತೇನೆಂದು ನೂತನ ಮುಖ್ಯ ನ್ಯಾಯಮೂರ್ತಿ ಉದಯ್​ ಉಮೇಶ್​ ಲಲಿತ್​ ಹೇಳಿದ್ದಾರೆ.


ವಕೀಲರು ಹಾಗೂ ನೋಂದಾವಣಿ ಅಧಿಕಾರಿಗಳ ನಡುವಿನ ದೈನಂದಿನ ಜಗಳದ ವಿಚಾರವನ್ನೂ ಇದೇ ವೇಳೆ ಪ್ರಸ್ತಾಪಿಸಿದ ಅವರು, ನಾನು ಈ ಸಮಸ್ಯೆಯನ್ನು ಪರಿಶೀಲಿಸುತ್ತೇನೆ. ಹಾಗೂ ಸಂಬಂಧಿತ ನ್ಯಾಯಪೀಠದ ಎದುರು ತುರ್ತು ವಿಷಯಗಳ ಬಗ್ಗೆ ಮುಕ್ತವಾಗಿ ಪ್ರಸ್ತಾಪಿಸಲು , ಆಡಳಿತವನ್ನು ರೂಪಿಸಲು ನಾನು ನನ್ನ ಸಹೋದ್ಯೋಗಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.


ಸುಪ್ರೀಂಕೋರ್ಟ್​ನಲ್ಲಿ ಶಾಶ್ವತ ಐವರು ನ್ಯಾಯಾಧೀಶರ ಪೀಠವಿರಲಿದ್ದು, ಕಾನೂನನ್ನು ವ್ಯಾಖ್ಯಾನಿಸಲು ಹಾಗೂ ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳನ್ನು ನಿರ್ಧರಿಸಲು ಈ ನ್ಯಾಯಪೀಠವು ಸಂವಿಧನಾತ್ಮಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ನ್ಯಾಯಮೂರ್ತಿ ಲಲಿತ್​ ಹೇಳಿದರು. ತ್ರಿಸದಸ್ಯ ಪೀಠಗಳಿಗೆ ಸೀಮಿತವಾಗಿರುವ ಪ್ರಕರಣಗಳ ವಿಚಾರಣೆಗಳನ್ನೂ ತ್ವರಿತಗತಿಯಲ್ಲಿ ನಡೆಸೋದಾಗಿ ಭರವಸೆ ನೀಡಿದ್ದಾರೆ..


ಶುಕ್ರವಾರ ಸಿಜೆಐ ಹುದ್ದೆಯಿಂದ ನಿವೃತ್ತರಾದ ಎನ್‌ವಿ ರಮಣ ಅವರು ನ್ಯಾಯಮೂರ್ತಿ ಲಲಿತ್ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ವಕೀಲರು ಹಾಗೂ ನ್ಯಾಯಪೀಠದಲ್ಲಿ ಸುದೀರ್ಘ ಅನುಭವ ಹೊಂದಿರುವ ನ್ಯಾಯಮೂರ್ತಿ ಲಲಿತ್ ತಮ್ಮ ಸಮರ್ಥ ನಾಯಕತ್ವದ ಮೂಲಕ ನ್ಯಾಯಾಂಗ ಸಂಸ್ಥೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದು ರಮಣ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ : siddaramaiah younger brother ramegowda dies : ಸಿದ್ದರಾಮಯ್ಯ ಕಿರಿಯ ಸಹೋದರ ರಾಮೇಗೌಡ ವಿಧಿವಶ

ಇದನ್ನೂ ಓದಿ : loudspeakers : ‘ಸರ್ಕಾರದ ಆದೇಶವನ್ನು ಮೀರಿ ಧ್ವನಿವರ್ಧಕ ಬಳಸುತ್ತೇವೆ’ : ಪ್ರಮೋದ್​ ಮುತಾಲಿಕ್​ ಸವಾಲ್​

Justice UU Lalit sworn in as 49th Chief Justice of India

Comments are closed.