ಸೋಮವಾರ, ಏಪ್ರಿಲ್ 28, 2025
HomekarnatakaCM Basavaraj Bommai change : ರಾಜ್ಯದಲ್ಲಿ ಮತ್ತೆ ಬದಲಾಗ್ತಾರಾ ಸಿಎಂ

CM Basavaraj Bommai change : ರಾಜ್ಯದಲ್ಲಿ ಮತ್ತೆ ಬದಲಾಗ್ತಾರಾ ಸಿಎಂ

- Advertisement -

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ್ರೇ ಎರಡು, ಮೂರು ಸಿಎಂ ಬದಲಾವಣೆ (CM Basavaraj Bommai change) ಸಾಮಾನ್ಯ ಎಂಬರಷ್ಟರ ಮಟ್ಟಿಗೆ ಬಿಜೆಪಿ ಆಂತರಿಕ ಕಲಹಗಳು ಹಾಗೂ ಹೈಕಮಾಂಡ್ ನಿರ್ಧಾರಗಳು ಜನರಿಗೆ ಮನದಟ್ಟಾಗಿವೆ. ಪ್ರಸ್ತುತ ಎರಡನೇ ಸಿಎಂ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರೋ ಸರ್ಕಾರಕ್ಕೆ ಶೀಘ್ರವೇ ಮೂರನೇ ಸಿಎಂ ಬರಲಿದ್ದಾರಾ ? ಇಂತಹದೊಂದು ಅನುಮಾನ ಈಗಾಗಲೇ ಕಾಂಗ್ರೆಸ್ ಗೆ ಕಾಡುತ್ತಿದ್ದು, ಬೊಮ್ಮಾಯಿ ಮೇಲೆ ಟೀಕಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತೆ ಎಂದು ವ್ಯಂಗ್ಯವಾಡಿದೆ.

ಬಿಜೆಪಿ ಈ ಹಿಂದೆ ಅಧಿಕಾರದಲ್ಲಿದ್ದಾಗ ಯಶಸ್ವಿ ಎರಡು ಮೂರು ಸಿಎಂ ಬದಲಾವಣೆ ಕಂಡಿತ್ತು. ಈ ಭಾರಿಯೂ ಇದೇ ಸಂಪ್ರದಾಯ ಮುಂದುವರೆಸಿದ ಬಿಜೆಪಿ ಪ್ರಸ್ತುತ ಎರಡನೇ ಸಿಎಂ ಕೈಗೆ ರಾಜ್ಯದ ಜವಾಬ್ದಾರಿ ನೀಡಿದೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ಕೊಲೆ, ಕೋಮು ವೈಷಮ್ಯ ನಿಭಾಯಿಸುವಲ್ಲಿ ಸಿಎಂ ಬೊಮ್ಮಾಯಿ ವಿಫಲವಾಗಿದ್ದಾರೆ. ಬಲವಿಲ್ಲದ ಗೃಹ ಸಚಿವರು ಹಾಗೂ ಸಿಎಂರಿಂದಾಗಿ ರಾಜ್ಯದಲ್ಲಿ ಬಿಜೆಪಿಗೆ ತೀವ್ರ ಮುಜುಗರ ಎದುರಾಗಿದೆ. ಹೀಗಾಗಿ ಚುನಾವಣೆ ದೃಷ್ಟಿಯಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದ್ಯಾ ಎಂಬ ಪ್ರಶ್ನೆ ಹಲವು ದಿನದಿಂದ ಕೇಳಿಬಂದಿದೆ.

ಈ ವಿಚಾರಕ್ಕೆ ಪೂರಕ ಎಂಬಂತೆ ಈಗ ಕಾಂಗ್ರೆಸ್ ಕೂಡ ಕಣಕ್ಕಿಳಿದಿದ್ದು, ಸಿಎಂ ಸ್ಥಾನದಿಂದ ಬೊಮ್ಮಾಯಿ ಕೆಳಕ್ಕೆ ಇಳಿದು ಮೂರನೇ ಸಿಎಂ ಆಯ್ಕೆಯಾಗಲಿದೆ ಎಂದು ಭವಿಷ್ಯ ನುಡಿಯುವ ಮೂಲಕ ಬಿಜೆಪಿ ಪಾಳಯಕ್ಕೆ ಟ್ವೀಟ್ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಕಾಂಗ್ರೆಸ್, ಈ ಸರ್ಕಾರದ ಅಕ್ರಮಗಳನ್ನು , ವೈಫಲ್ಯಗಳನ್ನು ನಿಮ್ಮ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೇ ಬಿಚ್ಚಿಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರೇ ನೀವಷ್ಟೇ ಸಂಘ ಪರಿವಾರದ ವೇಷ ತೊಟ್ಟರೂ, ಸಂಘ ಪರಿವಾರದವರಿಗೆ ನೀವು ಪರಕೀಯ‌

‘ಕೇಶವನ ಕೃಪೆಯಿಂದ ಶೀಘ್ರಮೇವ ತೃತೀಯ ಸಿಎಂ ಪ್ರಾಪ್ತಿರಸ್ತು’ ಹಾಗಂತ ಕೇಶವ ಕೃಪದಲ್ಲಿ ಹಾರೈಸಲಾಗುತ್ತಿದೆಯಂತೇ ನಿಜವೇ ? ಎಂದು ಕಾಂಗ್ರೆಸ್ ಕಾಲೆಳೆದಿದೆ‌.ಬಿಜೆಪಿಯಲ್ಲಿ ಆರ್ ಎಸ್ ಎಸ್ ಹಾಗೂ ಸಂಘಪರಿವಾರದಿಂದ ಬಂದವರಿಗೆ ಸಿಗೋ ಪ್ರಾಮುಖ್ಯತೆ ಇತರರಿಗೆ ಸಿಗೋದಿಲ್ಲ ಅನ್ನೋದು ಈ ಹಿಂದಿನಿಂದಲೂ ಕೇಳಿಬಂದಿರೋ ಮಾತು. ಈಗ ಬೊಮ್ಮಾಯಿ ವಿಚಾರದಲ್ಲೂ ಇದು ಸತ್ಯವಾಗಿದೆ. ಬಿಎಸ್ವೈ ಕೆಳಗೆ ಇಳಿಸುವ ವೇಳೆ ಬಿಜೆಪಿ ಅನಿವಾರ್ಯವಾಗಿ ಬೊಮ್ಮಾಯಿಯವರಿಗೆ ಪಟ್ಟ ಕಟ್ಟಿತ್ತಾದರೂ ಈಗ ಬೊಮ್ಮಾಯಿ ಮುಂದುವರೆಸಲು ಸ್ವತಃ ಬಿಜೆಪಿ ಗೆ ಮನಸ್ಸಿಲ್ಲ ಎನ್ನಲಾಗ್ತಿದೆ. ಇದೇ ವಿಚಾರಕ್ಕೆ ಈಗ ಕಾಂಗ್ರೆಸ್ ಬೊಮ್ಮಾಯಿಗೆ ಟ್ವೀಟ್ ಟಾಂಗ್ ನೀಡಿದೆ.

ಇದನ್ನೂ ಓದಿ : BJP Election Politics : ಚುನಾವಣೆಗಾಗಿ ಬಿಜೆಪಿ ಪಾಲಿಟಿಕ್ಸ್ : ಮಸೂದ್, ಫಾಸಿಲ್ ನಿವಾಸಕ್ಕೂ ಬರ್ತಾರೆ ಸಿಎಂ ಬೊಮ್ಮಾಯಿ

ಇದನ್ನೂ ಓದಿ : 6 arrested in Fazil murder : ಫಾಜಿಲ್‌ ಹತ್ಯೆ 6 ಮಂದಿ ಬಂಧನ ; ಹೇಗಿತ್ತು ಗೊತ್ತಾ ಪೊಲೀಸರ ಕಾರ್ಯಾಚರಣೆ

Will CM Basavaraj Bommai change again in the Karnataka

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular