Tirumala Tirupati Hundi Collection: ಜುಲೈ ತಿಂಗಳಲ್ಲಿ ಬರೋಬ್ಬರಿ 139.45 ಕೋಟಿ ಆದಾಯ ಗಳಿಸಿದ ತಿರುಮಲ ತಿರುಪತಿ ದೇವಸ್ಥಾನಗಳು

ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಜುಲೈ ತಿಂಗಳಿನಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತರಿಂದ ಕಾಣಿಕೆ ರೂಪದಲ್ಲಿ 139.45 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ. ಇದರೊಂದಿಗೆ ಹುಂಡಿ ಸಂಗ್ರಹದಲ್ಲಿ ಹೊಸ ರೀತಿಯ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಮಾರಣಾಂತಿಕ ಕೊರೊನಾ ವೈರಸ್ ಇಳಿಕೆಯಾಗಿರುವುದರಿಂದ ಭಕ್ತರು ಹೆಚ್ಚಾಗುತ್ತಿದ್ದಾರೆ ಮತ್ತು ಇದರಿಂದ ಹೆಚ್ಚು ಹಣ ಹುಂಡಿಯಲ್ಲಿ ಬೀಳುತ್ತಿದೆ. ಹೀಗೆ ಹುಂಡಿ ಸಂಗ್ರಹದಿಂದ ಆದಾಯ ಹೆಚ್ಚಾಗುತ್ತಿದೆ.(Tirumala Tirupati hundi collection)

ಈ ಹಿಂದೆ, ಕೊರೋನ ವೈರಸ್ ಹರಡುವಿಕೆಯೊಂದಿಗೆ, 83 ದಿನಗಳ ಕಾಲ ದೇವರ ದರ್ಶನವನ್ನು ಪಡೆಯಲು ಭಕ್ತರನ್ನು ಟಿಟಿಡಿ ನಿಲ್ಲಿಸಿತು. ವೈರಸ್ ಹರಡುವುದನ್ನು ನಿಯಂತ್ರಿಸಿದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದೇಶದೊಂದಿಗೆ, ಟಿಟಿಡಿ ಸೀಮಿತ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ಪ್ರಾರಂಭಿಸಿತು. ಕೊರೋನ ಸಮಯದಲ್ಲಿ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಕ್ಷಿಪ್ರವಾಗಿ ಕುಸಿದಿದ್ದು, ಹುಂಡಿ ಸಂಗ್ರಹವೂ ಕಡಿಮೆಯಾಗಿತ್ತು. ಹೀಗಾಗಿ ಟಿಟಿಡಿಯ ವಾರ್ಷಿಕ ಬಜೆಟ್ ಕೂಡ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗಿತ್ತು.

ಪ್ರಸ್ತುತ ತಿರುಮಲಕ್ಕೆ ಭಕ್ತರ ಸಂಖ್ಯೆ ಹೆಚ್ಚಿದ್ದು, ಹುಂಡಿ ಸಂಗ್ರಹದಲ್ಲಿ ಕ್ರಮೇಣ ಹೆಚ್ಚಳವಾಗಿದೆ. ಹುಂಡಿ ಸಂಗ್ರಹ ಜುಲೈನಲ್ಲಿ 139.45 ಕೋಟಿ ರೂ.ಗಳೊಂದಿಗೆ ಹೊಸ ದಾಖಲೆ ಸೃಷ್ಟಿಸಿದೆ. ಹುಂಡಿಯಿಂದ ಮಾರ್ಚ್‌ನಲ್ಲಿ 128 ಕೋಟಿ ರೂ., ಏಪ್ರಿಲ್‌ನಲ್ಲಿ 127.5 ಕೋಟಿ ರೂ., ಮೇನಲ್ಲಿ 130.5 ಕೋಟಿ ರೂ., ಜೂನ್‌ನಲ್ಲಿ 123.75 ಕೋಟಿ ರೂ. ಮಾರ್ಚ್‌ನಿಂದ ಜೂನ್‌ವರೆಗಿನ ಹುಂಡಿ ಸಂಗ್ರಹದ ನಿವ್ವಳ ಆದಾಯ 649.21 ಕೋಟಿ ರೂ. ಆಗಿದೆ . ಕಳೆದ ಐದು ತಿಂಗಳಿನಿಂದ ಹುಂಡಿ ಇಂದ ಬರುವ ಮಾಸಿಕ ಆದಾಯ 100 ಕೋಟಿ ದಾಟಿದೆ. ಕಳೆದ ಐದು ವರ್ಷಗಳಿಂದ ಜುಲೈ ತಿಂಗಳ ಆದಾಯ 100 ಕೋಟಿ ರೂ. ಇದ್ದರೆ ಈ ವರ್ಷಕ್ಕೆ ಬಂದರೆ ಜುಲೈ 5 ರಂದು ದಿನದ ಆದಾಯ 6.18 ಕೋಟಿ ರೂ. ದಷ್ಟು ಹೆಚ್ಚಿದೆ.

ಟಿಟಿಡಿಯ ಆದಾಯ ವಿವರಗಳನ್ನು ಪರಿಶೀಲಿಸಿದರೆ, 1954ರ ಜೂನ್ ತಿಂಗಳ ಆದಾಯ 5,35,703 ರೂ. ಗಳಿಸಿತ್ತು. 2015-16ನೇ ಹಣಕಾಸು ವರ್ಷದಲ್ಲಿ ಟಿಟಿಡಿಯು 1,010 ಕೋಟಿ ರೂ. ಗಳಿಸಿತ್ತು .

ಇದನ್ನೂ ಓದಿ : Another Monkeypox Case Reported: ಕೇರಳದಲ್ಲಿ ಮತ್ತೊಂದು ಮಂಕಿ ಪಾಕ್ಸ್ ವರದಿ; ಭಾರತದಲ್ಲಿ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆ

ಇದನ್ನೂ ಓದಿ : PV Sindhu Commonwealth Games : ಭಾರತದ ಧ್ವಜಧಾರಿಯಾಗಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧೂ

(Tirumala Tirupati July Hundi Collection Record breaking collection)

Comments are closed.