ಧರ್ಮಸ್ಥಳ ಮಂಜುನಾಥನ ಶಾಪ? ಸೋಶಿಯಲ್ ಮೀಡಿಯಾಗೆ ‘ಕಬ್ಜ ಶರಣ್’ ಗುಡ್ ಬೈ!

Kabja Sharan: ಬೆಂಗಳೂರು: ಯುವತಿಯ ಅಪಹರಣದಂತಹ ಗಂಭೀರ ಆರೋಪದ ಸುಳಿಗೆ ಸಿಲುಕಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ವಿವಾದಿತ ಯೂಟ್ಯೂಬರ್ ಕಬ್ಜ ಶರಣ್, ಇದೀಗ ದಿಢೀರನೆ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆಯು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಅದರಲ್ಲೂ ವಿಶೇಷವಾಗಿ ಧರ್ಮಸ್ಥಳದ ಕುರಿತು ಅವರಿಗಿದ್ದ ನಿಲುವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಕಾಮೆಂಟ್‌ಗಳು ಹರಿದಾಡುತ್ತಿವೆ. ಸ್ಳಳೀಯರಿಂದ ಧರ್ಮದೇಟು ಬಿದ್ದ ನಂತರ ಅವರು ಈ ನಿರ್ಧಾರವನ್ನು ಘೋಷಿಸಿದ್ದಾರೆ.

ಭಾವನಾತ್ಮಕ ವಿಡಿಯೋ ಮೂಲಕ ವಿದಾಯ
ತಮ್ಮ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಮತ್ತು ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶದಿಂದ ಕಂಗೆಟ್ಟಿರುವ ಶರಣ್, ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. “ಇನ್ನು ಮುಂದೆ ನಾನು ಯಾವುದೇ ವಿಡಿಯೋಗಳನ್ನು ಮಾಡುವುದಿಲ್ಲ, ಸಾಮಾಜಿಕ ಜಾಲತಾಣದ ಬದುಕಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ. ವಿವಾದಗಳ ಸುಳಿಗೆ ಸಿಲುಕಿ ಮನನೊಂದಿರುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ, ಯುವತಿಯ ಅಪಹರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳದ ಶಾಪದ ಬಗ್ಗೆ ನೆಟ್ಟಿಗರ ಚರ್ಚೆ
ಕಬ್ಜ ಶರಣ್ ಅವರ ಈ ದಿಢೀರ್ ಪತನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಆಯಾಮದ ಚರ್ಚೆ ಶುರುವಾಗಿದೆ.

ಸೌಜನ್ಯ ಪ್ರಕರಣದ ಹಿನ್ನೆಲೆ: ಈ ಹಿಂದೆ ಸೌಜನ್ಯ ಕೇಸ್‌ಗೆ ಸಂಬಂಧಿಸಿದಂತೆ ಧರ್ಮಸ್ಥಳದ ವಿರುದ್ಧವಾಗಿ ಶರಣ್ ಪಾದಯಾತ್ರೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಅವರು ಸಂಕಷ್ಟಕ್ಕೆ ಸಿಲುಕಿರುವುದನ್ನು ಕಂಡು, “ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಶಾಪ ಇವರಿಗೆ ತಟ್ಟಿದೆ, ಧರ್ಮದ ವಿರುದ್ಧ ನಿಂತಿದ್ದಕ್ಕೇ ಇವರಿಗೆ ಇಂತಹ ಪರಿಸ್ಥಿತಿ ಬಂದಿದೆ” ಎಂದು ಸಾವಿರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ. ದೈವದ ಆಟದ ಮುಂದೆ ಯಾರೂ ದೊಡ್ಡವರಲ್ಲ ಎಂಬ ಅಭಿಪ್ರಾಯಗಳು ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: 10,000ಕ್ಕೆ ಬೆಸ್ಟ್ 5G ಸ್ಮಾರ್ಟ್‌ಫೋನ್‌ಗಳು: ಸ್ಯಾಮ್‌ಸಂಗ್, ರೆಡ್ಮಿ ಮತ್ತು ಪೊಕೊ ಯಾವುದು ಬೆಸ್ಟ್?

ಅಪಹರಣದ ಆರೋಪ: ಮಂಡ್ಯ ಕೆಂಪಣ್ಣ ಮತ್ತು ಕಬ್ಜ ಶರಣ್ ಯುವತಿಯೊಬ್ಬಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪವು ಇವರ ಜನಪ್ರಿಯತೆಗೆ ದೊಡ್ಡ ಹೊಡೆತ ನೀಡಿದೆ. ವ್ಯೂಸ್ ಮತ್ತು ಲೈಕ್ಸ್ ಹಪಾಹಪಿಯಲ್ಲಿ ಕಾನೂನು ಮತ್ತು ನೈತಿಕತೆಯನ್ನು ಗಾಳಿಗೆ ತೂರಿದ್ದಾರೆ ಎಂದು ಜನರು ಕಿಡಿಕಾರಿದ್ದಾರೆ. ಶರಣ್ ಅವರ ವಿದಾಯದ ನಿರ್ಧಾರವನ್ನು ಕೆಲವರು “ತಪ್ಪು ಒಪ್ಪಿಕೊಂಡಂತೆ” ಎಂದು ವಿಶ್ಲೇಷಿಸುತ್ತಿದ್ದರೆ, ಇನ್ನು ಕೆಲವರು ಇದು ಕೇವಲ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಮಾಡುತ್ತಿರುವ ನಾಟಕ ಎಂದು ಟೀಕಿಸುತ್ತಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories