ಮಹಿಳೆಯರ ಹೆಲ್ಪ್ ಡೆಸ್ಕ್ ರದ್ದು : 250 ಆಪ್ತ ಸಮಾಲೋಚಕಿಯರಿಗೆ ಸಂಕಷ್ಟ

Womens Help Desk : ರಾಜ್ಯ ರಾಜಕಾರಣದಲ್ಲಿ ಮತ್ತೊಂದು ದ್ವೇಷ ರಾಜಕಾರಣದ ಸಾಕ್ಷಿ ಹೊರಬಿದ್ದಿದೆ.‌ದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government), ನೊಂದ ಹಾಗೂ ಪೀಡಿತ ಹೆಣ್ಣುಮಕ್ಕಳಿಗೆ ಧೈರ್ಯ ತುಂಬುವ ಉದ್ದೇಶದಿಂದ ಬಿಜೆಪಿ ಸರ್ಕಾರ ಆರಂಭಿಸಿದ ವುಮನ್ ಹೆಲ್ಪ್ ಡೆಸ್ಕ್ (Womens Help Desk ) ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಈಗಾಗಲೇ ಆದೇಶ ಹೊರಡಿಸಿದೆ.

Womens Help Desk : ರಾಜ್ಯ ರಾಜಕಾರಣದಲ್ಲಿ ಮತ್ತೊಂದು ದ್ವೇಷ ರಾಜಕಾರಣದ ಸಾಕ್ಷಿ ಹೊರಬಿದ್ದಿದೆ.‌ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ (Free Bus) ಪ್ರಯಾಣ ಆರಂಭಿಸಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government), ನೊಂದ ಹಾಗೂ ಪೀಡಿತ ಹೆಣ್ಣುಮಕ್ಕಳಿಗೆ ಧೈರ್ಯ ತುಂಬುವ ಉದ್ದೇಶದಿಂದ ಬಿಜೆಪಿ ಸರ್ಕಾರ ಆರಂಭಿಸಿದ ವುಮನ್ ಹೆಲ್ಪ್ ಡೆಸ್ಕ್ (Womens Help Desk ) ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಈಗಾಗಲೇ ಆದೇಶ ಹೊರಡಿಸಿದೆ.

ನಗರದಲ್ಲಿ ಹೆಚ್ಚಿದ‌ ಮಹಿಳೆಯರ‌ ಮೇಲಿನ ಕಿರುಕುಳ ಪ್ರಕರಣಗಳನ್ನು ಗಮನಿಸಿದ ಬಿಜೆಪಿ ಸರ್ಕಾರ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ನಗರ ದಾದ್ಯಂತ ಮಹಿಳೆಯರ ತುರ್ತು ಸಹಾಯಕ್ಕಾಗಿ ಮಹಿಳಾ ಹೆಲ್ಪ್ ಡೆಸ್ಕ್ ತೆರೆದಿದ್ದರು. 2021 ರ ಜನವರಿಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿತ್ತು.

Womens Help Desk The Karnataka Government has issued an order to abolish Bangalore City Police Women's Help line
Image Credit to Original Source

ನಿರ್ಭಯಾ ಯೋಜನೆಯ ಸೇಫ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ನಗರದಲ್ಲಿ ಈ ವುಮನ್ ಹೆಲ್ಪ್ ಡೆಸ್ಕ್ ತೆರೆಯಲಾಗಿತ್ತು. ಮೂರು ವರ್ಷಗಳ ಅವಧಿಗೆ ಆರಂಭಿಸಲಾಗಿದ್ದ ಈ ಯೋಜನೆಗಾಗಿ ನಿರ್ಭಯಾ ಯೋಜನೆಯಡಿ 200 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿತ್ತು. ಈ ಯೋಜನೆಯಡಿ ನಗರದ 110 ಪೊಲೀಸ್ ಠಾಣೆಗೆ , ಪ್ರತಿ ಠಾಣೆಗೆ ಇಬ್ಬರಂತೆ 220 ಹಾಗೂ ಬೌರಿಂಗ್, ವಿಕ್ಟೋರಿಯಾ, ನಿಮಾನ್ಸ್ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸಿ ಒಟ್ಟು 250 ಆಪ್ತ ಸಮಾಲೋಚಕಿಯರಿಗೆ ಸಿವಿಲ್ ಡಿಫೆನ್ಸ್ ನಿಂದ ತರಬೇತಿ ನೀಡಿ ನಿಯೋಜಿಸಲಾಗಿತ್ತು.

ಇದನ್ನೂ ಓದಿ : LPG EKYC : ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಪಡೆಯಲು ಮನೆಯಿಂದಲೇ ಮಾಡಿ ಇಕೆವೈಸಿ

ಈ ಆಪ್ತ ಸಮಾಲೋಚಕಿಯರಿಗೆ ತಿಂಗಳಿಗೆ ಹದಿನೈದು ಸಾವಿರ ಗೌರವ ಧನ ನೀಡಲಾಗುತ್ತಿತ್ತು. ಆದರೆ ಈಗ ಅನುದಾನದ ಕೊರತೆ ಸಮಸ್ಯೆ ಮುಂದಿಟ್ಟು ಕೊಂಡು ಹೆಲ್ಪ್ ಡೆಸ್ಕ್ ರದ್ದು ಮಾಡುವಂತೆ ಹಾಗೂ ಆಪ್ತ ಸಮಾಲೋಚಕಿಯರಿಗೆ ಠಾಣೆಗೆ ಬರದಂತೆ ಸೂಚಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ನಗರದಲ್ಲಿ ಪ್ರತಿನಿತ್ಯ ನೂರಾರು ಮಹಿಳಾ ಕಿರುಕುಳ,ಕೌಟುಂಬಿಕ ದೌರ್ಜನ್ಯ, ಪೊಕ್ಸೋದಂತಹ ಪ್ರಕರಣಗಳು ದಾಖಲಾಗುತ್ತಿವೆ.‌ನಗರದ ವ್ಯಾಪ್ತಿಯಲ್ಲೇ ಅಕ್ಟೋಬರ್ ಗೆ ಅಂತ್ಯಗೊಂಡ ದಾಖಲೆಗಳ ಪ್ರಕಾರ ಇದುವರೆಗೂ 21,941 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ವಿವಿಧ ರೀತಿಯ ಕಿರುಕುಳ ಪ್ರಕರಣಗಳ ಸಂದರ್ಭದಲ್ಲಿ ನ್ಯಾಯ ಅರಸಿ ಪೊಲೀಸ್ ಠಾಣೆಗೆ ಬರುವ ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿ ಅವರನ್ನು ಸಮಾಧಾನಿಸಿ ತನಿಖೆ ಸೇರಿದಂತೆ ವಿವಿಧ ಸಂದರ್ಭದಲ್ಲಿ ಆಪ್ತ ಸಮಾಲೋಚಕಿಯರು ನೆರವಾಗುತ್ತಿದ್ದರು.

ಇದನ್ನೂ ಓದಿ : ಕೊರೊನಾ ನಡುವೆ ಇಯರ್ ಎಂಡ್, ಕ್ರಿಸ್‌ಮಸ್ ರಜೆ: ಪ್ರವಾಸಿಗರಿಂದ್ಲೇ‌ ಬೆಂಗಳೂರಿಗೆ ಸೋಂಕು ಉಲ್ಬಣಿಸುವ ಭೀತಿ

ಸಂತ್ರಸ್ತರು ಹಾಗೂ ಪೊಲೀಸ್ ಇಲಾಖೆಯ ನಡುವೆ ಈ ಸಮಾಲೋಚಕಿಯರು ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ, ಡಿಸೆಂಬರ್ 31 ಕ್ಕೆ ಈ ಯೋಜನೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದು, ಅಧಿಕೃತ ಆದೇಶ ಹೊರಡಿಸಿದೆ. ಇದರಿಂದ ಅಂದಾಜು250 ಕ್ಕೂ ಹೆಚ್ಚು ಆಪ್ತಸಮಾಲೋಚಕಿಯರು ಬೀದಿಗೆ ಬೀಳಲಿದ್ದಾರೆ.

ಸರ್ಕಾರ ಅನುದಾನ ಉಳಿಸುವ ನಿಟ್ಟಿನಲ್ಲಿ ಇಂತಹದೊಂದು ನಿರ್ಧಾರಕೈಗೊಂಡಿದೆ ಎನ್ನಲಾಗಿದ್ದು, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಜಾರಿಯಾದ ಯೋಜನೆ ಸ್ಥಗಿತಗೊಳಿಸಿರೋದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್ ಭದ್ರಮಾಡಿಕೊಳ್ಳಲು ಗ್ಯಾರಂಟಿಗಳನ್ನು ಮುಂದುವರೆಸಿಕೊಂಡು ಹೋಗಲು ಜನರಿಗೆ ಸಹಾಯವಾಗುವಂತ ಯೋಜನೆಗಳನ್ನು ಕೈಬಿಡಲು ಮುಂದಾಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಪೌರ ಕಾರ್ಮಿಕರ 15 ಕೋಟಿ ಅನುದಾನ ಹಿಂಪಡೆದ ಸರ್ಕಾರ

ಆದರೆ ಮೂಲಗಳ ಮಾಹಿತಿ ಪ್ರಕಾರ, ಸರ್ಕಾರ ಸದ್ಯ ಈ ಹೆಲ್ಪ್ ಡೆಸ್ಕ್ ರದ್ದುಗೊಳಿಸಿದ್ದು ಇದಕ್ಕೆ ಪರ್ಯಾಯವಾಗಿ ಮಹಿಳಾ ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಸದ್ಯ ನಗರದಲ್ಲಿ ಎರಡು ಮಹಿಳಾ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ ವಿಭಾಗಕ್ಕೊಂದರಂತೆ ಹೊಸತಾಗಿ ಎಂಟು ಹೊಸ ಪೊಲೀಸ್ ಠಾಣೆ ತೆರೆಯಲು ಸರ್ಕಾರ ನಿರ್ಧರಿಸಿದೆ.

Womens Help Desk The Karnataka Government has issued an order to abolish Bangalore City Police Women's Help line
Image Credit to Original Source

ಈ ಪೊಲೀಸ್ ಠಾಣೆಗಳು ಮಹಿಳೆಯರ ಸುರಕ್ಷತೆಗಾಗಿಯೇ ಕಾರ್ಯನಿರ್ವಹಿಸಲಿದೆ ಎಂದು ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಡಿಸಿಪಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.

Womens Help Desk The Karnataka Government has issued an order to abolish Bangalore City Police Women’s Help line

Comments are closed.