ಚಿಕ್ಕಬಳ್ಳಾಪುರ : ಕರ್ನಾಟಕಕ್ಕೆ ಇದೀಗ ಮಾರಕ ಜಿಕಾ ವೈರಸ್ ಭೀತಿ ಶುರುವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಇದೀಗ ಜಿಕಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಣೆ ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ತಲಕಾಯಲಬೆಟ್ಟದ ಸಮೀಪದ ವೆಂಕಟಾಪುರ, ಬಚ್ಚನಹಳ್ಳಿ, ವಡ್ಡಹಳ್ಳಿ, ದಿಬ್ಬೂರಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿರುವ ಸುಮಾರು 30 ಕ್ಕೂ ಅಧಿಕ ಗರ್ಭಿಣಿಯರನ್ನು ಹಾಗೂ ಜ್ವರ ಪೀಡಿತರಾಗಿರುವ 7 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಇವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಈಗಾಗಲೇ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
Image credit to Original Sourceತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ಶಿಡ್ಲಘಟ್ಟ ಮುಂತಾದ ಗ್ರಾಮಗಳಲ್ಲಿ ಸೊಳ್ಳಗಳಲ್ಲಿ ಜಿಕಾ ವೈರಸ್ ಪತ್ತೆಯಾದ ಬೆನ್ನಲ್ಲೇ, ಇದೀಗ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಜಿಕಾ ವೈರಸ್ ಪತ್ತೆಯಾಗಿರುವ ಗ್ರಾಮಗಳಿಗೆ ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ತೆರಳಿದ್ದು, ಪರಿಶೀಲನೆಯನ್ನು ನಡೆಸಿದ್ದಾರೆ. ಅಲ್ಲದೇ ಈ ಕುರಿತು ವಿಶೇಷ ಸಭೆಗಳನ್ನು ನಡೆಸಿ ಜಿಕಾ ವೈರಸ್ ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ
ಏನಿದು ಜಿಕಾ ವೈರಸ್ ? ಅಷ್ಟೊಂದು ಅಪಾಯಕಾರಿಯೇ ?
ಜಿಕಾ ವೈರಸ್ ಸೋಂಕು ಹೆಚ್ಚು ಅಪಾಯಕಾರಿ. ಇದೊಂದು ವೈರಸ್ ಆಗಿದ್ದು ಸೊಳ್ಳೆಗಳಿಂದ ಹರಡುತ್ತದೆ. ಡೆಂಗ್ಯೂ, ಚಿಕನ್ ಗುನ್ಯಾ ಮಾದರಿಯಲ್ಲಿಯೇ ಈಡಿಸ್ ಜಾತಿಯ ಸೊಳ್ಳೆಗಳು ಈ ಜಿಕಾ ವೈರಸ್ ಅನ್ನು ಹರಡುತ್ತವೆ. ಜಿಕಾ ವೈರಸ್ ಸೋಂಕಿತ ಸೊಳ್ಳೆಗಳು ಹೆಚ್ಚಾಗಿ ಹಗಲಿನ ಹೊತ್ತಲೇ ಕಚ್ಚುತ್ತದೆ.
ಜಿಕಾ ವೈರಸ್ ಲಕ್ಷ್ಮಣಗಳು ಸಾಮಾನ್ಯವಾಗಿ ಸುಮಾರು ಏಳು ದಿನಗಳ ಕಾಲ ಕಂಡು ಬರುತ್ತದೆ. ಆದರೆ ಕೆಲವೊಮ್ಮೆ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬರುವುದಿಲ್ಲ. ಯಾವುದೇ ಕಾರಣಕ್ಕೂ ಜ್ವರ ಕಾಣಿಸಿಕೊಂಡ ನಂತರದಲ್ಲಿ ನಿರ್ಲಕ್ಷ್ಯ ಮಾಡದೇ ವೈದರ ಬಳಿಗೆ ತೆರಳಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅತೀ ಅವಶ್ಯಕ.
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ

ಜಿಕಾ ವೈರಸ್ ಸೋಂಕಿನ ಲಕ್ಷಣಗಳೇನು ?
ಜಿಕಾ ವೈರಸ್ ಇತರ ವೈರಸ್ ಸೋಂಕಿನಂತೆಯೇ ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಸಾಮಾನ್ಯವಾಗಿ ಜಿಕಾ ವೈರಸ್ ಸೋಂಕು ತಗುಲಿದ ನಂತರ ಜ್ವರ, ತಲೆನೋವು, ಕೀಲು ಮತ್ತು ಸ್ನಾಯು ನೋವು ಕಾಣಿಸಿಕೊಳ್ಳುತದೆ. ಅಲ್ಲದೇ ಕಣ್ಣು ಕೆಂಪಗಾಗುತ್ತದೆ. ಆದರೆ ಬಹುತೇಕ ಸೋಕಿತರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲ.
ಇದನ್ನೂ ಓದಿ : ಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ !
ಜಿಕಾ ವೈರಸ್ ನಿಯಂತ್ರಣ ಹೇಗೆ ?
ಜಿಕಾ ವೈರಸ್ ಸೊಳ್ಳೆಯಿಂದ ಹರಡುವ ರೋಗ. ಹೀಗಾಗಿ ಸೊಳ್ಳೆಗಳ ಕಡಿತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಮನೆ, ಶಾಲೆಗಳ ಸುತ್ತಮುತ್ತ ಈಡಿಸ್ ಸೊಳ್ಳೆ ಉತ್ಪಾದನೆ ಆಗದಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗಿದೆ. ಮುಖ್ಯವಾಗಿ ನೀರಿನ ಶೇಖರಣಾ ಪಾತ್ರೆಗಳನ್ನು ಮುಚ್ಚುವುದು, ಹೂವಿನ ಕುಂಡಗಳಲ್ಲಿ ನಿಂತಿರುವ ನೀರನ್ನು ತೆಗೆಯಬೇಕು. ಟಯರ್, ಎಳನೀರನ ಚಿಪ್ಪನ್ನು ರಾಶಿ ಹಾಕುವುದಕ್ಕೆ ನಿಯಂತ್ರಣ ಹೇರಬೇಕು.
Zika virus scare begins in Karnataka Deadly virus detected in Chikkaballapur high alert Declared