ಕಾಂಗ್ರೆಸ್ ಟೀಕೆಯಿಂದ ಮುಜುಗರ: ವಿಪಕ್ಷ ನಾಯಕನಿಲ್ಲದೇ ಅಧಿವೇಶನದಿಂದ ದೂರ ಉಳಿಯಲು ಬಿಜೆಪಿ ಶಾಸಕರ ನಿರ್ಧಾರ

ವಿರೋಧ ಪಕ್ಷದ ನಾಯಕನಿಲ್ಲದೇ ವಿಧಾನ ಸಭೆಯ ಒಳಗೆ ಹಾಗೂ ಹೊರಗೆ ಕಾಂಗ್ರೆಸ್ ಎದುರಿಸಲಾಗದೇ ತತ್ತರಿಸಿ ಹೋಗಿದೆ. ಚುನಾವಣೆ ಮುಗಿದು ಫಲಿತಾಂಶ ಬಂದು ಬಿಜೆಪಿ ವಿಪಕ್ಷದ ಗ್ಯಾಲರಿ ಸೇರಿದಾಗಿನಿಂದ ವಿರೋಧ ಪಕ್ಷದ ನಾಯಕ ಯಾರು ಎಂಬ ಪ್ರಶ್ನೆಗೆ ಬಿಜೆಪಿ ಉತ್ತರ ಹುಡುಕುತ್ತಿದೆ. ಆದರೆ ಇನ್ನೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸಂಕಷ್ಟದಲ್ಲಿದೆ. ನಾಯಕತ್ವದ ಕೊರತೆ ಬಿಜೆಪಿಗೆ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ ಪೋಸ್ಟರ್ ವಾರ್ ಸೇರಿದಂತೆ ನಾನಾ ರೀತಿಯಲ್ಲಿ ಬಿಜೆಪಿಯನ್ನು ಟೀಕಿಸುತ್ತಿರೋ ಕಾಂಗ್ರೆಸ್ ಕಿರಿಕಿರಿಗೆ ಬೇಸತ್ತ ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕನ ಆಯ್ಕೆಯಾಗದೇ ಇದ್ದಲ್ಲಿ ವಿಧಾನಸಭಾ ಅಧಿವೇಶನ ದಿಂದ ದೂರ ಉಳಿಯುವ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿ ಒಂದು ವರ್ಷ ಸಮೀಪಿಸುತ್ತಿದೆ. ಅಧಿವೇಶನವೂ ನಡೆದಿದೆ. ಆದರೂ ಬಿಜೆಪಿ ಮಾತ್ರ ವಿರೋಧ ಪಕ್ಷದ ನಾಯಕನಿಲ್ಲದೇ ವಿಧಾನ ಸಭೆಯ ಒಳಗೆ ಹಾಗೂ ಹೊರಗೆ ಕಾಂಗ್ರೆಸ್ ಎದುರಿಸಲಾಗದೇ ತತ್ತರಿಸಿ ಹೋಗಿದೆ. ಚುನಾವಣೆ ಮುಗಿದು ಫಲಿತಾಂಶ ಬಂದು ಬಿಜೆಪಿ ವಿಪಕ್ಷದ ಗ್ಯಾಲರಿ ಸೇರಿದಾಗಿನಿಂದ ವಿರೋಧ ಪಕ್ಷದ ನಾಯಕ ಯಾರು ಎಂಬ ಪ್ರಶ್ನೆಗೆ ಬಿಜೆಪಿ ಉತ್ತರ ಹುಡುಕುತ್ತಿದೆ. ಆದರೆ ಇನ್ನೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

Criticism Congress, Decision BJP MLAs To Stay Away From Karnataka Assembly Session Without Opposition Leaders
Image Credit to Original Source

ಡಾ.ಆಶ್ವತ್ಥ್ ನಾರಾಯಣ, ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ, ವಿಜಯೇಂದ್ರ ಸೇರಿದಂತೆ ಹಲವು ನಾಯಕರ ಹೆಸರು ಕೇಳಿಬಂದರೂ ಹೈಕಮಾಂಡ್ ಮಾತ್ರ ಯಾವುದಕ್ಕೂ ಅಧಿಕೃತ ಮುದ್ರೆ ಒತ್ತಿಲ್ಲ. ಇನ್ನೇನು ಚಳಿಗಾಲದ ಅಧಿವೇಶನಕ್ಕೆ ಇನ್ನು ಒಂದು ತಿಂಗಳ ಕಾಲ ಉಳಿದಿರುವಾಗ ಬಿಜೆಪಿ ಶಾಸಕರು ಪಕ್ಷದ ಕಚೇರಿಯಲ್ಲಿ ಬಹಿರಂಗವಾಗಿ ಅಸಮಧಾನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ವಾರಕ್ಕೆ 5 ದಿನ ಕೆಲಸ, ವೇತನದಲ್ಲಿ ಶೇ.15ರಷ್ಟು ಹೆಚ್ಚಳ : ನೌಕರರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಈ ಭಾರಿ ವಿಧಾನಸಭೆ ಅಧಿವೇಶನಕ್ಕೂ ಮೊದಲು ವಿರೋಧ ಪಕ್ಷದ ನಾಯಕನ ಆಯ್ಕೆಯಾಗಬೇಕು. ಇಲ್ಲದಿದ್ದರೇ ನಾವೆಲ್ಲ ಸಾಮೂಹಿಕವಾಗಿ ಅಧಿವೇಶನದಿಂದ ದೂರ ಉಳಿಯುತ್ತೇವೆ ಎಂದು ಎಚ್ಚರಿಸಿದ್ದಾರಂತೆ. ಚಳಿಗಾಲದ ಅಧಿವೇಶನ ಬರ್ತಿದೆ. ಈ ಅಧಿವೇಶನಕ್ಕಾದರೂ ನಾಯಕ ನೇಮಕ ಮಾಡಿಸಿ. ವಿರೋಧ ಪಕ್ಷದ ನಾಯಕರಿಲ್ಲದ ಕಾರಣಕ್ಕೆ ಪಕ್ಷಕ್ಕೆ ಆಗ್ತಿರೋ ಡ್ಯಾಮೇಜ್ ಬಗ್ಗೆ ಹೈಕಮಾಂಡ್ ಗೆ ಅರಿವು ಮೂಡಿಸಿ.

ವಿಪಕ್ಷ ನಾಯಕನಿಲ್ಲದೇ ನಾವು ಸದನಕ್ಕೆ ಹೋಗೋದು ಹೇಗೆ? ನಮ್ಮ ನಮ್ಮ ಕ್ಷೇತ್ರದ ಸಮಸ್ಯೆ ತೋಡಿಕೊಳ್ಳೋದು ಹೇಗೆ? ಏನೇ ಮಾತನಾಡಿದರೂ ಕಾಂಗ್ರೆಸ್ ನಾಯಕರು ಮೊದಲು ವಿಪಕ್ಷ ನಾಯಕನ ಆಯ್ಕೆ ಮಾಡಿ ಮೊದಲು ಎಂದು ಲೇವಡಿ ಮಾಡ್ತಾರೆ. ಹೀಗಾಗಿ ದಯವಿಟ್ಟು ರಾಜ್ಯದಲ್ಲಿ ಪಕ್ಷಕ್ಕೆ ಆಗ್ತಿರೋ ಮುಜುಗರ ಹಾಗೂ ನಷ್ಟ ವನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಸಿ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿಎಸ್ವೈ ಅವರಿಗೆ ಮನವಿ ಮಾಡಿದ್ದಾರಂತೆ.

ಇದನ್ನೂ ಓದಿ : ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷೆ, ಯತ್ನಾಳ್‌ ಪ್ರತಿಪಕ್ಷ ನಾಯಕ : ಲಿಂಗಾಯಿತರ ಮುನಿಸು, ಇಬ್ಬಾಗವಾಗುತ್ತಾ ಬಿಜೆಪಿ

Criticism Congress, Decision BJP MLAs To Stay Away From Karnataka Assembly Session Without Opposition Leaders
image Credit to Original Source

ಒಂದೊಮ್ಮೇ ವಿರೋಧ ಪಕ್ಷದ ನಾಯಕನ ಆಯ್ಕೆಯಾಗದೇ ಹೋದಲ್ಲಿ ನಾವು ಸದನಕ್ಕೆ ಹೋಗೋದೇ ಇಲ್ಲ ಎಂದು ಧಮಕಿ ಹಾಕಿದ್ದಾರೆ. ಹೀಗೆ ಅಸಮಧಾನಗೊಂಡಿರೋ ಶಾಸಕರನ್ನು ಬಿಎಸ್ವೈ ಸಮಾಧಾನ ಪಡಿಸಿದ್ದು ಸದ್ಯ ಹೈಕಮಾಂಡ್ ನಾಯಕರು ಪಂಚ ರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಫ್ರೀ ಆಗ್ತಿದ್ದಂತೆ ಪ್ರತಿಪಕ್ಷ ನಾಯಕರ ನೇಮಕವಾಗಲಿದೆ ಎಂಬ ಭರವಸೆ ನೀಡಿದ್ದಾರಂತೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ 2023 : ಕಾಂಗ್ರೆಸ್‌ನಿಂದ ಉಡುಪಿ – ಚಿಕ್ಕಮಗಳೂರಿಗೆ ಜಯಪ್ರಕಾಶ್‌ ಹೆಗ್ಡೆ, ದಕ್ಷಿಣ ಕನ್ನಡಕ್ಕೆ ಹರೀಶ್‌ ಕುಮಾರ್‌ ಕಣಕ್ಕೆ ?

ಚುನಾವಣೆ ಸೋಲಿನ ಬಳಿಕ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿಯನ್ನು ನಿರ್ಲಕ್ಷಿಸಿದೇ ಎಂಬ ಮಾತು ಕೇಳಿಬಂದಿದೆ. ಈಗ ರಾಜ್ಯಾಧ್ಯಕ್ಷರ ಆಯ್ಕೆ ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆಯಲ್ಲಿನ ವಿಳಂಬ ನೀತಿ ಈ ಮಾತಿಗೆ ಪುಷ್ಠಿ ನೀಡಿದೆ. ಹೀಗಾಗಿ ರಾಜ್ಯ ಬಿಜೆಪಿ ಶಾಸಕರು ಒಳಗೊಳಗೆ ಅಸಮಧಾನಗೊಂಡಿದ್ದು, ಮುಜುಗರ ಎದುರಿಸಲಾಗದೇ ಬೇಸರಿಸಿಕೊಳ್ಳುತ್ತಿದ್ದಾರೆ.

ಬಿಎಸ್ವೈ ಬರ ಅಧ್ಯಯನ ಪ್ರವಾಸದ ನೆಪದಲ್ಲಿ ಹೀಗೆ ಅಸಮಧಾನಿತ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಕಾಪಾಡಿಕೊಂಡು ಹೋಗ್ತಿದ್ದು, ರಾಜ್ಯ ಬಿಜೆಪಿ ಸಂಪೂರ್ಣವಾಗಿ ರಾಜ್ಯ ರಾಜಕೀಯದ ಮೇಲೆ ಹಿಡಿತ ಕಳೆದುಕೊಳ್ಳುವ ಮುನ್ನ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕಿದೆ.

Criticism Congress, Decision BJP MLAs To Stay Away From Karnataka Assembly Session Without Opposition Leaders

Comments are closed.