Boy suicide case: ಮಹಿಳೆಯರ ಒಳಉಡುಪು ಧರಿಸಿದ್ದ ಬಾಲಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಪಶ್ಚಿಮ ಬಂಗಾಳ: (Boy suicide case) 10 ನೇ ತರಗತಿಯ ವಿದ್ಯಾರ್ಥಿಯೋರ್ವ ಸೀರೆ, ಬಿಂದಿ ಹಾಗೂ ಮಹಿಳಾ ಉಡುಪು ಧರಿಸಿ ತನ್ನ ಮನೆಯ ಸೀಲಿಂಗ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಮೃತ ಬಾಲಕ ಸೀರೆ, ಬಿಂದಿ, ಬಳೆಗಳು ಮತ್ತು ಮಹಿಳೆಯರ ಒಳಉಡುಪುಗಳನ್ನು ಧರಿಸಿದ್ದನು ಎಂದು ವರದಿಯಾಗಿದೆ. ಮೃತ ಬಾಲಕನನ್ನು ಸಿಲಿಗುರಿ ಬರದಕಾಂತ ವಿದ್ಯಾಪೀಠದ 10ನೇ ತರಗತಿ ವಿದ್ಯಾರ್ಥಿ ದೀಪೇಶ್ ಮಂಡಲ್ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ ದೀಪೇಶ್‌ ಮನೆಯಲ್ಲಿ ಒಬ್ಬನೆ ಇದ್ದನು ಹಾಗೂ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದನು ಎನ್ನಲಾಗಿದೆ. ಕುಟುಂಬಸ್ಥರು ಮನೆಗೆ ಬಂದಾಗ ಟಿವಿ ಆನ್‌ ಆಗಿತ್ತು ಹಾಗೂ ಮನೆಯ ಒಳಗಿನಿಂದ ಬಾಗಿಲು ಲಾಕ್‌ ಆಗಿತ್ತು ಎನ್ನಲಾಗಿದೆ. ಬಾಗಿಲು ಒಡೆದು ಒಳಗೆ ನೋಡಿದಾಗ ಬಾಲಕ ನೇಣು (Boy suicide case) ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಕುಟುಂಬ ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಕೆಲವು ವರ್ಷಗಳ ಹಿಂದೆ ದೀಪೇಶ್ ನ ಹಿರಿಯ ಸಹೋದರ ಸಹ ಅಸಹಜ ಸಾವಿಗೀಡಾಗಿದ್ದರು. ವರದಿಯ ಪ್ರಕಾರ, ದೀಪೇಶ್ ಗೆ ಅಧ್ಯಯನಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಲ್ಲ ಮತ್ತು ಸ್ವಭಾವದಲ್ಲೂ ಕೂಡ ಒಳ್ಳೆಯವರಾಗಿದ್ದರು. ನೆರೆಹೊರೆಯವರು ಕೂಡ ಆ ಹುಡುಗ ಸಭ್ಯನಾಗಿದ್ದು ಯಾವತ್ತೂ ಕುಡಿತ ಅಥವಾ ಇತರ ನಶೆಯಲ್ಲಿ ತೊಡಗಿಲ್ಲ ಎಂದು ಹೇಳಿದರು. ಬಾಲಕ ಸ್ತ್ರೀಲಿಂಗಿ ಎಂದು ತಿಳಿದಿರಲಿಲ್ಲ, ಅಂತಹ ಆಸಕ್ತಿಯನ್ನು ಆತ ತೋರಿಸಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೀಗ ಪೊಲೀಸರು ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ಸಾವಿನ ಕಾರಣವನ್ನು ತಿಳಿಯಲು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕೆಲವು ತಿಂಗಳ ಹಿಂದೆ ಸಿಲಿಗುರಿಯ ಟಿಕಿಯಾಪಾರಾ ಪ್ರದೇಶದಲ್ಲಿ ಯುವಕನೊಬ್ಬ ಮಹಿಳೆಯ ಬಟ್ಟೆ ಧರಿಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣ ವರದಿಯಾಗಿತ್ತು. ಈ ಪ್ರಕರಣವೂ ಅದೇ ಪ್ರಕರಣವನ್ನು ಹೋಲುವಂತಿದೆ.

ಇದನ್ನೂ ಓದಿ : attack on ayyappa devotees: ಕೇರಳದಲ್ಲಿ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ

ಇದನ್ನೂ ಓದಿ : Crime report: ತಂದೆಯನ್ನು ಕೊಂದು 30 ತುಂಡುಗಳನ್ನಾಗಿ ಮಾಡಿ ಬೋರ್‌ ವೆಲ್‌ ಗೆ ಎಸೆದ ಮಗ

(Boy suicide case) A 10th class student was found hanging from the ceiling of his house wearing a saree, bindi and women’s clothing in Siliguri, West Bengal. The deceased boy was reportedly wearing a saree, bindi, bangles and women’s underwear. The deceased boy has been identified as Dipesh Mandal, a class 10 student of Siliguri’s Baradakanta Vidyapeeth.

Comments are closed.