ಅಕ್ಟೋಬರ್‌ನಲ್ಲಿ 18 ದಿನ ಬ್ಯಾಂಕ್ ರಜೆ : ಬ್ಯಾಂಕ್‌ ಕೆಲಸವನ್ನು ಶೀಘ್ರವಾಗಿ ಮುಗಿಸಿ

ಅಕ್ಟೋಬರ್ 2023 (Bank Holidays) ನವರಾತ್ರಿ (Navratri 2023), ದಸರಾ ಸಂಭ್ರಮ. ಈ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳಿವೆ. ಆದರೆ ಕೆಲವು ರಜೆಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ. ಕರ್ನಾಟಕದಲ್ಲಿ 10 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿವೆ.

ಅಕ್ಟೋಬರ್ 2023 (Bank Holidays) ನವರಾತ್ರಿ (Navratri 2023), ದಸರಾ ಸಂಭ್ರಮ. ಈ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳಿವೆ. ಆದರೆ ಕೆಲವು ರಜೆಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ.  ಅಕ್ಟೋಬರ್‌ ತಿಂಗಳು ಆರಂಭವಾದ್ರೆ ಸಾಕು ಸಾಲು ಸಾಲು ರಜೆ. ಇದೀಗ ಬ್ಯಾಂಕುಗಳಿಗೆ ಅರ್ಧ ತಿಂಗಳಿಗೂ ಅಧಿಕ ಕಾಲ ರಜೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗಾಗಲೇ ಪ್ರಕಟಿಸಿರುವ ಬ್ಯಾಂಕ್ ರಜೆ ಪಟ್ಟಿಯ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ 18 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.

ಬ್ಯಾಂಕುಗಳ ರಜೆಯ ದಿನಗಳು ಪ್ರಾದೇಶಿಕವಾಗಿ ಬದಲಾಗುತ್ತಲೇ ಇರುತ್ತದೆ. ಸಾರ್ವತ್ರಿಕವಾಗಿ ಅನ್ವಯವಾಗುವ ರಜೆ ಮತ್ತು ಪ್ರಾದೇಶಿಕವಾಗಿ ಅನ್ವಯ ವಾಗುವ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಹಾಗೂ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ.

Bank Holidays 2023 18 days Bank Holidays finish Your Work Today
Image credit to Original Source

ಅಕ್ಟೋಬರ್ ಮೊದಲ ದಿನ ಬ್ಯಾಂಕ್ ರಜೆ. ಏಕೆಂದರೆ ಈ ಬಾರಿಯ ಅಕ್ಟೋಬರ್‌ ಮೊದಲ ದಿನ ಭಾನುವಾರ (ಅಕ್ಟೋಬರ್ 1)ದಿಂದ ಆರಂಭವಾಗುತ್ತದೆ. ಮರುದಿನ ಗಾಂಧಿ ಜಯಂತಿ (ಅಕ್ಟೋಬರ್ 2). ಆದ್ದರಿಂದ, ಈ ಎರಡು ದಿನಗಳಲ್ಲಿ, ಇಡೀ ದೇಶದಲ್ಲಿ ಸಾಮಾನ್ಯವಾಗಿ ಬ್ಯಾಂಕ್ ವಹಿವಾಟುಗಳನ್ನು ನಡೆಸಲಾಗುವುದಿಲ್ಲ. ಹೈದರಾಬಾದ್ ಮತ್ತು ಇಂಫಾಲ್ ಹೊರತುಪಡಿಸಿ ಅಕ್ಟೋಬರ್ 24 ರಂದು ದಸರಾದ ಕಾರಣ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ : ಗೃಹ ಸಾಲ ಪಡೆದವರಿಗೆ ಗುಡ್‌ನ್ಯೂಸ್ : ಆರ್‌ಬಿಐ ಹೊಸ ರೂಲ್ಸ್‌, 50 ಲಕ್ಷರೂ. ಗೃಹ ಸಾಲಕ್ಕೆ33 ಲಕ್ಷ ರೂ. ಬಡ್ಡಿ ಉಳಿತಾಯ

ಅಕ್ಟೋಬರ್ 2 – ಮಹಾತ್ಮ ಗಾಂಧಿ ಜಯಂತಿ (Mahatma Gandhi Jayanti)  – ಎಲ್ಲಾ ಬ್ಯಾಂಕ್‌ಗಳಿಗೆ ರಜೆ

ಅಕ್ಟೋಬರ್ 14 – ಮಹಾಲಯ (Mahalaya) -ಕೋಲ್ಕತ್ತಾದಲ್ಲಿ ಬ್ಯಾಂಕ್ ರಜೆ

ಅಕ್ಟೋಬರ್ 18 – ಕತಿ ಬಿಹು (Kathi Bihu) -ಗುವಾಹಟಿ, ಇಂಫಾಲ್, ಕೋಲ್ಕತ್ತಾದಲ್ಲಿ ಬ್ಯಾಂಕ್‌ಗಳಿಗೆ ರಜೆ

ಅಕ್ಟೋಬರ್ 21 – ದುರ್ಗಾ ಪೂಜೆ (Durga Puja )- ಅಗರ್ತಲಾ, ಗುವಾಹಟಿ, ಇಂಫಾಲ್, ಕೋಲ್ಕತ್ತಾದಲ್ಲಿ ಬ್ಯಾಂಕ್ ರಜೆ

ಅಕ್ಟೋಬರ್ 23 – ದಸರಾ, ಆಯುಧ ಪೂಜೆ, ದುರ್ಗಾ ಪೂಜೆ, ವಿಜಯ ದಶಮಿ ( Dasara, Ayudha Puja, Durga Puja, Vijaya Dashami) – ಬೆಂಗಳೂರು, ಭುವನೇಶ್ವರ, ಚೆನ್ನೈ, ಗುವಾಹಟಿ, ಹೈದರಾಬಾದ್, ಕಾನ್ಪುರ್, ಕೊಚ್ಚಿ, ಕೊಹಿಮಾ, ಕೋಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಶಿಲ್ಲಾಂಗ್, ತಿರುವನಂತಪುರಂ ನಲ್ಲಿ ಬ್ಯಾಂಕ್ ರಜೆ

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಅಕ್ಟೋಬರ್ 24 – ದಸರಾ/ದುರ್ಗಾ ಪೂಜೆ (Dussehra/Durga Puja) – ಹೈದರಾಬಾದ್, ಇಂಫಾಲ್ ಹೊರತುಪಡಿಸಿ ಭಾರತದಾದ್ಯಂತ ಬ್ಯಾಂಕ್ ರಜೆ

ಅಕ್ಟೋಬರ್ 25 – ದುರ್ಗಾ ಪೂಜೆ (ಗ್ಯಾಂಗ್ಟಾಕ್ನಲ್ಲಿ ಬ್ಯಾಂಕ್ ರಜೆ)

ಅಕ್ಟೋಬರ್ 26 – ದುರ್ಗಾ ಪೂಜೆ (ಗ್ಯಾಂಗ್ಟಾಕ್, ಜಮ್ಮು, ಶ್ರೀನಗರದಲ್ಲಿ ಬ್ಯಾಂಕ್ ರಜೆ)

ಅಕ್ಟೋಬರ್ 27 – ದುರ್ಗಾ ಪೂಜೆ (ಗ್ಯಾಂಗ್ಟಾಕ್ನಲ್ಲಿ ಬ್ಯಾಂಕ್ ರಜೆ)

ಅಕ್ಟೋಬರ್ 28 – ದುರ್ಗಾ ಪೂಜೆ (ಗ್ಯಾಂಗ್ಟಾಕ್ನಲ್ಲಿ ಬ್ಯಾಂಕ್ ರಜೆ)

ಅಕ್ಟೋಬರ್ 31 – ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ, ಅಹಮದಾಬಾದ್‌ನಲ್ಲಿ ಬ್ಯಾಂಕ್ ರಜೆ
ಅಕ್ಟೋಬರ್‌ನಲ್ಲಿ ಹನ್ನೊಂದು ರಜಾದಿನಗಳನ್ನು ಹೊರತುಪಡಿಸಿ, ಏಳು ವಾರಾಂತ್ಯದ ರಜಾದಿನಗಳಿವೆ.

Bank Holidays 2023 18 days Bank Holidays finish Your Work Today
Image Credit to Original Source

ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್‌ಗಳಿಗೆ ರಜೆ !

ಅಕ್ಟೋಬರ್ 2023 ರ ಬ್ಯಾಂಕ್ ಹಾಲಿಡೇ ಪಟ್ಟಿ, ವಾರಾಂತ್ಯದ ರಜೆಯ ವಿವರಗಳು ಇಲ್ಲಿವೆ:

ಅಕ್ಟೋಬರ್ 1 – ಭಾನುವಾರ

ಅಕ್ಟೋಬರ್ 8 – ಭಾನುವಾರ

ಅಕ್ಟೋಬರ್ 14 – ಎರಡನೇ ಶನಿವಾರ

ಅಕ್ಟೋಬರ್ 15 – ಭಾನುವಾರ

ಅಕ್ಟೋಬರ್ 22 – ಭಾನುವಾರ

ಅಕ್ಟೋಬರ್ 28 – ನಾಲ್ಕನೇ ಶನಿವಾರ

ಅಕ್ಟೋಬರ್ 29 – ಭಾನುವಾರ

ಕರ್ನಾಟಕದ ಬ್ಯಾಂಕ್‌ಗಳಿಗೆ ಅಕ್ಟೋಬರ್‌ನಲ್ಲಿ 10 ದಿನಗಳ ರಜೆ :

ಅಕ್ಟೋಬರ್ ತಿಂಗಳು ಹಬ್ಬ ಹರಿದಿನಗಳಿಂದ ತುಂಬಿರುತ್ತದೆ. ದೇಶದ ಹಲವು ರಾಜ್ಯಗಳಲ್ಲಿನ ರಜಾ ದಿನಗಳನ್ನು ಲೆಕ್ಕಾ ಹಾಕಿದ್ರೆ ಸುಮಾರು 18 ದಿನಗಳ ಕಾಲ ರಜೆ ಇರುತ್ತದೆ. ಆದರೆ ಕರ್ನಾಟಕದ ಮಟ್ಟಿಗೆ ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗಳಿಗೆ 10 ದಿನಗಳ ಕಾಲ ರಜೆ ಇರುತ್ತದೆ. ಐದು ಭಾನುವಾರ, ಎರಡು ಶನಿವಾರ ಹಾಗೂ ಗಾಂಧಿ ಜಯಂತಿ, ಮಹಾನವಮಿ, ವಿಜಯ ದಶಮಿ ಸೇರಿ ಒಟ್ಟು ಹತ್ತು ದಿನ ರಜೆ ಸಿಗಲಿದೆ.

Bank Holidays 2023 18 days Bank Holidays finish Your Work Today

Comments are closed.