5G internet in Bengaluru : ಬೆಂಗಳೂರಲ್ಲಿ 5ಜಿ ಇಂಟರ್‌ನೆಟ್ ಸೇವೆ ಆರಂಭವಾಗುವುದು ಯಾವಾಗ?

ಭಾರತದಲ್ಲಿ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಬಹು ನಿರೀಕ್ಷಿತ 5G ಸೇವೆ (5G internet in Bengaluru) ದೊರೆಯುವ ದಿನಗಳು ದೂರವಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಅತ್ಯಂತ ವೇಗ ಮತ್ತು ತ್ವರಿತವಾಗಿ ಇಂಟರ್‌ನೆಟ್ ಒದಗಿಸುವ ಸಲುವಾಗಿ 5ಜಿ ಇಂಟರ್‌ನೆಟ್ ಸೇವೆಯಲ್ಲಿ ತರಲು ಸರ್ಕಾರವೂ ಯತ್ನಿಸುತ್ತಿದೆ ಎನ್ನಲಾಗಿದೆ. ಈಕುರಿತ ಅಪ್‌ಡೇಟ್ಏನೆಂದರೆ 2022 ನೇ ಇಸವಿಯಲ್ಲಿ ಭಾರತದಲ್ಲಿ ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 5G ಇಂಟರ್ ನೆಟ್ ಸೇವೆಯನ್ನು 2022ರಲ್ಲಿ ಒದಗಿಸಲಾಗುವುದು ಎಂದು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆ ಘೋಷಣೆ ಮಾಡಿದೆ. ಈ ಮೂಲಕ ಇಂಟರ್ ನೆಟ್ ನಲ್ಲಿ ಮತ್ತಷ್ಟು ಸ್ಪೀಡ್ (5G Speed in India) ಸಿಗಲಿದ್ದು, ಗ್ರಾಹಕರಿಗೆ ಬಹುಪಯೋಗಿಯಾಗಲಿದೆ.

ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ 13 ನಗರಗಳಲ್ಲಿ ಮೊದಲಿಗೆ 5 ಜಿ ಇಂಟರ್ ನೆಟ್ ದೊರೆಯಲಿದೆ. ದೆಹಲಿ, ಮುಂಬೈ, ಅಹಮದಾಬಾದ್, ಚಂಡಿಗಢ್, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್ನಾಗರ, ಕೊಲ್ಕತ್ತಾ, ಲಕ್ನೋ ಹಾಗೂ ಪುಣೆ ನಗರದಲ್ಲಿ ಆರಂಭಿಕ ಹಂತದಲ್ಲಿ 5 ಜಿ ಇಂಟರ್ ನೆಂಟ್ ಸೇವೆ ದೊರೆಯಲಿದೆ ಎಂದು ದೂರ ಸಂಪರ್ಕ ಇಲಾಖೆ ತಿಳಿಸಿದೆ.

ಭಾರತದಲ್ಲಿ ಪ್ರಮುಖವಾಗಿ ಏರ್‌ಟೆಲ್, ಜಿಯೋ ಹಾಗೂ ವಡಾಫೋನ್ ಕಂಪನಿಗಳು ಹೆಚ್ಚು ಗ್ರಾಹಕರನ್ನು ಹೊಂದಿದೆ. ಆದರೆ ಯಾವ ಕಂಪನಿ ಮೊದಲಿಗೆ 5 ಜಿ ಇಂಟರ್ ನೆಟ್ ಸೇವೆ ನೀಡುತ್ತದೆ ಎಂದು ಕಾದು ನೋಡಬೇಕಿದೆ. 5G ಸೇವೆಗಳ ಆರಂಭಿಸಲು ಕುರಿತು ಟೆಲಿಕಾಂ ಸೇವಾ ಪೂರೈಕೆದಾರರು ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು M/s ವೊಡಾಫೋನ್ ಐಡಿಯಾ ಕಂಪನಿಗಳು ಗುರುಗ್ರಾಮ್, ಬೆಂಗಳೂರು, ಕೋಲ್ಕತ್ತಾ, ಮುಂಬೈ, ಚಂಡೀಗಢದಲ್ಲಿ 5G ಟ್ರಯಲ್ಸ್ ಸೈಟ್‌ಗಳನ್ನು ಸ್ಥಾಪಿಸಿವೆ. ಭಾರತದಲ್ಲಿ ಇನ್ನೂ 5ಜಿ ದೂರಸಂಪರ್ಕ ಸೇವೆಗಳು ಆರಂಭವಾಗಿಲ್ಲ. ಆದರೆ ಈ ಅತ್ಯಂತ ವೇಗದ ಇಂಟರ್‌ನೆಟ್ ಒದಗಿಸುವ ಸೇವೆ ಆರಂಭವಾದಲ್ಲಿ ಶುರುವಿನ ವರ್ಷದಲ್ಲೇ ಕನಿಷ್ಠ ಅಂದರೂ 4 ಕೋಟಿ ಜನರು ಸಂಪರ್ಕ ಪಡೆಯಲಿದ್ದಾರೆಂದು ವರದಿಯೊಂದು ಮಾಹಿತಿ ತಿಳಿಸಿದೆ.

ಟೆಲಿಕಾಂ ಕಂಪೆನಿಗಳು 5ಜಿ ತಂತ್ರಜ್ಞಾನ‌‌ ಸೇವೆ ನೀಡಲು ತುದಿಗಾಲಲ್ಲಿ ನಿಂತಿವೆ. ಆದರೆ ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ 5ಜಿ ವಿರುದ್ದ ಹೈಕೋರ್ಟ್ ಕದ ತಟ್ಟಿದ್ದಾರೆ. ನೂತನ ತಂತ್ರಜ್ಞಾನ ಜಾರಿಗೆ ಬರಬಾರದು ಅಂತಾ ನ್ಯಾಯಾಲಯವನ್ನು ವಿನಂತಿಸಿದ್ದರು. ಆದರೆ ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ ಅವರ ಮನವಿಯನ್ನು ಕೋರ್ಟ್ ತಲ್ಳಿಹಾಕಿತ್ತು.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(5G Internet in Bengaluru 13 Indian Cities Will Get Pilot 5G Connectivity In 2022)

Comments are closed.