Omicron variant symptoms : ಈ ಲಕ್ಷಣಗಳಿದ್ದರೆ ಓಮಿಕ್ರಾನ್ ಸೋಂಕು ತಗುಲಿರಬಹುದು ಎಚ್ಚರ; ಓಮಿಕ್ರಾನ್ ಬಂದರೆ ದೇಹದಲ್ಲಿ ಆಗುವ ಬದಲಾವಣೆಗಳಿವು

ಕೊವಿಡ್‌ನ ಹೊಸ ರೂಪಾಂತರಿ ತಳಿ (Covid 19 Variants Omicron) ಇದೀಗ ಭಾರಿ ಆತಂಕ ಹುಟ್ಟುಹಾಕಿತ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ನಿಧಾನವಾಗಿ ಓಮಿಕ್ರಾನ್ ಸೋಂಕು ಜನರಲ್ಲಿ ಪತ್ತೆಯಾಗುತ್ತಿರುವುದು ಆಡಳಿತಗಳಿಗೂ ತಲೆನೋವಾಗಿ ಪರಿಣಮಿಸಿದೆ. ಇಷ್ಟೆಲ್ಲ ಓಮಿಕ್ರಾನ್ ಗಲಾಟೆ ಆಗುತ್ತಿರುವುದರಿಂದ ಓಮಿಕ್ರಾನ್ ಕುರಿತು ಸರಿಯಾಗಿ ತಿಳಿದುಕೊಳ್ಳಲು ಇದು ಸರಿಯಾದ ಸಮಯವಾಗಿದೆ.  ಹಾಗಾದರೆ ಓಮಿಕ್ರಾನ್ ಬಂದರೆ ಏನಾಗುತ್ತದೆ? ಓಮಿಕ್ರಾನ್ ತಗುಲಿದೆಯೇ ಎಂದು ತಿಳಿದು ಕೊಳ್ಳುವುದು ಹೇಗೆ? (Omicron variant symptoms) ಬಂದಿರುವುದು ಒಮಿಕ್ರಾನ್ ಹೋದೋ ಅಲ್ಲವೊ ಎಂದು ಹೇಗೆ ಪತ್ತೆ ಮಾಡುವುದು ಎಂದು ತಿಳಿದುಕೊಳ್ಳಲು ಈ ಸ್ಟೋರಿಯನ್ನು ತಪ್ಪದೇ ಓದಿ.

ಓಮಿಕ್ರಾನ್‌ನ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಸುಸ್ತು, ರುಚಿ ಅಥವಾ ವಾಸನೆಯ ನಷ್ಟ. ಅಂದರೆ ಯಾವುದೇ ವಸ್ತು, ತಿಂಡಿಯ ವಾಸನೆಯನ್ನು ಬರದಿರುವುದು.

ಕೆಮ್ಮು: ಸಹಜವಾಗಿ ದೇಹದಲ್ಲಿ ಕಫ ಸಂಗ್ರಹಗೊಂಡಾಗ ಕೆಮ್ಮು ಕಾಣಿಸಿಕೊಳ್ಳುತ್ತದೆ. ಆದರೆ ಸದ್ಯ ಕಫದಿಂದ ಬಳಲುತ್ತಿರುವವರನ್ನು ಪರೀಕ್ಷೆಯಲ್ಲಿ ಅಂತವರಿಗೆ ಕೊವಿಡ್ ರೂಪಾಂತರಿ ಓಮಿಕ್ರಾನ್​ ಸೋಂಕು ಇರುವುದು ದೃಢಪಟ್ಟಿದೆ. ಆದ್ದರಿಂದ ಕೆಮ್ಮು ಓಮಿಕ್ರಾನಿನ ಮೊದಲ ಲಕ್ಷಣವಾಗಿದೆ ಎಂದುರ ವರದಿಗಳು ತಿಳಿಸಿವೆ. ನಿಮಗೆ 2 ದಿನಗಳಿಗಿಂತ ಹೆಚ್ಚು ಕಾಲ ಕೆಮ್ಮು ಮುಂದುವರೆದಲ್ಲಿ ಕೂಡಲೇ ತಡ ಮಾಡದೇ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎಂದು ಪರಿಣಿತರು ತಿಳಿಸಿದ್ದಾರೆ.

ಆಯಾಸ: ಓಮಿಕ್ರಾನ್ ಸೋಂಕು ಅತಿಯಾದ ಆಲಸ್ಯಕ್ಕೆ ಕಾರಣವಾಗಬಹುದು. ನೀವು ಶೀತ, ಕೆಮ್ಮು ಮತ್ತು ಆಯಾಸದಂತಹ ರೋಗಲಕ್ಷಣಗಳನ್ನು ಹೊಂದಿದ್ದರೆ ದಯವಿಟ್ಟು ಈಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗಿ. ಪದೇಪದೇ ಆಯಾಸವಾಗುವುದು, ಅತಿಯಾದ ಕೆಲಸ ಮಾಡದೆಯೂ ಸುಸ್ತು ಕಾಣಿಸಿಕೊಳ್ಳುವುದು ಸಹ ಕೊವಿಡ್ ರೂಪಾಂತರಿ ಓಮಿಕ್ರಾನ್‌ನ ಲಕ್ಷಣ ಆಗಿರಬಹುದು ಎನ್ನುತ್ತಾರೆ ವೈದ್ಯರು.

ಸ್ನಾಯು ನೋವು: ಒಂದಾನುವೇಳೇ ನೀವು ಸ್ನಾಯು ನೋವಿನಿಂದ ಬಳಲುತ್ತಿದ್ದರೆ ಅದು ಸಹ ಓಮಿಕ್ರಾನ್‌ನ ಲಕ್ಷಣವಾಗಿರಬಹುದು. COVID-19 ಪರೀಕ್ಷೆ ಮಾಡಿಸಿದ 58% ಜನರು ಈ ರೋಗಲಕ್ಷಣವನ್ನು ವರದಿ ಮಾಡಿದ್ದಾರೆ.

ಜ್ವರ: ಶೀತದ ಭಾವನೆ ಮತ್ತು ಜ್ವರವು ಹೊಸ ಕೊವಿಡ್ ರೂಪಾಂತರಿ ಓಮಿಕ್ರಾನ್ ಸೋಂಕಿನ ಮತ್ತೊಂದು ಸಾಮಾನ್ಯ ಲಕ್ಷಣವಾಗಿದೆ.

ಗಂಟಲು ನೋವು: ಆಗಾಗ ಬದಲಾಗುತ್ತಿರುವ ಹವಾಮಾನ ಗಂಟಲಿನ ನೋವಿಗೆ ಕಾರಣವಾಗಿರಬಹುದು. ಆದರೆ ಇದು ಸಹ ಓಮಿಕ್ರಾನ್ ರೂಪಾಂತರದ ಸಾಮಾನ್ಯ ಲಕ್ಷಣವಾಗಿದೆ.

ಸ್ರವಿಸುವ ಮೂಗು: ಉಸಿರುಕಟ್ಟಿಕೊಳ್ಳುವ ಅಥವಾ ಮೂಗಿನಲ್ಲಿ ಸ್ರವಿಕೆ ಕಂಡುಬರುವುದು ಓಮಿಕ್ರಾನ್‌ನ ಮತ್ತೊಂದು ಸಾಮಾನ್ಯ ಲಕ್ಷಣವಾಗಿದೆ. ಮೂಗಿನಲ್ಲಿ ಸ್ರಾವ, ತಲೆನೋವು ಮತ್ತು ದಣಿವಿನಂತಹ ಶೀತ ಕಂಡುಬಂದಲ್ಲಿ ಕೋವಿಡ್‌ನ ಓಮಿಕ್ರಾನ್ ರೂಪಾಂತರ ತಗುಲಿರುವ ಸಾಧ್ಯತೆಯೂ ಇದೆ.

ಈ ವರದಿಯನ್ನು ಸಾರ್ವಜನಿಕ ಜಾಗೃತಿಗೋಸ್ಕರ ಪ್ರಕಟಿಸಲಾಗಿದೆ. ಸಾರ್ವಜನಿಕರು ಪರಿಣಿತ ವೈದ್ಯರ ಮಾರ್ಗದರ್ಶನದ ಮೂಲಕವೇ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಬೇಕು.

ಇದನ್ನೂ ಓದಿ: Agrifi App Farmers Loan : ಕೃಷಿ ವ್ಯಾಪಾರಸ್ಥರಿಗೆ ಸಾಲ ಒದಗಿಸಲಿದೆ ‘ಅಗ್ರಿ ಫೈ’ ಆ್ಯಪ್; ಸಾಲ ಪಡೆಯಲು ಏನು ಮಾಡಬೇಕು?

(Omicron variant symptoms in Kannada you havent heard about yet)

Comments are closed.