Air Pollution: ಗೂಗಲ್‌ ಮ್ಯಾಪ್ಸ್‌ ಬಳಸಿ ನೀವು ವಾಸಿಸುವ ಪ್ರದೇಶದ ಗಾಳಿಯ ಗುಣಮಟ್ಟ ಪರೀಕ್ಷಿಸುವುದು ಹೇಗೆ ಗೊತ್ತಾ…

ವಾಯುಮಾಲಿನ್ಯ (Air Pollution) ದಿನೇ ದಿನೇ ಹೆಚ್ಚುತ್ತಿದೆ. ಇದು ಹವಾಮಾನದ ಬದಲಾವಣೆಗೂ ಕಾರಣವಾಗಿದೆ. ಜೊತೆಗೆ ಮಾನವನ ಆರೋಗ್ಯಕ್ಕೂ (Human Health) ಅಪಾಯವನ್ನು ತರುತ್ತಿದೆ. ವಾಹನಗಳಿಂದ ಹೊರಬರುವ ಹೊಗೆ, ಹಬ್ಬಗಳಲ್ಲಿ ಸಿಡಿಸುವ ಪಟಾಕಿಗಳು, ಮತ್ತು ಬೆಳೆ ಕೊಯ್ಲು ಗಾಳಿಯ ಗುಣಮಟ್ಟವನ್ನು (Air Quality) ಹದಗೆಡಿಸುವ ಕೆಲವು ಅಂಶಗಳಾಗಿವೆ. ದೀಪಾವಳಿಯ ನಂತರ ವಾಯುಮಾಲಿನ್ಯ ಹೆಚ್ಚಾಗಿದೆ ಎನ್ನವ ಮಾತು ಎಲ್ಲಡೆ ಕೇಳಿ ಬರುತ್ತಿದೆ. ಮನುಷ್ಯನಿಗೆ ಆಮ್ಲಜನಕ ಅತಿ ಮುಖ್ಯ. ಕೆಟ್ಟ ಅಥವಾ ಮಾಲಿನ್ಯಪೂರಿತ ಗಾಳಿ ಸೇವನೆಯು ಪ್ರತಿಯೊಬ್ಬರ ಆರೋಗ್ಯದ ಮೇಲೂ ಅಪಾಯವನ್ನು ಉಂಟು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಹೃದಯ ಮತ್ತು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದರಿಂದ ತೊಂದರೆ ಅಧಿಕ. ಹಾಗೆಯೇ ಆಸ್ತಮಾ ಇರುವವರಿಗೆ ಇದು ಬಹಳ ತೊಂದರೆಯನ್ನುಂಟು ಮಾಡುತ್ತದೆ. ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಜನರಿಗೆ ಮನೆಯಿಂದ ಹೊರ ಹೋಗದಂತ ಸಲಹೆ ನೀಡಲಾಗುತ್ತದೆ. ಗಾಳಿಯ ಗುಣಮಟ್ಟವನ್ನು ಪರೀಕ್ಷಿಸುವ ವೈಶಿಷ್ಟ್ಯವನ್ನು ಗೂಗಲ್‌ ಮ್ಯಾಪ್‌ (Google Maps) ಹೊಂದಿದೆ. ಅದರ ಸಹಾಯದಿಂದ ನೀವು ವಾಸಿಸವು ಅಥವಾ ಪ್ರಯಾಣಿಸುವ ಪ್ರದೇಶದ ವಾಯುವಿನ ಗುಣಮಟ್ಟವನ್ನು ಪರಿಶೀಲಿಸಬಹುದಾಗಿದೆ.

ಗೂಗಲ್, ಏರ್ ಕ್ವಾಲಿಟಿ ಟ್ರ್ಯಾಕರ್ (AQI) ವೈಶಿಷ್ಟ್ಯವನ್ನು ಹೊಂದಿದೆ. ಅದು ಸ್ಥಳದ ಪ್ರಸ್ತುತ ಗಾಳಿಯ ಗುಣಮಟ್ಟ ಸೂಚ್ಯಂಕವನ್ನು ನಿಮಗೆ ತಿಳಿಸುತ್ತದೆ. ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವನ್ನು ಪರಿಶೀಲಿಸಲು ಗೂಗಲ್‌ ಮ್ಯಾಪ್‌ ಬಳಸಬಹುದಾಗಿದೆ. ಗೂಗಲ್‌ ಮ್ಯಾಪ್‌ ಲೊಕೇಷನ್ ಟ್ರ್ಯಾಕ್‌ ಮಾಡಲು ಮಾತ್ರ ಸೀಮಿತವಾಗಿಲ್ಲ, ಗಾಳಿಯ ಗುಣಮಟ್ಟವನ್ನು ಹೇಳುತ್ತದೆ. ಯಾವ ಪ್ರದೇಶದ ಗಾಳಿ ಎಷ್ಟು ಮಲಿನವಾಗಿದೆ ಎಂದು ಸೂಚ್ಯಂಕಗಳ ಮೂಲಕ ತಿಳಿಸುತ್ತದೆ. ಇದರಿಂದ ನೀವು ಭೇಟಿ ನೀಡಲು ಬಯಸುವ ಯಾವುದೇ ಸ್ಥಳ ಅಥವಾ ನೀವು ವಾಸಿಸುವ ಸ್ಥಳದ ಗಾಳಿಯ ಗುಣಮಟ್ಟವನ್ನು ಅರಿಯಬಹುದಾಗಿದೆ.

ಇದನ್ನೂ ಓದಿ : Masala Papad: ಟೀ ಟೈಮ್‌ಗೆ ಬೆಸ್ಟ್‌ ಗರಿಗರಿಯಾದ ಮಸಾಲಾ ಪಾಪಡ್‌

ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡೂ ಸಾಧನಗಳಲ್ಲಿ ಗಾಳಿಯ ಗುಣಮಟ್ಟದ ಪರಿಸ್ಥಿತಿಗಳನ್ನು ಪರಿಶೀಲಿಸಲು ಗೂಗಲ್‌ ಮ್ಯಾಪ್‌ ಅನುವುಮಾಡಿಕೊಡುತ್ತದೆ. ಇದರಿಂದ ನೀವು ಮನೆಯಿಂದ ಹೊರಗೆ ಹೋಗುವುದು ಸುರಕ್ಷಿತವೇ ಅಥವಾ ಅಲ್ಲವೇ ಎಂಬುದನ್ನು ತಿಳಿಯಲು ನಿಮಗೆ ಸಾಧ್ಯವಾಗುತ್ತದೆ.

ಗೂಗಲ್ ಮ್ಯಾಪ್‌ನಲ್ಲಿ ಗಾಳಿಯ ಗುಣಮಟ್ಟವನ್ನು ಪರಿಶೀಲಿಸಲು ಹೀಗೆ ಮಾಡಿ :

  • ಮೊದಲಿಗೆ, ನಿಮ್ಮ ಆಂಡ್ರಾಯ್ಡ್‌ ಅಥವಾ ಐಓಎಸ್‌ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ (Google Maps) ತೆರೆಯಿರಿ.
  • ನಿಮಗೆ ಬೇಕಾದ ಸ್ಥಳವನ್ನು ಹುಡುಕಿ ಅಥವಾ ನಿಮ್ಮ ಪ್ರಸ್ತುತ ಸ್ಥಳವನ್ನು ಗುರುತಿಸಿ. ಅದನ್ನು ಮ್ಯಾಪ್‌ ಮೇಲೆ ಟ್ಯಾಪ್‌ ಮಾಡುವುದರ ಮೂಲಕ ಗುರುತಿಸಬಹುದು.
  • ಸ್ಥಳ ಗುರುತಿಸಿದ ನಂತರ, ಪರದೆಯ ಮೇಲಿನ ಬಲ ಮೂಲೆಯಲ್ಲಿ ಲಭ್ಯವಿರುವ ಲೇಯರ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ.
  • ನಕ್ಷೆ ಪ್ರಕಾರಗಳು ಮತ್ತು ನಕ್ಷೆ ವಿವರಗಳಿಗಾಗಿ ನೀವು ಆಯ್ಕೆಗಳನ್ನು ಕಾಣಬಹುದು.
  • ನಕ್ಷೆಯ ವಿವರಗಳ ಅಡಿಯಲ್ಲಿ ಲಭ್ಯವಿರುವ ‘ಏರ್‌ ಕ್ವಾಲಿಟಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಈಗ, ಗೂಗಲ್‌ ಮ್ಯಾಪ್‌ ರಾಷ್ಟ್ರೀಯ AQI ನಿಂದ ಲಭ್ಯವಿರುವ ಗಾಳಿಯ ಗುಣಮಟ್ಟ ಸೂಚ್ಯಂಕವನ್ನು ನಿಮಗೆ ತೋರಿಸುತ್ತದೆ. ಅದು ತೋರಿಸುವ ಬಣ್ಣಗಳ ಮೂಲಕವೂ ನೀವು ಸುಲಭವಾಗಿ ಗುರುತಿಸಬಹುದು.

ಇದನ್ನೂ ಓದಿ : Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

(Air Pollution you can check air quality level using google maps)

Comments are closed.