ನವದೆಹಲಿ : ಭಾರತದ ಪ್ರಸಿದ್ದ ಟೆಲಿಕಾಂ ಸಂಸ್ಥೆ ಏರ್‌ಟೆಲ್ ತನ್ನ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಪ್ರೀಪೆಲ್ಡ್ ಆರಂಭಿಕ ದರವನ್ನು 49 ರೂಪಾಯಿಯಿಂದ ಯೋಜನೆಯನ್ನು ರದ್ದು ಪಡಿಸಿದ್ದು, 79 ರೂಪಾಯಿಗಳ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಟೆಲಿಕಾಂ ಸಂಸ್ಥೆಗಳ ದರ ಸಮರದಿಂದಾಗಿ ಗ್ರಾಹಕರು ಕಡಿಮೆ ದರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದರು. ಜಿಯೋ, ಬಿಎಸ್‌ಎನ್‌ಎಲ್, ಐಡಿಯಾ ವೊಡಾಪೋನ್ ಸಂಸ್ಥೆಗಳಿಗೆ ಸಡ್ಡು ಹೊಡೆಯುವ ಸಲುವಾಗಿಯೇ ಏರ್‌ಟೆಲ್ ತನ್ನ ಗ್ರಾಹಕರಿಗೆ 49 ರೂಪಾಯಿಯ ಪ್ರಿಪೇಯ್ಡ್ ಯೋಜನೆಯನ್ನು ಜಾರಿಗೆ ತಂದಿತ್ತು. ಗ್ರಾಹಕರಿಗೂ ವ್ಯಾಲಿಡಿಟಿ, ಕಾಲ್ ದರ ಸೇರಿದಂತೆ ಹಲವು ಅನುಕೂಲತೆಗಳನ್ನು ನೀಡಿತ್ತು.
ಆದ್ರೀಗ ಪ್ರಿಪೇಯ್ಡ್ ಕನಿಷ್ಠ ರಿಚಾರ್ಜ್ ಬೆಲೆಯಲ್ಲಿ ಏರ್‌ಟೆಲ್ ಸಾಕಷ್ಟು ಮಾರ್ಪಾಡು ಮಾಡಿದೆ. ಇದೀಗ ಹೊಸದಾಗಿ 49 ರೂಪಾಯಿ ಬದಲಾಗಿ 79 ರೂಪಾಯಿಯ ಪ್ರಿಪೇಯ್ಡ್ ಪ್ಲ್ಯಾನ್ ಒಂದನ್ನು ಜಾರಿಗೆ ತಂದಿದೆ. ಈ ಮೂಲಕ ಆರಂಭಿಕ ಪ್ರಿಪೇಯ್ಡ್ ದರ ಶೇ.೬೦ರಷ್ಟು ಏರಿಕೆ ಕಂಡಂತೆ ಆಗಿದೆ.
ಆದರೆ 79 ರೂಪಾಯಿಯ ಹೊಸ ಪ್ಲ್ಯಾನ್ ಗ್ರಾಹಕರಿಗೆ ಹಲವು ಲಾಭವನ್ನು ತರಲಿದೆ. ೨೮ ದಿನಗಳ ವ್ಯಾಲಿಡಿಟಿಯೊಂದಿಗೆ 64 ರೂಪಾಯಿಯ ಟಾಕ್‌ಟೈಮ್ ಮತ್ತು 200 ಎಂಬಿ ಡೇಟಾ ಲಭ್ಯವಾಗಲಿದೆ. ಈ ಮೂಲಕ ಏರ್‌ಟೆಲ್ ಗ್ರಾಹಕರ ಪಾಲಿಗೆ ಕೊಂಚ ದುಬಾರಿಯಾಗಿದೆ. ಆದರೆ ಏರ್‌ಟೆಲ್ ಬೆನ್ನಲ್ಲೇ ಜಿಯೋ, ಬಿಎಸ್‌ಎನ್‌ಎಲ್ ಹಾಗೂ ವೋಡಾಪೋನ್ ಐಡಿಯಾ ಕೂಡ ದರ ಏರಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.