Airtel Recharge Plan : ಅಗ್ಗದ ಪ್ಲಾನ್‌ನ ಬೆಲೆ ಹೆಚ್ಚಿಸಿದ ಏರ್‌ಟೆಲ್

ಟೆಲಿಕಾಂ ಆಪರೇಟರ್‌ (Telecom Operator) ಗಳಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್ (Bharti Airtel) ಮಾಸಿಕ ಯೋಜನೆಯ ಕನಿಷ್ಠ ರೀಚಾರ್ಜ್‌ನ (Airtel Recharge Plan) ಬೆಲೆಯನ್ನು ಹೆಚ್ಚಿಸುತ್ತಿದೆ. ಸದ್ಯ ಈ ಬದಲಾವಣೆಯು ಹರಿಯಾಣ ಮತ್ತು ಒಡಿಶಾ ರಾಜ್ಯಗಳಲ್ಲಿ ಅನ್ವಯಿಸುತ್ತದೆ. ಇದು ಪ್ಲಾನ್‌ ದರವನ್ನು ಶೇಕಡಾ 57ರಷ್ಟು ಹೆಚ್ಚಿಸುತ್ತಿದೆ. ಏರ್‌ಟೆಲ್‌ ಈ ಎರಡು ರಾಜ್ಯಗಳಲ್ಲಿ 99 ರೂ. ಗಳ ಪ್ಲಾನ್‌ ಅನ್ನು ಸ್ಥಗಿತಗೊಳಿಸಿ, ಕಡಿಮೆ ಪ್ರಿಪೇಯ್ಡ್‌ ರಿಚಾರ್ಜ್‌ ಪ್ಲಾನ್‌ ಅನ್ನು 155 ರೂ. ಗಳಿಗೆ ನೀಡಲಿದೆ. ಎರಡು ರಾಜ್ಯಗಳಲ್ಲಿ ಪರಿಷ್ಕರಿಸಿದ ಪ್ಲಾನ್‌ ದರವನ್ನು ಭವಿಷ್ಯದಲ್ಲಿ ಪ್ಯಾನ್-ಇಂಡಿಯಾದಲ್ಲಿ ಹೊರತರುವ ನಿರೀಕ್ಷೆಯಿದೆ.

ಏರ್‌ಟೆಲ್‌ ತನ್ನ ಬಳಕೆದಾರರಿಗೆ ಕನಿಷ್ಠ ರಿಚಾರ್ಜ್‌ ಪ್ಲಾನ್‌ ಅನ್ನು 99 ರೂ. ಗಳಿಗೆ ನೀಡುತ್ತಿತ್ತು. ಈ ಪ್ಲಾನ್‌ನ ಅಡಿಯಲ್ಲಿ 28 ದಿನಗಳ ವ್ಯಾಲಿಡಿಟಿ, ಪ್ರತಿ ಕರೆಗಳಿಗೆ 2.5 ಪೈಸೆ, ಮತ್ತು 200MB ಡಾಟಾ ವನ್ನು ನೀಡುತ್ತಿತ್ತು. ಆದರೆ ಇನ್ನು ಮುಂದೆ ಈ ಪ್ಲಾನ್‌ ಲಭ್ಯವಿರುವುದಿಲ್ಲ. ಅದರ ಬದಲಿಗೆ ಹೊಸದಾದ 155 ರೂ. ಗಳ ಕನಿಷ್ಠ ರಿಚಾರ್ಜ್‌ ಯೋಜನೆ ನೀಡಲಿದೆ ಎಂದು ಏರ್‌ಟೆಲ್‌ನ ವೆಬ್‌ಸೈಟ್‌ ಹೇಳುತ್ತಿದೆ.

ಸಂಶೋಧನಾ ವಿಶ್ಲೇಷಕರಾದ ಸಂಜೇಶ್ ಜೈನ್ ಮತ್ತು ಆಕಾಶ್ ಕುಮಾರ್ ICICI ಸೆಕ್ಯುರಿಟೀಸ್‌ನ ವರದಿಯಲ್ಲಿ “28 ದಿನಗಳ ವ್ಯಾಲಿಡಿಟಿಯಿರುವ ಮೊದಲಿನ 99 ರೂ.ಗಳ ರೀಚಾರ್ಜ್ ಪ್ಲಾನ್‌ 99 ರೂ ಗಳ ಫುಲ್‌ ಟಾಕ್-ಟೈಮ್ ಮೌಲ್ಯ ಮತ್ತು 200 MB ಯ ಅತ್ಯಂತ ಸೀಮಿತ ಡೇಟಾ ಹೊಂದಿತ್ತು.ಇದರ ಬದಲಿಗೆ ಈಗ ಹೊಸದಾಗಿ ಹೊರತಂದಿರುವ 155 ರೂ.ಗಳ ಕನಿಷ್ಠ ರಿಚಾರ್ಜ್ ಪ್ಲಾನ್‌, ಅನಿಯಮಿತ ಧ್ವನಿ ಕರೆ, 1GB ಡಾಟಾ ಮತ್ತು 300 SMS ನೀಡುತ್ತದೆ. ಹೊಸ ಕನಿಷ್ಠ ರಿಚಾರ್ಜ್ ಪ್ಲಾನ್‌ ಮೌಲ್ಯವು 57 ಪ್ರತಿಶತದಷ್ಟು ಹೆಚ್ಚಳವಾಗಿದೆ.

ಏರ್‌ಟೆಲ್‌ನ ಹೊಸ 155 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಏನೇನಿದೆ?
ಏರ್‌ಟೆಲ್‌ನ ಹೊಸ 155 ರೂ. ಗಳ ಪ್ಲಾನ್, ಅನಿಯಮಿತ ಕರೆ, 1 GB ಡಾಟಾ ಮತ್ತು 300 SMS ಗಳನ್ನು ನೀಡುತ್ತದೆ. ಈ ಪ್ಲಾನ್‌ 24 ದಿನಗಳ ವ್ಯಾಲಿಡಿಟಿ ನೀಡುತ್ತದೆ. ಇದು ಹೆಚ್ಚುವರಿ ಪ್ರಯೋಜನಗಳಾದ ಉಚಿತ ವಿಂಕ್ ಮ್ಯೂಸಿಕ್ ಮತ್ತು ಹೆಲೋಟ್ಯೂನ್ಸ್ ನೀಡುತ್ತದೆ. 28 ದಿನಗಳ ಮಾಸಿಕ 99 ರೂ. ಗಳ ಕನಿಷ್ಠ ರಿಚಾರ್ಜ್ ಯೋಜನೆಗೆ ಹೋಲಿಸಿದರೆ, 155 ರೂ. ಗಳ ಪ್ಲಾನ್‌ ಕಡಿಮೆ ವ್ಯಾಲಿಡಿಟಿ ಹೊಂದಿದೆ. ಅಲ್ಲದೆ 57 ಪ್ರತಿಶತ ಹೆಚ್ಚು ದುಬಾರಿಯಾಗಿದೆ. ಅದಲ್ಲದೇ ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡ ಗ್ರಾಹಕರು 4 ದಿನ ಮುಂಚಿತವಾಗಿಯೇ ರಿಚಾರ್ಜ್‌ ಮಾಡಬೇಕಾಗುತ್ತದೆ.

ವರದಿಗಳ ಪ್ರಕಾರ, ಏರ್‌ಟೆಲ್ ಹೊಸ ಯೋಜನೆಯ ಪ್ರಯೋಗವನ್ನು ಹರಿಯಾಣ ಮತ್ತು ಒಡಿಶಾದಲ್ಲಿ ಪ್ರಾರಂಭಿಸಿದೆ. ಅದರ ಫಲಿತಾಂಶಗಳ ಆಧಾರದ ಮೇಲೆ ಅದೇ ಯೋಜನೆಯನ್ನು ಪ್ಯಾನ್ ಇಂಡಿಯಾದಲ್ಲಿ ಹೊರತರುವ ನಿರೀಕ್ಷೆಯಿದೆ. ಏರ್‌ಟೆಲ್, ಎಲ್ಲಾ 28-ದಿನಗಳ ವ್ಯಾಲಿಡಿಟಿಯ ಕರೆ ಮಾಡುವ, ಎಸ್‌ಎಂಎಸ್ ಮತ್ತು 155 ರೂ. ಗಿಂತ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ಸ್ಥಗಿತಗೊಳಿಸುವ ನಿರೀಕ್ಷೆಯಿದೆ. ಹೀಗಾದಲ್ಲಿ ಬಳಕೆದಾರರು ಎಸ್‌ಎಂಎಸ್ ಸೇವೆಗಳನ್ನು ಪಡೆಯಲು 155 ರೂ. ನೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ.

ಇದಕ್ಕೂ ಮೊದಲು ಅಂದರೆ 2021 ರಲ್ಲಿ, ಏರ್‌ಟೆಲ್ ಮಾರುಕಟ್ಟೆ ಪರೀಕ್ಷೆಗಾಗಿ ಇದೇ ರೀತಿಯಲ್ಲಿ ರಿಚಾರ್ಜ್‌ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಿತ್ತು. ಆಗ ಅದು ಕನಿಷ್ಠ ರೀಚಾರ್ಜ್ ಕೊಡುಗೆಯನ್ನು 79 ರೂ. ದಿಂದ 99 ರೂ. ಗಳಿಗೆ ಹೆಚ್ಚಿಸಿತ್ತು.

ಇದನ್ನೂ ಓದಿ : Safest Cars In India : 5 ಸ್ಟಾರ್‌ ರೇಟಿಂಗ್‌ ಪಡೆದಿರುವ 5 ಸುರಕ್ಷಿತ ಕಾರುಗಳು

ಇದನ್ನೂ ಓದಿ : SBI Banking Services : ಹಿರಿಯ ನಾಗರಿಕರು ವಾಟ್ಸಾಪ್‌ನಲ್ಲೇ ಪಡೆಯಬಹುದು ಪಿಂಚಣಿ ಸ್ಲಿಪ್‌

(Airtel Recharge Plan, cheapest plan price will increases from rs 99 to rs 155)

Comments are closed.